ಶ್ರಿಕೃಷ್ಣಜನ್ಮಭೂಮಿಯ ಈದ್ಗಾ ಮಸೀದಿಯಲ್ಲಿ ನಡೆಯುವ ನಮಾಜುಪಠಣವನ್ನು ನಿಲ್ಲಿಸಿ !

`ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ’ಯಿಂದ ಜಿಲ್ಲಾಧಿಕಾರಿಗಳಿಗೆ ಆಗ್ರಹ

`ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ’ಯ ಅಧ್ಯಕ್ಷ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾಧಿಕಾರಿಗೆ ಮನವಿ ನೀಡುವಾಗ

ಮಥುರಾ (ಉತ್ತರಪ್ರದೇಶ) – ಇಲ್ಲಿಯ ಶ್ರೀಕೃಷ್ಣಜನ್ಮಭೂಮಿ ಸ್ಥಳದಲ್ಲಿನ ಈದ್ಗಾ ಮಸೀದಿಯನ್ನು ಭಗವಾನ್ ಶ್ರೀಕೃಷ್ಣನ ಮೂಲ ಗರ್ಭಗೃಹದ ಮೇಲೆ ಕಟ್ಟಲಾಗಿದೆ. ಔರಂಗಜೇಬನು ಇಲ್ಲಿಯ ಶ್ರೀಕೃಷ್ಣನ ದೇವಸ್ಥಾನವನ್ನು ಕೆಡವಿ ಈದ್ಗಾ ಮಸೀದಿ ಕಟ್ಟಿದನು. ಅಲ್ಲಿಂದ ಈವರೆಗೆ ಎಂದಿಗೂ ನಮಾಜುಪಠಣ ನಡೆದಿಲ್ಲ; ಆದರೆ ಕಳೆದ ಕೆಲವು ದಿನಗಳಿಂದ ಇಲ್ಲಿ ದಿನದಲ್ಲಿ 5 ಸಾರಿ ನಮಾಜುಪಠಣ ಮಾಡಲಾಗುತ್ತಿದೆ. ಹೀಗೆ ಮಾಡಿ ಇಲ್ಲಿಯ ಸೌಹಾರ್ದ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲಾಗುತ್ತಿದೆ. ಆದಕಾರಣ ಇಲ್ಲಿ ನಡೆಯುವ ನಮಾಜುಪಠಣ ನಿಲ್ಲಿಸಬೇಕೆಂದು `ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ’ಯ ಅಧ್ಯಕ್ಷ ನ್ಯಾಯವಾದಿ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಆ ಸಮಯದಲ್ಲಿ ಮಹಾಮಂಡಲೇಶ್ವರ ಚಿತ್ತ ಪ್ರಕಾಶನಾನಂದ, ಸಚ್ಚಿದಾನಂದ ದಾಸ, ದೇವಾನಂದ ಮಹಾರಾಜ, ಸುರೇಶಾನಂದ ಪರಮ ಹಂಸ, ಸ್ವಾಮಿ ಬ್ರಹ್ಮಚೈತನ್ಯ ಮನಮೋಹನದಾಸ, ಪ್ರದೀಪಾನಂದ ಮಹಾರಾಜ, ನ್ಯಾಯವಾದಿ ಸಂಗೀತಾ ಶರ್ಮಾ ಮತ್ತು ಜಿತೇಂದ್ರ ಸಿಂಹ ಉಪಸ್ಥಿತರಿದ್ದರು.

ನ್ಯಾಯವಾದಿ ಮಹೇಂದ್ರ ಪ್ರತಾಪ್ ಸಿಂಹ ಇವರು ಮಾತನಾಡುತ್ತಾ, ಔರಂಗಜೇಬನು ಶ್ರೀಕೃಷ್ಣ ದೇವಸ್ಥಾನದಲ್ಲಿ ಈದ್ಗಾ ಮಸೀದಿ ಕಟ್ಟಿದ ನಂತರ ಅಲ್ಲಿಯ ಗೋಡೆಗಳ ಮೇಲೆ ಈಗಲೂ ಶಂಖ ಚಕ್ರ ಇತ್ಯಾದಿ ಚಿಹ್ನೆಗಳು ಸ್ಪಷ್ಟವಾಗಿ ಕಾಣಿಸುತ್ತಿತ್ತು; ಆದರೆ ಈಗ ಮುಸ್ಲಿಮರಿಂದ ಪ್ರಯತ್ನಪೂರ್ವಕವಾಗಿ ಈ ಚಿಹ್ನೆಗಳನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಇಲ್ಲಿ ನಡೆಯುವ ನಮಾಜುಪಠಣ ನಿಲ್ಲಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಡಿಸೆಂಬರ್ 6 ರಂದು ಈದ್ಗಾ ಮಸೀದಿಗೆ ಹೋಗಿ ಭಗವಾನ್ ಶ್ರೀಕೃಷ್ಣನಿಗೆ ಅಭಿಷೇಕ ಮಾಡುವೆವು !

ಇನ್ನೊಂದೆಡೆ ಅಖಿಲ ಭಾರತ ಹಿಂದೂ ಮಹಾಸಭೆಯು ಬರುವ ಡಿಸೆಂಬರ್ 6 ರಂದು ಈದ್ಗಾ ಮಸೀದಿಗೆ ಹೋಗಿ ಭಗವಾನ್ ಶ್ರೀಕೃಷ್ಣನಿಗೆ ಅಭಿಷೇಕ ಮಾಡುವ ನಿರ್ಧಾರ ಕೈಗೊಂಡಿದೆ. ಇಲ್ಲಿ ಯಾವುದೇ ವಿಧ್ವಂಸ ಮಾಡದೇ ಮತ್ತು ಶಾಂತಿಯಿಂದ ಅಭಿಷೇಕ ಮಾಡಲಾಗುವುದು, ಎಂದು ಹಿಂದೂ ಮಹಾಸಭೆಯು ಸ್ಪಷ್ಟಪಡಿಸಿದೆ.