* ಭಾರತದ ವಿಭಜನೆಗೆ, ಹಾಗೆಯೇ ರಾಷ್ಟ್ರದ ಬಗ್ಗೆ ಮತ್ತು ಹಿಂದೂಗಳ ಬಗೆಗಿನ ಅತ್ಯಂತ ಘೋರ ತಪ್ಪುಗಳಿಗೆ ಕಾರಣರಾದ ಮ. ಗಾಂಧಿ ಬಗ್ಗೆ ಜನರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನವು ನೀಡಿದೆ !-ಸಂಪಾದಕರು * ಭಾರತದ ವಿಭಜನೆ ಮತ್ತು ನಂತರದ 10 ಲಕ್ಷ ಹಿಂದೂಗಳ ಹತ್ಯೆಗೆ ಕಾರಣರಾದವರಿಗೆ ಯಾವುದೇ ಶಿಕ್ಷೆಯಾಗದಿರುವ ಬಗ್ಗೆ ವರುಣ ಗಾಂಧಿ ಮಾತನಾಡಬೇಕು ! -ಸಂಪಾದಕರು * ಗಾಂಧಿ ಮತ್ತು ನೆಹರೂ ಕುಟುಂಬದವರು ದೇಶದ ಅಧೋಗತಿ ಮಾಡಿದ್ದಾರೆ, ಅದರ ಬಗ್ಗೆ ವರುಣ ಗಾಂಧಿಯವರು ಮಾತನಾಡಬೇಕು !- ಸಂಪಾದಕರು * ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಸ್ವಾತಂತ್ರ್ಯವೀರ ಸಾವರಕರರನ್ನು ‘ಮಾಫಿವೀರ’ ಎಂಬಂತಹ ಅಸಭ್ಯ ಪದಗಳಿಂದ ವ್ಯಂಗ್ಯವಾಡಿದ್ದಾರೆ. ಕ್ರಾಂತಿಕಾರಿಗಳನ್ನು ‘ಭಯೋತ್ಪಾದಕರು’ ಎಂದು ನಿರ್ಧರಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯನ್ನು ನೆಲಸಮ ಮಾಡಲಾಗುತ್ತದೆ. ಇಂತಹ ಟೀಕಾಕಾರರನ್ನು ಗಲ್ಲಿಗೇರಿಸಬೇಕೋ ಬೇಡವೋ ಎಂಬ ಬಗ್ಗೆ ವರುಣ ಗಾಂಧಿ ಏಕೆ ಮಾತನಾಡುವುದಿಲ್ಲ ?- ಸಂಪಾದಕರು |
ಪಿಲಿಭಿತ್ (ಉತ್ತರಪ್ರದೇಶ) – ಮ. ಗಾಂಧಿ ಇವರ ಜನ್ಮದಿನದಂದು `ಗೋಡ್ಸೆ ಜಿಂದಾಬಾದ್’ ಎಂದು ಹೇಳಿದವರನ್ನು ಗಲ್ಲಿಗೇರಿಸಬೇಕು. ಭಗವಾನ ಶ್ರೀರಾಮನು ಮರ್ಯಾದಾಪುರುಷೋತ್ತಮ ಆಗಿದ್ದರು. ಯಾರು ಜನರನ್ನು ಒಟ್ಟು ಮಾಡುವ ಕಾರ್ಯವನ್ನು ಮಾಡಿದ್ದರೋ, ಆ ಗಾಂಧಿಯ ಜಯಂತಿಯಂದು `ಗೋಡ್ಸೆ ಜಿಂದಾಬಾದ್’ ಎಂಬುದನ್ನು ಟ್ರೆಂಡ್ ಮಾಡಲಾಗುತ್ತದೆ (ಟ್ವಿಟರ್ ನಲ್ಲಿ ಚರ್ಚೆ ನಡೆಸುವ ವಿಷಯ), ಎಂದು ಬಿಜೆಪಿ ಸಂಸದ ವರುಣ ಗಾಂಧಿ ಅವರು ಟೀಕಿಸಿದ್ದಾರೆ. ಅವರು ತಮ್ಮ ಪಿಲಿಭಿತ್ ಮತಕ್ಷೇತ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇತರ ಮಹಿಳಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.
पीलीभीत में गरजे वरुण गांधी, कहा- महात्मा गांधी के हत्यारे की जय बोलने वालों को होनी चाहिए फंसी#VarunGandhi #Pilibhit #UttarPradeshhttps://t.co/8FROnue5Bt
— ABP Ganga (@AbpGanga) December 20, 2021
ವರುಣ ಗಾಂಧಿ ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ಇಲ್ಲಿ ಮುಖ್ಯಮಂತ್ರಿ ಅಥವಾ ಪ್ರಧಾನಿಗಳಿಗೆ ಮನವಿ ನೀಡಲು ಬಂದಿಲ್ಲ, ನಾನು ದೇಶದ ರಾಜಕಾರಣ ಮಾಡಲು ಬಂದಿದ್ದೇನೆ. ಇಂದು ಇಡೀ ದೇಶವೇ ನನ್ನ ಮುಂದೆ ಕುಳಿತಿದೆ. ನನ್ನ ಮುಂದೆ ಹಿಂದೂ, ಮುಸಲ್ಮಾನ, ಮುಂದುವರೆದ, ಹಿಂದುಳಿದವರು ಯಾರೂ ಇಲ್ಲ. ಇಂತಹ ವ್ಯತ್ಯಾಸ ಮಾಡುವ ಮೂಲಕ ನಾವು ಭಾರತವನ್ನು ದುರ್ಬಲಗೊಳಿಸುತ್ತಿದ್ದೇವೆ. ಈಗ `ಜೈ ಶ್ರೀರಾಮ್’ ಅಲ್ಲ, `ಜೈ ಹಿಂದ್’ ಎಂದು ಹೇಳುವ ಸಮಯ ಬಂದಿದೆ ಎಂದು ಹೇಳಿದರು.