ಕಚ್ಛ (ಗುಜರಾತ) – ಭಾರತೀಯ ಕರಾವಳಿ ಭದ್ರತಾ ಪಡೆಯವರು ಗುಜರಾತ್‍ನ ದಡದಲ್ಲಿ ಪಾಕಿಸ್ತಾನಿ ಮೀನುಗಾರರು ನೌಕೆ ವಶಪಡಿಸಿಕೊಂಡು ಅದರಿಂದ 400 ಕೋಟಿ ರೂಪಾಯಿ ಬೆಲೆಬಾಳುವ 77 ಕಿಲೊ ಹೆರಾಯಿನ್ ವಶಪಡಿಸಿಕೊಂಡಿದೆ. `ಅಲ್ ಹುಸೇನಿ’ ಎಂಬ ಹೆಸರಿನ ನೌಕೆಯಲ್ಲಿ 6 ಕಾರ್ಮಿಕರಿದ್ದರು, ಎಂಬ ಮಾಹಿತಿಯನ್ನು ಸಂರಕ್ಷಣಾ ಜನಸಂಪರ್ಕ ಕಾರ್ಯಾಲಯವು ನೀಡಿದೆ. ಭಾರತೀಯ ತಟರಕ್ಷಕ ದಳವು ಗುಜರಾತ ಉಗ್ರನಿಗ್ರಹ ದಳದ ಜೊತೆ ಜಂಟಿಯಾಗಿ ಕ್ರಮಕೈಗೊಂಡಿದೆ. ಮುಂದಿನ ವಿಚಾರಣೆಗಾಗಿ ಈ ನೌಕೆಯನ್ನು ಗುಜರಾತನ ಕಚ್ಛ ಜಿಲ್ಲೆಯಲ್ಲಿ ಜಾಖಾವು ದಡಕ್ಕೆ ತರಲಾಗಿದೆ. ಈ ವರ್ಷ ಏಪ್ರಿಲ್‍ನಲ್ಲಿ ತಟರಕ್ಷಕ ದಳ ಮತ್ತು ಉಗ್ರ ನಿಗ್ರಹ ಪಡೆ ಇವು ಜಂಟಿಯಾಗಿ ಇದೇ ರೀತಿಯಲ್ಲಿ ಕ್ರಮಕೈಗೊಂಡಿದ್ದವು, ಮತ್ತು ಕಚ್ಛನಲ್ಲಿನ ಜಾಖಾವೂ ದಡದಲ್ಲಿ 8 ಪಾಕಿಸ್ತಾನಿ ನಾಗರಿಕರ ಸಹಿತ ಮತ್ತು ಸುಮಾರು 150 ಕೋಟಿ ರೂಪಾಯಿ ಬೆಲೆಬಾಳುವ 30 ಕಿಲೋ ಹೆರಾಯಿನ್ ಇರುವ ನೌಕೆಯನ್ನು ವಶಪಡಿಸಿಕೊಂಡಿದ್ದರು.
Heroin worth Rs 400 crore seized from Pakistani fishing boat off Gujarat coast.https://t.co/LNelAA1QSz
— News18.com (@news18dotcom) December 20, 2021