ಮವು (ಉತ್ತರಪ್ರದೇಶ) – ಇಲ್ಲಿಯ ಸರಾಯ ಲಖಂಸಿ ಪ್ರದೇಶದ ಖಾನ್‍ಪುರ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಇವರ ಪುತ್ಥಳಿಯು ಭಗ್ನಾವಸ್ಥೆಯಲ್ಲಿರುವುದು ಕಂಡು ಬಂದಿದೆ. ಅನಂತರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ನವೆಂಬರ್ 23 ರಂದು ಈ ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ ಡಾ. ಅಂಬೇಡ್ಕರ್ ಪುತ್ಥಳಿಯ ಮೇಲೆ ಇಟ್ಟಿಗೆ ಎಸೆಯಲಾಯಿತು. ಆದ್ದರಿಂದ ಪುತ್ಥಳಿಯ ಮುಖ ಹಾಗೂ ಕೈ ಮುರಿದಿದೆ.
UP: Dr. BR Ambedkar’s statue found desecrated in Khanpur; villagers stage protests, block roads#UttarPradesh https://t.co/QHKuGD2fKI
— India TV (@indiatvnews) November 24, 2021
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಾಣಿಪುರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಪ್ರಕರಣದ ಮಾಹಿತಿ ತಿಳಿದ ತಕ್ಷಣ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಅವರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪೊಲೀಸರು ಡಾ. ಅಂಬೇಡ್ಕರ್ ಇವರ ಹೊಸ ಪುತ್ಥಳಿಯನ್ನು ಸ್ಥಾಪನೆ ಮಾಡಿದ ನಂತರ ಗ್ರಾಮಸ್ಥರು ಆಂದೋಲನ ಹಿಂಪಡೆದರು.