ಯೋಗಿ ಆದಿತ್ಯನಾಥ ಇವರು 2022 ರಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಯಲ್ಲಿ ಸಹಜವಾಗಿ ಜಯಗಳಿಸುವರು !- ಪಿ.ವಿ.ಆರ್. ನರಸಿಂಹ ರಾವ, ಅಮೇರಿಕೆಯಲ್ಲಿರುವ ಪ್ರಸಿದ್ಧ ಜ್ಯೋತಿಷಿ

ಜ್ಯೋತಿಷಿ ಪಿ.ವಿ.ಆರ್. ನರಸಿಂಹ ರಾವ

ನವದೆಹಲಿ – ಜ್ಯೋತಿಷಿ ಪಿ.ವಿ.ಆರ್. ನರಸಿಂಹ ರಾವ ಇವರು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಅವರು ಚೆನ್ನೈಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪದವೀಧರರಾಗಿದ್ದು, ಅಮೇರಿಕಾದ ಹ್ಯೂಸ್ಟನ್ ನಲ್ಲಿ ರೈಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯ ಶಿಕ್ಷಣವನ್ನು ಪಡೆದಿದ್ದಾರೆ. ಅವರು ಕೊರೊನಾ ಮಹಾಮಾರಿ ಮತ್ತು ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಇವರ ಪರಾಭವದ ಕುರಿತು ನಿಖರವಾಗಿ ಭವಿಷ್ಯವಾಣಿಯನ್ನು ನುಡಿದಿದ್ದರು. ಇತ್ತೀಚೆಗೆ ಇವರು ಭಾರತದ ಮತ್ತು ಜಗತ್ತಿನ ಕೆಲವು ಮಹತ್ವಪೂರ್ಣ ಆಗುಹೋಗುಗಳ ಕುರಿತು ಭವಿಷ್ಯವನ್ನು ನುಡಿದಿದ್ದಾರೆ. ಮುಂದಿನ ವರ್ಷ ಅಂದರೆ 2022 ರಲ್ಲಿ ಉತ್ತರಪ್ರದೇಶದ ಚುನಾವಣೆ ಜರುಗಲಿದೆ. ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಸಹಜವಾಗಿ ಜಯಗಳಿಸಲಿದ್ದಾರೆ, ಎಂದು ಭವಿಷ್ಯವನ್ನು ರಾವ್ ಇವರು ನುಡಿದಿದ್ದಾರೆ. 2030-31 ರಲ್ಲಿ ವಿಶ್ವಯುದ್ಧ ಜರುಗಲಿದ್ದು, ಯೋಗಿ ಆದಿತ್ಯನಾಥರು ಭಾರತದ ಮುಂದಾಳತ್ವವನ್ನು ವಹಿಸಲಿದ್ದಾರೆ, ಎಂದು ಅವರು ನುಡಿದಿದ್ದಾರೆ.

ಜಗತ್ತಿನ ಆಗುಹೋಗುಗಳ ಕುರಿತು ಭವಿಷ್ಯ !

ಮುಂದಿನ 10-15 ವರ್ಷಗಳಲ್ಲಿ ಟಿಬೇಟ ಸ್ವತಂತ್ರವಾಗಲಿದ್ದು, ಚೀನಾ ಅನೇಕ ಭಾಗಗಳಲ್ಲಿ ವಿಭಜನೆಗೊಳ್ಳಲಿದೆ. ಎರಡನೇಯ ಮಹಾಯುದ್ಧದ ಬಳಿಕ ಯುನೈಟೆಡ್ ಕಿಂಗ್ ಡಮ್ ನೆಲಕಚ್ಚಿತ್ತು. ಮುಂಬರುವ ಕಾಲದಲ್ಲಿ ಅಮೇರಿಕಾದ್ದು ಅದೇ ಸ್ಥಿತಿ ಆಗಲಿದೆ. ಅಫಘಾನಿಸ್ತಾನದ ಸ್ಥಿತಿ ಸುಧಾರಿಸಲು 2042 ವರೆಗೆ ಕಾಯಬೇಕಾಗುವುದು. ಮಧ್ಯ ಪೂರ್ವ ಭಾಗದಲ್ಲಿ ಶಕ್ತಿಶಾಲಿ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಏರು ಪೇರು ಆಗಲಿದೆ ಮತ್ತು ಇರಾಕ್ ಅವುಗಳ ಪ್ರಮುಖ ಕೇಂದ್ರ ಆಗಲಿದೆ. ಪಾಕಿಸ್ತಾನಕ್ಕೆ 2022 ರಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಬರುವುದು. ತಾಲಿಬಾನಿ ಭಯೋತ್ಪಾದನೆಯಿಂದ ಪಾಕಿಸ್ತಾನ ಮತ್ತು ಚೀನಾಗಳ ಎದುರು ದೊಡ್ಡ ಸಮಸ್ಯೆಗಳುಎದುರಾಗುವುದು. ಚೀನಾದ ಶಿನ್ ಝಿಯಾಂಗ ಪ್ರದೇಶದಲ್ಲಿ ತಾಲಿಬಾನ ಪುರಸ್ಕೃತ ಉಘೂರ ಮುಸಲ್ಮಾನರಿಂದ ಬಹಳ ಅಶಾಂತಿ ಹರಡಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾಜಪ ಜಯಗಳಿಸಲಿದೆ 2024 ರಲ್ಲಿ ಜರುಗುವ ಲೋಕಸಭಾ ಚುನಾವಣೆಯಲ್ಲಿ ಭಾಜಪ ಸಹಜವಾಗಿ ಜಯಗಳಿಸಲಿದೆ; ಆದರೆ ವರ್ಷ 2026 ರ ಪ್ರಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗಿ ಆದಿತ್ಯನಾಥರಿಗೆ ಮುಖಂಡತ್ವವನ್ನು ವಹಿಸಿ ನಿವೃತ್ತಿ ಹೊಂದುವರು.

ಸಂಪೂರ್ಣ ವಿಶ್ವ ಸನಾತನ ಧರ್ಮದೆಡೆಗೆ ತಿರುಗುವುದು !

ಮುಂಬರುವ ಕಾಲದಲ್ಲಿ ಎಲ್ಲ ಧರ್ಮಗಳಲ್ಲಿ ಧರ್ಮತ್ಯಾಗಿ ಮತ್ತು ನಾಸ್ತಿಕ ಜನರಲ್ಲಿ ಹೆಚ್ಚಳವಾಗಲಿದೆ. ಕ್ರೈಸ್ತ ಧರ್ಮಕ್ಕೆ ಕೆಟ್ಟ ದಿನಗಳು ಬರಲಿದೆ. ಇಸ್ಲಾಂ ಧರ್ಮಕ್ಕೆ ಅತ್ಯಂತ ಕೆಟ್ಟ ಸಮಯ ಬರಲಿದೆ. ಮುಂಬರುವ ಕಾಲದಲ್ಲಿ ಜರುಗುವ ಸರ್ವನಾಶವು ಪ್ರಕೃತಿಯಲ್ಲಿ ಸುಧಾರಣೆಯಾಗುವ ಸಲುವಾಗಿಯೇ ಇರಲಿದೆ. ಎಲ್ಲ ಏರುಪೇರುಗಳು ಮುಗಿದ ಬಳಿಕ ಸಂಪೂರ್ಣ ವಿಶ್ವ ಸ್ಥಿರ ಮತ್ತು ಧಾರ್ಮಿಕ ಜೀವನಶೈಲಿಯ ಕಡೆಗೆ ಅಂದರೆ ಸನಾತನ ಧರ್ಮದ ಕಡೆಗೆ ಹೊರಳಲಿದೆ ಎಂದು ಹೇಳಿದರು !