ಅಯೋಧ್ಯೆ ಮತ್ತು ಕಾಶಿಯ ನಂತರ ಈಗ ಮಥುರಾವೂ ಆವಶ್ಯಕ ! – ಭಾಜಪದ ಸಂಸದೆ ಹೇಮಾಮಾಲಿನಿ

ಚಲನಚಿತ್ರ ನಟಿ ಮತ್ತು ಭಾಜಪದ ಸಂಸದೆ ಹೇಮಾಮಾಲಿನಿ

ಇಂದೂರ (ಮಧ್ಯಪ್ರದೇಶ) – ಅಯೋಧ್ಯೆ ಮತ್ತು ಕಾಶಿಯ ನಂತರ ಮಥುರಾ ಸಹ ಅವಶ್ಯಕವಾಗಿದೆ. ಅದರ ಕೆಲಸವೂ ಆಗಬೇಕು, ಅದು ಇನ್ನೂ ಆಗಿಲ್ಲ. ಮಥುರಾದ ಸಂಸದೆಯಾಗಿದ್ದರಿಂದ, ಇಲ್ಲಿಯೂ ಶ್ರೀಕೃಷ್ಣನ ಭವ್ಯ ಮಂದಿರ ಇರಬೇಕು. ಇಲ್ಲಿ ಒಂದು ದೇವಸ್ಥಾನ ಮೊದಲೇ ಇದೆ ಮತ್ತು ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಜೀರ್ಣೋದ್ಧಾರ ಮಾಡಿರುವ `ಕಾಶಿವಿಶ್ವನಾಥ ಧಾಮ’ದಂತೆ ಹೊಸ ಸ್ವರೂಪ ನೀಡಬಹುದು, ಎಂದು ನನಗೆ ಹೇಳುವುದಿದೆ, ಹೀಗೆಂದು ನಟಿ ಮತ್ತು ಭಾಜಪದ ಸಂಸದೆ ಹೇಮಾಮಾಲಿನಿ ಇವರು ಇಲ್ಲಿ ಪತ್ರಕರ್ತರ ಜೊತೆ ಮಾತನಾಡುವಾಗ ಹೇಳಿದರು. `ಕಾಶಿ ವಿಶ್ವನಾಥ ಧಾಮವನ್ನು ವಿಕಸಿತಗೊಳಿಸುವುದು ಬಹಳ ಕಠಿಣವಾಗಿತ್ತು. ಅದರಲ್ಲಿ ಮೋದಿಯವರ ದೂರದೃಷ್ಟಿ ಕಾಣುತ್ತದೆ. ಮಥುರೆಯಲ್ಲಿಯೂ ಹಾಗೆ ಆಗುವುದು’, ಎಂದು ಸಹ ಹೇಮಾಮಾಲಿನಿ ಹೇಳಿದರು.

ಶ್ರೀಕೃಷ್ಣ ಮಂದಿರದ ವಿವಾದವು ಕಳೆದ ವರ್ಷ ಕೆಲವರು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಮತ್ತು ಮಸೀದಿಯ ಸ್ಥಳದಲ್ಲಿ ಭಗವಾನ ಶ್ರೀಕೃಷ್ಣನ ಜನ್ಮಸ್ಥಳವಾಗಿದೆ ಎಂದು ದಾವೆ ಮಾಡಿದ ನಂತರ ಆರಂಭವಾಯಿತು. ಶ್ರೀಕೃಷ್ಣ ಜನ್ಮಸ್ಥಳದಲ್ಲಿರುವ ಈದ್ಗಾ ಮಸೀದಿ ತೆರವುಗೊಳಿಸುವ ಬಗ್ಗೆ ಒತ್ತಾಯಿಸುವ ಅರ್ಜಿಯು ವಿಚಾರಣೆ ಪ್ರಕ್ರಿಯೆಯು ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿದೆ.