ದೇಶದ ಜನಸಂಖ್ಯೆಯಲ್ಲಿ ಇದೇ ಪ್ರಥಮ ಬಾರಿಗೆ 1 ಸಾವಿರ ಪುರುಷರ ಅನುಪಾತದಲ್ಲಿ 1 ಸಾವಿರದ 20 ಮಹಿಳೆಯರು !

ನವ ದೆಹಲಿ : ಭಾರತದಲ್ಲಿ ಇದೇ ಮೊದಲ ಬಾರಿಗೆ ಒಟ್ಟು ಜನಸಂಖ್ಯೆಯಲ್ಲಿ ಪ್ರತಿ 1 ಸಾವಿರ ಪುರುಷರ ಅನುಪಾತದಲ್ಲಿ ಮಹಿಳೆಯರ ಪ್ರಮಾಣ 1 ಸಾವಿರದ 20 ರಷ್ಟಾಗಿದೆ. ಈ ಮಾಹಿತಿಯನ್ನು ‘ನ್ಯಾಶನಲ್ ಫ್ಯಾಮಿಲಿ ಹೆಲ್ತ ಸರ್ವೆ-5′ ಇದರ ಅಂಕಿಅಂಶಗಳಲ್ಲಿ ನೀಡಲಾಗಿದೆ. ಈ ಹಿಂದೆ 2015-16 ನೇ ಸಾಲಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ 1 ಸಾವಿರ ಪುರುಷರ ಅನುಪಾತವು 991 ಮಹಿಳೆಯರಿದ್ದರು. ಗ್ರಾಮದಲ್ಲಿ ಪ್ರತಿ 1 ಸಾವಿರ ಪುರುಷರ ಅನುಪಾತದಲ್ಲಿ 1 ಸಾವಿರದ 37 ಮಹಿಳೆಯರಿದ್ದಾರೆ. ನಗರಗಳಲ್ಲಿ ಈ ಅನುಪಾತವು ಕೇವಲ 985 ಆಗಿದೆ. 2015-16ನೇ ಸಾಲಿನಲ್ಲಿ ಶೇ. 48.5 ರಷ್ಟು ಕುಟುಂಬಗಳು ಸ್ವಂತ ಆಧುನಿಕ ಶೌಚಾಲಯಗಳನ್ನು ಹೊಂದಿದ್ದವು. 2019-21 ರಲ್ಲಿ ಈ ಸಂಖ್ಯೆ ಶೇ.70.2 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಶೇ. 96.8 ರಷ್ಟು ಮನೆಗಳಿಗೆ ವಿದ್ಯುತ್ ತಲುಪಿದೆ.