‘ಕೋವಿಶಿಲ್ಡ’ ಲಸಿಕೆಯ ಪರಿಣಾಮವು ೩ ತಿಂಗಳಲ್ಲಿ ಕಡಿಮೆಯಾಗುತ್ತಿರುವುದರಿಂದ ಬೂಸ್ಟರ್ ಡೋಸ್ ಆವಶ್ಯಕ ! – ಸಂಶೋಧಕರ ನಿಷ್ಕರ್ಷ

ನವ ದೆಹಲಿ : ‘ಲಾಂಸೆಟ್’ ಈ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ‘ಯಾರು ಕೊರೋನಾ ಪ್ರತಿಬಂಧಕ ‘ಕೊವಿಶಿಲ್ಡ’ನ ಎರಡು ಡೋಸ್ ತೆಗೆದುಕೊಂಡಿದ್ದಾರೆ, ಅವರಿಗೆ ಕೊರೋನಾದ ಗಂಭೀರ ಸೋಂಕಿನಿಂದ ರಕ್ಷಿಸಲು ಬೂಸ್ಟರ್‌ನ ಪ್ರಮಾಣವನ್ನು ಹೆಚ್ಚಿಸುವುದು ಅಗತ್ಯವಿದೆ. ಕೋವಿಶೀಲ್ಡ್ ತೆಗೆದುಕೊಂಡ ನಂತರ ೩ ತಿಂಗಳೊಳಗೆ ಲಸಿಕೆಯ ಪರಿಣಾಮಗಳು ಕಡಿಮೆಯಾಗತೊಡಗುತ್ತದೆ.’ ಈ ವರದಿಯಲ್ಲಿ ಬ್ರಾಜಿಲ್ ಮತ್ತು ಸ್ಕಾಟ್‌ಲ್ಯಾಂಡ್‌ನಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಭಾರತದಲ್ಲಿ ಹೆಚ್ಚಿನ ಜನರು ‘ಕೋವಿಶಿಲ್ಡ’ ಲಸಿಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಈ ವರದಿ ಭಾರತೀಯರಿಗೆ ಆತಂಕ ತಂದಿದೆ.

೧. ಈ ವರದಿಯ ಸಂಶೋಧನೆಯಲ್ಲಿ, ಕೋವಿಶಿಲ್ಡ ಲಸಿಕೆಯ ೨ ಡೊಸ್ ತೆಗೆದುಕೊಂಡ ಸ್ಕಾಟಲ್ಯಾಂಡ್‌ನ ೨೦ ಲಕ್ಷ ಮತ್ತು ಬ್ರಾಝಿಲ್‌ನ ೪ ಕೋಟಿ ೨೦ ಲಕ್ಷ ಜನರ ಮಾಹಿತಿ ಸಂಗ್ರಹಿಸಿ ಸಂಶೋಧನೆ ಮಾಡಲಾಯಿತು. ಕೋವಿಶಿಲ್ಡ ತೆಗೆದುಕೊಂಡ ನಂತರ ಲಸಿಕೆಯ ಪರಿಣಾಮ ೩ ತಿಂಗಳಿನಲ್ಲಿ ಕಡಿಮೆಯಾಗತೊಡಗುತ್ತದೆ. ಈ ಸಮಯದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವುದು, ಹಾಗೆಯೇ ಮೃತಪಡುವುದು, ಇದರ ಸಾಧ್ಯತೆ ಎರಡನೆಯ ಡೊಸ್ ತೆಗೆದುಕೊಂಡ ೨ ವಾರಗಳ ತುಲನೆಯಲ್ಲಿ ದ್ವಿಗುಣ ಆಗುತ್ತದೆ. ಎರಡನೆಯ ಡೋಸ್ ತೆಗೆದುಕೊಂಡ ೪ ತಿಂಗಳಲ್ಲಿ ಈ ಸಾಧ್ಯತೆಯು ಮೂರುಪಟ್ಟು ಆಗುತ್ತದೆ.

೨. ಬ್ರಿಟನ್‌ನಲ್ಲಿ ‘ಯುನಿವರ್ಸಿಟಿ ಆಫ್ ಎಡಿನಬರ್ಗ’ನ ಪ್ರಾಚಾರ್ಯ ಅಜಿತ ಶೇಖ ಇವರು, ಯಾರಿಗೆ ಕೊರೋನಾದ ಲಸಿಕೆ ಸಿಕ್ಕಿಲ್ಲ ಅವರು ಮತ್ತು ಲಸಿಕೆ ತೆಗೆದುಕೊಂಡವರು ಕ್ರಮೇಣ ಒಂದೇ ಮಟ್ಟದಲ್ಲಿ ಬರಬಹುದೆಂಬ ಭಯವಿದೆ. ಕರೋನಾ ಲಸಿಕೆಯ ಪ್ರಭಾವ ಯಾವಾಗಿನಿಂದ ಕಡಿಮೆಯಾಗುತ್ತದೆ, ಇದು ತಿಳಿದರೆ ಸರಕಾರದಿಂದ ಬೂಸ್ಟರ್ ಡೋಸ್ ಯಾವಾಗಿನಿಂದ ಆರಂಭಿಸಬೇಕು, ಎನ್ನುವ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗುತ್ತದೆ, ಎಂದಿದ್ದಾರೆ.