ಭಾಜಪ ಪ್ರವೇಶಿಸಿದ ಶಿವಸೇನೆಯ ತಮಿಳುನಾಡು ರಾಜ್ಯಾಧ್ಯಕ್ಷ ರಾಧಾಕೃಷ್ಣನ್

ಚೆನ್ನೈ (ತಮಿಳನಾಡು) – ಶಿವಸೇನೆಯ ತಮಿಳುನಾಡು ರಾಜ್ಯಾಧ್ಯಕ್ಷರ ಶ್ರೀ. ರಾಧಾಕೃಷ್ಣನ್ ಇವರೊಂದಿಗೆ ಇತರ ಸದಸ್ಯರು ಭಾಜಪಗೆ ಪ್ರವೇಶ ಮಾಡಿದರು. ಎ.ಎನ್.ಐ. ಈ ವಾರ್ತಾ ವಾಹಿನಿಯೊಂದಿಗೆ ಮಾತನಡುವಾಗ ಶ್ರೀ. ರಾಧಾಕೃಷ್ಣನ್ ಅವರು, “ನಾನು ೩೧ ವರ್ಷ ಶಿವಸೇನೆಯಲ್ಲಿ ಇದ್ದೆ. ಕಳೆದ ೨೫ ವರ್ಷಗಳಿಂದ ಶಿವಸೇನೆಯ ಹೆಸರಿನಲ್ಲಿ ಕಲ್ಯಾಣಕಾರಿ ಯೋಜನೆಯಲ್ಲಿ ಕೊಡುಗೆ ನೀಡಿದ್ದೇನೆ. ಶಿವಸೇನೆ ಮತ್ತು ಭಾಜಪ ಇವು ಶಿವಸೇನಾ ಪ್ರಮುಖ ಬಾಳಾಸಾಹೇಬ ಠಾಕರೆ ಮತ್ತು ಅಟಲಬಿಹಾರಿ ವಾಜಪೆಯಿ ಇವರೊಂದಿಗೆ ಸ್ವಾಭಾವಿಕ ಮೈತ್ರಿಯಲ್ಲಿ ಸಹಬಾಗಿಯಾಗಿದ್ದೆ. ಆದರೆ ಈಗ ಅವರ ಸ್ಥಾನವನ್ನು ಸೊನಿಯಾ ಗಾಂಧಿಯವರ ಕಾಂಗ್ರೆಸ್ ಮತ್ತು ದ್ರಮುಕ್ ಇವರು ತೆಗೆದುಕೊಂಡಿದ್ದಾರೆ. ಇದು ನಮಗೆ ಒಪ್ಪಿಗೆ ಆಗಲಿಲ್ಲ.
ಅವರು ಅಧ್ಯಾತ್ಮವಿರೋಧಿ, ರಾಷ್ಟ್ರವಿರೋಧಿ ಮತ್ತು ಹಿಂದೂವಿರೋಧಿಯಾಗಿದ್ದಾರೆ. ನಾವು ಕಾಂಗ್ರೆಸ್ ಮತ್ತು ದ್ರಮುಕ್ ಇವರ ಕೈಕೆಳಗೆ ಕೆಲಸ ಮಾಡಲು ಸಾದ್ಯವಿಲ್ಲ. ನಾವು ಹತಾಶರಾಗಿದ್ದೆವೆಂದು ಶಿವಸೇನೆಯ ಮುಖ್ಯಸ್ಥರಿಗೆ ತಿಳಿದಿದೆ. ಆದ್ದರಿಂದ ಇಂದಿನಿಂದ ನಾನು ಭಾಜಪದ ಮನುಷ್ಯನಾಗಿದ್ದೆನೆ, ಶಿವಸೇನೆಯದ್ದಲ್ಲ.” ಎಂದು ಹೇಳಿದರು.