ಅಮೆಜಾನ್ ಮೇಲೆ ಕಠಿಣ ಕ್ರಮ ಕೈಗೊಳ್ಳಿ ! – ‘ಕ್ಯಾಟ್’ನ ಬೇಡಿಕೆ

‘ಅಮೆಜಾನ್’ನಿಂದ ಗಾಂಜಾ ಮತ್ತು ಬಾಂಬ್ ನಿರ್ಮಿತಿಯ ವಸ್ತುಗಳ ಮಾರಾಟ ಪ್ರಕರಣ

ದೇಶದಲ್ಲಿ 500 ಕ್ಕಿಂತಲೂ ಹೆಚ್ಚಿನ ಜಿಲ್ಲೆಗಳಲ್ಲಿ 1 ಸಾವಿರದ 200 ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ಆಂದೋಲನ

ಇದನ್ನೇಕೆ ಆಗ್ರಹಿಸಬೇಕಾಗುತ್ತದೆ ? ಪೊಲೀಸರು ಅಥವಾ ಆಡಳಿತದಿಂದ ಏಕೆ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಗಾಂಜಾ ಮತ್ತು ಬಾಂಬ್ ತಯಾರಿಸುವ ವಸ್ತುಗಳು ಮಾರಾಟ ಮಾಡಲು ಅವರಿಗೆ ಅನುಮತಿ ಇದೆಯೇ ?- ಸಂಪಾದಕರು 

`ಕ್ಯಾಟ್’ ಅಂದರೆ ಅಖಿಲ ಭಾರತೀಯ ವ್ಯಾಪಾರಿ ಮಹಾಸಂಘ (`ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್’)

ನವ ದೆಹಲಿ – ಅಮೇರಿಕಾದಲ್ಲಿನ ದೈತ್ಯ ಕಂಪನಿಯಾದ `ಅಮೆಜಾನ್’ನಿಂದ ಗಾಂಜಾ ಮತ್ತು ಬಾಂಬ್ ತಯಾರಿಸುವ ಸಾಧನಸಾಮಗ್ರಿಗಳು, ದೇಶದಲ್ಲಿ ನಿಷೇಧ ಹೇರಿರುವ ಕೆಲವು ರಾಸಾಯನಿಕಗಳು ಗ್ರಾಹಕರಿಗೆ ಸಹಜವಾಗಿ ಲಭ್ಯವಾಗುತ್ತಿರುವುದು ಬೆಳಕಿಗೆ ಬಂದಿರುವುದರಿಂದ ಈ ಕಂಪನಿಯ ಮೇಲೆ ನಿಷೇಧ ಹೇರುವ ಬೇಡಿಕೆ ಮಾಡಲಾಗುತ್ತಿದೆ. ಇದರಲ್ಲಿ ಈಗ ದೇಶದ `ಕಾನ್ಫೆಡರೇಶನ್ ಅಫ್ ಆಲ್ ಇಂಡಿಯ ಟ್ರೇಡರ್ಸ್’ (ಕ್ಯಾಟ್)ನವರು ಈ ಕಂಪನಿಯ ವಿರುದ್ಧ ನವೆಂಬರ್ 24 ರಂದು ದೇಶದ ಬೇರೆ ಬೇರೆ ರಾಜ್ಯದಲ್ಲಿ 500 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 1 ಸಾವಿರದ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಂದೋಲನಗಳನ್ನು ನಡೆಸಿದ್ದಾರೆ. `ಅಮೆಜಾನ್’ನವರು ದೇಶದ ಕಾನೂನು ಮತ್ತು ನಿಯಮಗಳಿಗನುಸಾರ ವ್ಯವಹಾರ ಮಾಡಬೇಕು ಇಲ್ಲದಿದ್ದರೆ ಭಾರತದಿಂದ ಹೊರಟು ಹೋಗಬೇಕು’, ಎಂದು ಎಚ್ಚರಿಕೆ `ಕ್ಯಾಟ್’ ನೀಡಿದೆ. `ದೇಶದಲ್ಲಿ ಸಾಮಾನ್ಯರಿಗಾಗಿ ಮತ್ತು ದೊಡ್ಡ ಕಂಪನಿಗಳಿಗಾಗಿ ಬೇರೆಬೇರೆ ಕಾನೂನು ಇದೆಯೇ ?’ ಎಂದು ಈ ಸಂಘಟನೆಯು ಪ್ರಶ್ನಿಸಿದೆ. `ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ದೇಶದಲ್ಲಿನ ವ್ಯಾಪಾರಿಗಳು `ಭಾರತ ವ್ಯಾಪಾರ ಬಂದ ಮಾಡುವರು’ ಎಂದೂ ಎಚ್ಚರಿಕೆ ನೀಡಿದೆ.