‘ಕೋವಿಶಿಲ್ಡ’ ಲಸಿಕೆಯ ಪರಿಣಾಮವು ೩ ತಿಂಗಳಲ್ಲಿ ಕಡಿಮೆಯಾಗುತ್ತಿರುವುದರಿಂದ ಬೂಸ್ಟರ್ ಡೋಸ್ ಆವಶ್ಯಕ ! – ಸಂಶೋಧಕರ ನಿಷ್ಕರ್ಷ

‘ಲಾಂಸೆಟ್’ ಈ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ‘ಯಾರು ಕೊರೋನಾ ಪ್ರತಿಬಂಧಕ ‘ಕೊವಿಶಿಲ್ಡ’ನ ಎರಡು ಡೋಸ್ ತೆಗೆದುಕೊಂಡಿದ್ದಾರೆ, ಅವರಿಗೆ ಕೊರೋನಾದ ಗಂಭೀರ ಸೋಂಕಿನಿಂದ ರಕ್ಷಿಸಲು ಬೂಸ್ಟರ್‌ನ ಪ್ರಮಾಣವನ್ನು ಹೆಚ್ಚಿಸುವುದು ಅಗತ್ಯವಿದೆ.

ಕೇರಳದಲ್ಲಿ ಮತಾಂಧ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಪದಾಧಿಕಾರಿಯ ಹತ್ಯೆಯ ಪ್ರಕರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಬ್ಬರ ಬಂಧನ !

ಡಿಸೆಂಬರ್ ೧೮ ರಂದು ರಾತ್ರಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್. ಡಿ. ಪಿ. ಐ.)ದ ರಾಜ್ಯ ಸಚಿವರಾದ ಕೆ.ಎಸ್. ಶಾನರವರ ಹತ್ಯೆಯ ಪ್ರಕರಣದಲ್ಲಿ ಕೇರಳ ಪೊಲೀಸರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಸಾದ ಮತ್ತು ರಥೀಶ ಎಂಬ ಇಬ್ಬರು ಸ್ವಯಂಸೇವಕರನ್ನು ಬಂಧಿಸಿದ್ದಾರೆ.

ಭಾಜಪ ಪ್ರವೇಶಿಸಿದ ಶಿವಸೇನೆಯ ತಮಿಳುನಾಡು ರಾಜ್ಯಾಧ್ಯಕ್ಷ ರಾಧಾಕೃಷ್ಣನ್

ಶಿವಸೇನೆಯ ತಮಿಳುನಾಡು ರಾಜ್ಯಾಧ್ಯಕ್ಷರ ಶ್ರೀ. ರಾಧಾಕೃಷ್ಣನ್ ಇವರೊಂದಿಗೆ ಇತರ ಸದಸ್ಯರು ಭಾಜಪಗೆ ಪ್ರವೇಶ ಮಾಡಿದರು.

ಮುಸಲ್ಮಾನರು ಬಹುಸಂಖ್ಯಾತರಾಗಿರುವ ಲಕ್ಷದ್ವೀಪದಲ್ಲಿನ ಶಾಲೆಗಳಿಗೆ ಈಗ ಶುಕ್ರವಾರದ ಬದಲು ರವಿವಾರದ ರಜೆ ನೀಡಲಾಗುವುದು ! – ಸರಕಾರದ ನಿರ್ಣಯ

ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವ ಲಕ್ಷದ್ವೀಪದಲ್ಲಿ ಸರಕಾರವು ಅಲ್ಲಿನ ಶಾಲೆಗಳಿಗೆ ಶುಕ್ರವಾರದ ಬದಲು ಇತರ ರಾಜ್ಯಗಳಂತೆ ರವಿವಾರದಂದು ಸಾಪ್ತಾಹಿಕ ರಜೆಯನ್ನು ನೀಡಲು ನಿರ್ಧರಿಸಿದೆ.

ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಶ್ರೀ. ವಿವೇಕ ಸುಬ್ಬಾ ರೆಡ್ಡಿ ಹಾಗೂ ವಕೀಲರ ಸಂಘದ ಕಾರ್ಯಕಾರಿ ಸಮಿತಿಗೆ ನ್ಯಾಯವಾದಿ ಅಮೃತೇಶ ಎನ್.ಪಿ. ಆಯ್ಕೆ

ಬೆಂಗಳೂರು ವಕೀಲರ ಸಂಘದ ಚುನಾವಣೆಯು ಡಿಸೆಂಬರ್ ೧೯ ರಂದು ನಡೆಯಿತು. ಇದರಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ವಿವೇಕ ರೆಡ್ಡಿ ಹಾಗೂ ಸಂಘದ ಕಾರ್ಯಕಾರಿ ಸಮಿತಿಗೆ ನ್ಯಾಯವಾದಿ ಅಮೃತೇಶ ಎನ್.ಪಿ. ಆಯ್ಕೆಯಾಗಿದ್ದಾರೆ.

ಯೋಗಿ ಆದಿತ್ಯನಾಥ ಇವರು 2022 ರಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಯಲ್ಲಿ ಸಹಜವಾಗಿ ಜಯಗಳಿಸುವರು !- ಪಿ.ವಿ.ಆರ್. ನರಸಿಂಹ ರಾವ, ಅಮೇರಿಕೆಯಲ್ಲಿರುವ ಪ್ರಸಿದ್ಧ ಜ್ಯೋತಿಷಿ

2030-31 ರಲ್ಲಿ ವಿಶ್ವಯುದ್ಧ ಜರುಗಲಿದ್ದು, ಯೋಗಿ ಆದಿತ್ಯನಾಥರು ಭಾರತದ ಮುಂದಾಳತ್ವವನ್ನು ವಹಿಸಲಿದ್ದಾರೆ, ಎಂದು ಭವಿಷ್ಯವನ್ನು ರಾವ್ ಇವರು ನುಡಿದಿದ್ದಾರೆ.

ಬನಾಸಕಾಂಠಾ(ಗುಜರಾತ) ಇಲ್ಲಿರುವ ಶಕ್ತಿಪೀಠ ಅಂಬಾಜಿಮಂದಿರದ ಹವನಶಾಲೆಯ ಮೇಲಿನ ಧ್ವನಿವರ್ಧಕ ತೆಗೆಯುವ ವಿಷಯದಲ್ಲಿ ಸರಕಾರದ ನೊಟೀಸು

ಮೊದಲು ಮಶೀದಿಯ ಮೇಲಿನ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಿ ತೋರಿಸಿರಿ; ಆಮೇಲೆ ಹಿಂದೂಗಳ ಮಂದಿರಗಳ ಮೇಲಿನ ಧ್ವನಿವರ್ಧಕಗಳನ್ನು ಹಿಂದೂಗಳು ತಾವೇ ಸ್ವತಃ ಸ್ಥಗಿತಗೊಳಿಸುವರು, ಎಂದು ಸರಕಾರಕ್ಕೆ ಎಲ್ಲ ಹಿಂದೂಗಳು ಗಟ್ಟಿಯಾಗಿ ಹೇಳಬೇಕಾಗಿದೆ, ಎನ್ನುವುದು ಈ ಪ್ರಕರಣದಿಂದ ಗಮನಕ್ಕೆ ಬರುತ್ತದೆ!

ಗಾಂಧಿ ಜಯಂತಿಯಂದು ‘ಗೋಡ್ಸೆ ಜಿಂದಾಬಾದ್’ ಎನ್ನುವವರನ್ನು ಗಲ್ಲಿಗೇರಿಸಬೇಕು ! – ಬಿಜೆಪಿ ಸಂಸದ ವರುಣ ಗಾಂಧಿ

ಭಾರತದ ವಿಭಜನೆಗೆ, ಹಾಗೆಯೇ ರಾಷ್ಟ್ರದ ಬಗ್ಗೆ ಮತ್ತು ಹಿಂದೂಗಳ ಬಗೆಗಿನ ಅತ್ಯಂತ ಘೋರ ತಪ್ಪುಗಳಿಗೆ ಕಾರಣರಾದ ಮ. ಗಾಂಧಿ ಬಗ್ಗೆ ಜನರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನವು ನೀಡಿದೆ !

ಗುಜರಾತನಲ್ಲಿ ಪಾಕಿಸ್ತಾನಿ ಮೀನುಗಾರರ ನೌಕೆಯಿಂದ 400 ಕೋಟಿ ರೂಪಾಯಿ ಹೆರಾಯಿನ್ ವಶ

ಭಾರತೀಯ ಕರಾವಳಿ ಭದ್ರತಾ ಪಡೆಯವರು ಗುಜರಾತ್‍ನ ದಡದಲ್ಲಿ ಪಾಕಿಸ್ತಾನಿ ಮೀನುಗಾರರು ನೌಕೆ ವಶಪಡಿಸಿಕೊಂಡು ಅದರಿಂದ 400 ಕೋಟಿ ರೂಪಾಯಿ ಬೆಲೆಬಾಳುವ 77 ಕಿಲೊ ಹೆರಾಯಿನ್ ವಶಪಡಿಸಿಕೊಂಡಿದೆ.

ಅಯೋಧ್ಯೆ ಮತ್ತು ಕಾಶಿಯ ನಂತರ ಈಗ ಮಥುರಾವೂ ಆವಶ್ಯಕ ! – ಭಾಜಪದ ಸಂಸದೆ ಹೇಮಾಮಾಲಿನಿ

ಮಥುರಾದಲ್ಲಿ ಒಂದು ದೇವಸ್ಥಾನ ಮೊದಲೇ ಇದೆ ಮತ್ತು ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಜೀರ್ಣೋದ್ಧಾರ ಮಾಡಿರುವ `ಕಾಶಿವಿಶ್ವನಾಥ ಧಾಮ’ದಂತೆ ಹೊಸ ಸ್ವರೂಪ ನೀಡಬಹುದು, ಎಂದು ನನಗೆ ಹೇಳುವುದಿದೆ, ಹೀಗೆಂದು ನಟಿ ಮತ್ತು ಭಾಜಪದ ಸಂಸದೆ ಹೇಮಾಮಾಲಿನಿ ಇವರು ಇಲ್ಲಿ ಪತ್ರಕರ್ತರ ಜೊತೆ ಮಾತನಾಡುವಾಗ ಹೇಳಿದರು