‘ಗುಜರಾತಿನಲ್ಲಿ ಎಲ್ಲ ಮಶೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಲಾಗುವುದು!’ ಎಂದು ಕಚ್ಛ ಸಂತ ಸಮಾಜದ ಅಧ್ಯಕ್ಷರು ಎಚ್ಚರಿಕೆ ನೀಡಿದ ಬಳಿಕ ನೊಟೀಸು ಹಿಂದಕ್ಕೆ !
* ಮೊದಲು ಮಶೀದಿಯ ಮೇಲಿನ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಿ ತೋರಿಸಿರಿ; ಆಮೇಲೆ ಹಿಂದೂಗಳ ಮಂದಿರಗಳ ಮೇಲಿನ ಧ್ವನಿವರ್ಧಕಗಳನ್ನು ಹಿಂದೂಗಳು ತಾವೇ ಸ್ವತಃ ಸ್ಥಗಿತಗೊಳಿಸುವರು, ಎಂದು ಸರಕಾರಕ್ಕೆ ಎಲ್ಲ ಹಿಂದೂಗಳು ಗಟ್ಟಿಯಾಗಿ ಹೇಳಬೇಕಾಗಿದೆ, ಎನ್ನುವುದು ಈ ಪ್ರಕರಣದಿಂದ ಗಮನಕ್ಕೆ ಬರುತ್ತದೆ!- ಸಂಪಾದಕರು * ಗುಜರಾತಿನಲ್ಲಿ ಭಾಜಪ ಸರಕಾರವಿರುವಾಗ ಮಶೀದಿಯ ಮೇಲಿನ ಧ್ವನಿವರ್ಧಕಗಳನ್ನು ತೆಗೆಯುವ ಬದಲು ಶಕ್ತಿಪೀಠ ಮಂದಿರದ ಹವನಶಾಲೆಯ ಮೇಲೆ ಹಚ್ಚಲಾಗಿರುವ ಧ್ವನಿವರ್ಧಕವನ್ನು ತೆಗೆಯಲು ನೊಟೀಸ ಕಳುಹಿಸುವುದು, ಇದನ್ನು ಹಿಂದೂಗಳು ಅಪೇಕ್ಷಿಸಿರಲಿಲ್ಲ.-ಸಂಪಾದಕರು |
ಬನಾಸಕಾಂಠಾ(ಗುಜರಾತ)– 51 ಶಕ್ತಿಪೀಠಗಳಲ್ಲಿ ಒಂದಾಗಿರುವ ಅಂಬಾಜಿ ಮಂದಿರದ ಹವನ ಶಾಲೆಯ ಮೇಲೆ ಹಚ್ಚಲಾಗಿದ್ದ ಧ್ವನಿವರ್ಧಕವನ್ನು ತೆಗೆಯುವ ಆದೇಶವನ್ನು ಸರಕಾರವು ಹಿಂಪಡೆದುಕೊಂಡಿದೆ. ‘ಶಬ್ದಮಾಲಿನ್ಯವಾಗುತ್ತಿರುವ ಕಾರಣ ಪರಿಸರದಲ್ಲಿರುವ ನಾಗರಿಕರಿಗೆ ತೊಂದರೆಯಾಗುತ್ತಿದ್ದು, ಧ್ವನಿವರ್ಧಕವನ್ನು ತೆಗೆಯಬೇಕು’, ಎಂದು ಸರಕಾರವು ನೊಟೀಸನ್ನು ಕಳುಹಿಸಿತ್ತು; ಆದರೆ ಕಚ್ಛ ಸಂತ ಸಮಾಜದ ಅಧ್ಯಕ್ಷರಾದ ಯೋಗಿ ದೇವನಾಥ ಇವರು ನೀಡಿದ ಎಚ್ಚರಿಕೆಯ ಬಳಿಕ ಈ ನೊಟೀಸನ್ನು ಹಿಂಪಡೆಯಲಾಯಿತು. ಯೋಗಿ ದೇವನಾಥ ಇವರು ಸರಕಾರ ಕಳುಹಿಸಿದ್ದ ಪತ್ರದೊಂದಿಗೆ ಟ್ವೀಟ್ ಮಾಡಿ ಹೇಳಿದ್ದರು, `ಒಂದು ವೇಳೆ ಸರಕಾರವು ಈ ಆದೇಶವನ್ನು ಹಿಂದಕ್ಕೆ ಪಡೆಯದಿದ್ದರೆ, ಗುಜರಾತನಲ್ಲಿರುವ ಎಲ್ಲ ಮಶೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಲಾಗುವುದು’.
प्रशासन ने मंदिर के हवनशाला में लाउडस्पीकर पर प्रतिबंध लगाने वाले आदेश को वापस ले लिया है
जय माता दी 🚩 https://t.co/4gOa5SbPRB
— Yogi Devnath (@YogiDevnath2) December 20, 2021
ಮಂದಿರದ ಹವನಶಾಲೆಯಲ್ಲಿ 14 ಸ್ಥಳಗಳಲ್ಲಿ ಯಜ್ಞ ಮತ್ತು ಹವನವನ್ನು ಮಾಡಲಾಗುತ್ತದೆ. `ಒಂದೇ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಯಜ್ಞ ಮತ್ತು ಹವನ ನಡೆಯುವುದರಿಂದ, ಅವುಗಳ ಧ್ವನಿಯಿಂದ ತೊಂದರೆಯಾಗುತ್ತಿದೆ’. ಎಂದು ಜನರು ಹೇಳುತ್ತಿರುವುದಾಗಿ ಸರಕಾರವು ತಿಳಿಸಿತ್ತು.