ಕೋರೋನಾದ ರೋಗಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಪ್ಲಾಟ್‍ಫಾರ್ಮ ಟಿಕೆಟ್ ಬೆಲೆ 50 ರೂಪಾಯಿಂದ ಮತ್ತೆ 10 ರೂಪಾಯಿಗೆ ಇಳಿಕೆ !

ನವ ದೆಹಲಿ – ದೇಶದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ರೈಲ್ವೆ ಇಲಾಖೆಯು ಪ್ಲಾಟ್‍ಫಾರ್ಮ ಟಿಕೆಟಿನ ದರವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಕೊರೋನಾ ಸಮಯದಲ್ಲಿ ರೈಲ್ವೆಯಿಂದ ಪ್ಲಾಟ್‍ಫಾರ್ಮ ಟಿಕೆಟ್‍ನ ಬೆಲೆಯನ್ನು ಹೆಚ್ಚಿಸಲಾಗಿತ್ತು, ಈ ಟಿಕೆಟ್ ಹತ್ತು ರೂಪಾಯಿಂದ ಐವತ್ತು ರೂಪಾಯಿವರೆಗೆ ಏರಿಸಲಾಗಿತ್ತು; ಆದರೆ ಈಗ ಮತ್ತೆ 50 ರೂಪಾಯಿಂದ 10 ರೂಪಾಯಿಗೆ ಮಾಡಲಾಗಿದೆ. ಮಧ್ಯ ರೈಲ್ವೆಯು ಟ್ವಿಟ್ ಮೂಲಕ ಈ ವಿಷಯದ ಮಾಹಿತಿ ನೀಡಿದೆ. ಕೊರೊನಾ ಕಾಲದಲ್ಲಿ ಪ್ಲಾಟ್‍ಫಾರ್ಮ್‍ನಲ್ಲಿ ಪ್ರಯಾಣಿಕರ ಗುಂಪು ಹೆಚ್ಚಾಗದಿರಲಿ, ಅದಕ್ಕಾಗಿ ಟಿಕೆಟ್ ಬೆಲೆ ಹೆಚ್ಚಿಸುವ ನಿರ್ಣಯ ತೆಗೆದುಕೊಂಡಿತ್ತು.