ಮತಾಂತರದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪ್ರವೇಶಿಸಿದ ನಂತರವೂ ವ್ಯಕ್ತಿಯ ಜಾತಿಯು ಶಾಶ್ವತವಾಗಿರುತ್ತದೆ ಎಂಬ ನಿರ್ಣಯವನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಮೀಸಲಾತಿಗೆ ಸಂಬಂಧಿಸಿದ ಪ್ರಕರಣದ ಸಂದರ್ಭದಲ್ಲಿ ನೀಡಿದೆ.

ಜಿಹಾದಿ ಉಗ್ರರು ಮದರಸಾಗಳಲ್ಲಿ ಸಿದ್ಧರಾಗುವುದರಿಂದ, ನನಗೆ ಅವಕಾಶ ಸಿಕ್ಕಿದರೆ, ಎಲ್ಲಾ ಮದರಸಾಗಳನ್ನು ಮುಚ್ಚಿ ಬಿಡುತ್ತೇನೆ ! – ಉತ್ತರಪ್ರದೇಶದ ರಾಜ್ಯ ಮಂತ್ರಿ ಠಾಕೂರ್ ರಘುರಾಜ ಸಿಂಹ

ಉತ್ತರಪ್ರದೇಶದ ಸರಕಾರದಿಂದ ಮದರಸಾಗಳಿಗೆ ನೀಡುವ ಅನುದಾನವನ್ನು ಮೊದಲು ನಿಲ್ಲಿಸಬೇಕು. ಅದಕ್ಕಾಗಿ ರಘುರಾಜ ಸಿಂಹ ಇವರು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕೋರೋನಾದ ರೋಗಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಪ್ಲಾಟ್‍ಫಾರ್ಮ ಟಿಕೆಟ್ ಬೆಲೆ 50 ರೂಪಾಯಿಂದ ಮತ್ತೆ 10 ರೂಪಾಯಿಗೆ ಇಳಿಕೆ !

ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ರೈಲ್ವೆ ಇಲಾಖೆಯು ಪ್ಲಾಟ್‍ಫಾರ್ಮ ಟಿಕೆಟಿನ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಕೊರೋನಾ ಸಮಯದಲ್ಲಿ ರೈಲ್ವೆಯಿಂದ ಪ್ಲಾಟ್‍ಫಾರ್ಮ ಟಿಕೆಟ್‍ನ ಬೆಲೆಯನ್ನು ಹೆಚ್ಚಿಸಲಾಗಿತ್ತು

ಶ್ರಿಕೃಷ್ಣಜನ್ಮಭೂಮಿಯ ಈದ್ಗಾ ಮಸೀದಿಯಲ್ಲಿ ನಡೆಯುವ ನಮಾಜುಪಠಣವನ್ನು ನಿಲ್ಲಿಸಿ !

ಕಳೆದ ಕೆಲವು ದಿನಗಳಿಂದ ಇಲ್ಲಿ ದಿನದಲ್ಲಿ 5 ಸಾರಿ ನಮಾಜುಪಠಣ ಮಾಡಲಾಗುತ್ತಿದೆ. ಹೀಗೆ ಮಾಡಿ ಇಲ್ಲಿಯ ಸೌಹಾರ್ದ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಆದಕಾರಣ ಇಲ್ಲಿ ನಡೆಯುವ ನಮಾಜುಪಠಣ ನಿಲ್ಲಿಸಬೇಕೆಂದು `ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ’ಯ ಅಧ್ಯಕ್ಷ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾಧಿಕಾರಿಗೆ ಮನವಿ ನೀಡಿದರು

ಉತ್ತರಪ್ರದೇಶದಲ್ಲಿ ಮಹಾಪುರುಷರ ಜಯಂತಿ ಮತ್ತು ಮಹಾಶಿವರಾತ್ರಿಯಂದು ಕಸಾಯಿಖಾನೆಗಳನ್ನು ತೆರೆಯಲು ಮತ್ತು ಮಾಂಸ ಮಾರಾಟಕ್ಕೆ ನಿಷೇಧ

ಅಹಿಂಸೆಯ ಸಂದೇಶವನ್ನು ಸಾರಿದ ಮಹಾಪುರುಷರ ಜಯಂತಿಯನ್ನು `ಅಹಿಂಸಾ ದಿನ’ ಎಂದು ಆಚರಿಸುವಂತೆಯೂ ಸೂಚಿಸಲಾಗಿದೆ.

ಅಮೆಜಾನ್ ಮೇಲೆ ಕಠಿಣ ಕ್ರಮ ಕೈಗೊಳ್ಳಿ ! – ‘ಕ್ಯಾಟ್’ನ ಬೇಡಿಕೆ

ಇದನ್ನೇಕೆ ಆಗ್ರಹಿಸಬೇಕಾಗುತ್ತದೆ ? ಪೊಲೀಸರು ಅಥವಾ ಆಡಳಿತದಿಂದ ಏಕೆ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಗಾಂಜಾ ಮತ್ತು ಬಾಂಬ್ ತಯಾರಿಸುವ ವಸ್ತುಗಳು ಮಾರಾಟ ಮಾಡಲು ಅವರಿಗೆ ಅನುಮತಿ ಇದೆಯೇ ?

ದೇಶದ ಜನಸಂಖ್ಯೆಯಲ್ಲಿ ಇದೇ ಪ್ರಥಮ ಬಾರಿಗೆ 1 ಸಾವಿರ ಪುರುಷರ ಅನುಪಾತದಲ್ಲಿ 1 ಸಾವಿರದ 20 ಮಹಿಳೆಯರು !

ಈ ಮಾಹಿತಿಯನ್ನು ‘ನ್ಯಾಶನಲ್ ಫ್ಯಾಮಿಲಿ ಹೆಲ್ತ ಸರ್ವೆ-5’ ಇದರ ಅಂಕಿಅಂಶಗಳಲ್ಲಿ ನೀಡಲಾಗಿದೆ. ಈ ಹಿಂದೆ 2015-16 ನೇ ಸಾಲಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ 1 ಸಾವಿರ ಪುರುಷರ ಅನುಪಾತವು 991 ಮಹಿಳೆಯರಿದ್ದರು.

ಕೇರಳ ಉಚ್ಚ ನ್ಯಾಯಾಲಯದಿಂದ `ಲಲಿತ ಕಲಾ ಅಕಾಡೆಮಿ’ಗೆ ನೋಟಿಸ್

ಕೇರಳದ ‘ಲಲಿತ ಕಲಾ ಅಕಾಡೆಮಿ’ಯಿಂದ ದೇಶ, ಹಿಂದೂ ಧರ್ಮ ಮತ್ತು ಗೋವಿನ ಅಪಮಾನ ಮಾಡುವ ವ್ಯಂಗ್ಯಚಿತ್ರಕ್ಕೆ ಪ್ರಶಸ್ತಿ ನೀಡಿರುವ ಪ್ರಕರಣ

ಬಲ್ಲಭಗಡ್ (ಹರಿಯಾಣಾ) ಇಲ್ಲಿಯ ಸರಕಾರಿ ಭೂಮಿಯಲ್ಲಿನ ಅಕ್ರಮ ಮಜಾರನ್ನು ಧ್ವಂಸಗೈದ ಹಿಂದುತ್ವನಿಷ್ಠರು !

ಆಡಳಿತಕ್ಕೆ ಮನವಿ ನೀಡಿದರೂ ಕ್ರಮ ಕೈಗೊಳ್ಳದಿದ್ದರೆ ಇಂತಹ ಆಡಳಿತದಿಂದ ಏನು ಪ್ರಯೋಜನ ? ಸರಕಾರಿ ಜಾಗದಲ್ಲಿ ಅಕ್ರಮ ಮಜಾರ ನಿರ್ಮಾಣವಾಗುವವರೆಗೆ ಆಡಳಿತ ನಿದ್ದೆ ಮಾಡುತ್ತಿತ್ತೇ ?

ಮವು (ಉತ್ತರಪ್ರದೇಶ)ದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಇವರ ಪುತ್ಥಳಿ ಭಗ್ನ

ಸರಾಯ ಲಖಂಸಿ ಪ್ರದೇಶದ ಖಾನ್‍ಪುರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಇವರ ಪುತ್ಥಳಿಯು ಭಗ್ನಾವಸ್ಥೆಯಲ್ಲಿರುವುದು ಕಂಡು ಬಂದಿದೆ. ಅನಂತರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ನವೆಂಬರ್ 23 ರಂದು ಈ ಘಟನೆ ನಡೆದಿದೆ.