ಪ್ರಧಾನಿಯವರ ಪ್ರವಾಸದ ಸಂದರ್ಭದಲ್ಲಿ ಪಂಜಾಬನಲ್ಲಿ ಖಲಿಸ್ತಾನೀ ಭಯೋತ್ಪಾದಕರಿಂದ ದಾಳಿಯ ಸಾಧ್ಯತೆ

ಪ್ರಧಾನಿ ಮೋದಿ ಅವರು ಆಗಸ್ಟ್ ೨೪ ರಂದು ಪಂಜಾಬದ ಮೊಹಾಲಿ ನಗರದ ಪ್ರವಾಸ ಮಾಡುವವರಿದ್ದಾರೆ. ಅವರು ‘ಟಾಟಾ ಕ್ಯಾನ್ಸರ್ ಹಾಸ್ಪಿಟಲ್’ನ ಉದ್ಘಾಟನೆ ಮಾಡುವವರಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಚಂದಿಗಡ್ ಮತ್ತು ಮೊಹಾಲಿಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ.

ಲಖಿಮಪುರ ಖೀರಿ (ಉತ್ತರಪ್ರದೇಶ)ಯಲ್ಲಿ ಗ್ರಾಮದ ಹಿಂದೂಗಳಿಗೆ ಆಮಿಷ ತೋರಿಸಿ ಮತಾಂತರದ ಪ್ರಯತ್ನ : ಇಬ್ಬರ ಬಂಧನ

ಲಖಿಮಪೂರ ಖೀರಿ ಜಿಲ್ಲೆಯ ದೌಲತಾಪೂರ ಗ್ರಾಮದಲ್ಲಿ ಕ್ರೈಸ್ತ ಮಶನರಿಗಳಿಂದ ಹಿಂದೂಗಳಿಗೆ ಮತಾಂತರ ಗೊಳಿಸಲು ಆಮಿಷ ತೋರಿಸಲಾಗುತ್ತಿದೆ, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಕರ್ನಾಟಕದಲ್ಲಿ ಶ್ರೀ ಗಣೇಶ ಮಂಟಪದಲ್ಲಿ ಶ್ರೀ ಗಣೇಶ ಮೂರ್ತಿಯ ಪಕ್ಕದಲ್ಲಿ ವೀರ ಸಾವರಕರ ಅವರ ಛಾಯಾಚಿತ್ರ ಹಾಕಲಾಗುವುದು ! – ಹಿಂದೂ ಸಂಘಟನೆಗಳ ನಿರ್ಧಾರ

ಕರ್ನಾಟಕದ ಹಿಂದೂ ಸಂಘಟನೆಗಳು ಈ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿಯ ಪಕ್ಕದಲ್ಲಿ ವೀರ ಸಾವರಕರರ ಛಾಯಾಚಿತ್ರ ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆಗಸ್ಟ್ ೩೧ ರಿಂದ ಶ್ರೀ ಗಣೇಶೋತ್ಸವ ಆಚರಣೆ ಮಾಡಲಾಗುವುದು ಇದರಲ್ಲಿ ಸಮಾಜದ ಎಲ್ಲಾ ಜನರು ಸಹಭಾಗಿ ಆಗುತ್ತಾರೆ.

ಸರಕಾರಿ ಆದೇಶವನ್ನು ಧಿಕ್ಕರಿಸಿ ರಾಷ್ಟ್ರಗೀತೆ ಹಾಡದೆ ಇರುವ ಬೆಂಗಳೂರಿನ ೩ ಖಾಸಗಿ ಶಾಲೆಯ ಮೇಲೆ ಕ್ರಮ

ಕರ್ನಾಟಕ ಸರಕಾರ ರಾಜ್ಯದ ಎಲ್ಲಾ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಿದೆ. ರಾಜ್ಯ ಸರಕಾರದ ಈ ಆದೇಶ ಎಲ್ಲಾ ಸರಕಾರಿ, ಖಾಸಗಿ ಮತ್ತು ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

ಮ. ಗಾಂಧಿಯವರ ಪುತ್ತಳಿಯ ವಿಡಂಬನೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ೪ ಕಾರ್ಯಕರ್ತರ ಬಂಧನ !

ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರು ವಯನಾಡ್ ಮತದಾನ ಕ್ಷೇತ್ರದ ಕಚೇರಿಯಲ್ಲಿ ಎರಡು ತಿಂಗಳ ಹಿಂದೆ ಮ. ಗಾಂಧೀಜಿಯವರ ಪುತ್ತಳಿಯ ವಿಡಂಬನೆ ಮಾಡಿರುವ ಪ್ರಕರಣದಲ್ಲಿ ಕೇರಳದ ಕಾಂಗ್ರೆಸ್ಸಿನ ೪ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಶೇಷ ಎಂದರೆ ಇವರಲ್ಲಿ ರಾಹುಲ್ ಗಾಂಧಿಯವರ ಕಚೇರಿಯ ಇಬ್ಬರು ಸಿಬ್ಬಂದಿಗಳ ಸಮಾವೇಶವಿದೆ.

೧೯೯೯ ರ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಆಟಗಾರರನ್ನು ಗಾಯಗೊಳಿಸುವ ಯೋಜನೆ ಆಗಿತ್ತು !

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಕ್ತರ್ ಇವರ ರಹಸ್ಯ ಸ್ಪೋಟ ಏಷಿಯಾ ಕಪ್ ಸ್ಪರ್ಧೆಯಲ್ಲಿ ಆಗಸ್ಟ್ ೨೮ ರಂದು ಭಾರತ ಪಾಕಿಸ್ತಾನ ಇಬ್ಬರಲ್ಲಿ ಮತ್ತೆ ಪಂದ್ಯ ! ನವದೆಹಲಿ – ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಇವರು ಒಂದು ರಹಸ್ಯ ಬಯಲು ಪಡಿಸಿದ್ದಾರೆ. ಅವರು, ‘೧೯೯೯ ರಲ್ಲಿ ಮೊಹಾಲಿ (ಪಂಜಾಬ) ಅಲ್ಲಿ ಒಂದು ಪಂದ್ಯದಲ್ಲಿ ನಾನು ಭಾರತದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಇವರ ಮೂಳೆಮುರಿಯಲು ಬಯಸಿದ್ದೆ.’ ಎಂದು ಅವರು ಹೇಳಿದರು. ಬರುವ … Read more

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಅನೇಕರ ಸಾವು !

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಳೆದ ೨೪ ಗಂಟೆಗಳಲ್ಲಿ ಚಂಬಾ ಜಿಲ್ಲೆಯ ಭಟಿಯಾದಲ್ಲಿ ೩ ಮತ್ತು ಮಂಡಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

‘ಅವರು (ಹಿಂದುತ್ವನಿಷ್ಠರು) ಗಾಂಧೀಜಿ ಅವರ ಕೊಲೆ ಮಾಡಿದರು, ನನ್ನನ್ನು ಬಿಡುವರೇ ?’ (ಅಂತೆ)

ಕರ್ನಾಟಕದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ತಮಗೆ ಕೊಲೆ ಬೆದರಿಕೆ ನೀಡಲಾಗಿದೆ ಎಂದು ದಾವೆ ಮಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಈ ಜನರು (ಹಿಂದುತ್ವನಿಷ್ಠರು) ಮ. ಗಾಂಧೀಜಿಯವರ ಕೊಲೆ ಮಾಡಿದವರು ನನ್ನನ್ನು ಬಿಡುವರೆ ? ಗಾಂಧಿಯನ್ನು ಗೋಡಸೆಯವರು ಗುಂಡು ಹಾರಿಸಿದ್ದರು.

ಪಾಕಿಸ್ತಾನ ನಮಗೆ ಬೆನ್ನಿಗೆ ಚೂರಿ ಹಾಕಿದೆ ! – ನಾಗರೀಕರ ಆರೋಪ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರಕಾರ ಸಂವಿಧಾನದ ೧೫ ನೇ ಸುಧಾರಣೆ ಜಾರಿ ಮಾಡಿದೆ. ಈ ಸುಧಾರಣೆ ಮೂಲಕ ಪಾಕಿಸ್ತಾನವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕಿಂತ ಮುಂಚೆ ‘ಸ್ವತಂತ್ರ್ಯ’ ಎಂಬ ಶಬ್ದ ಜೋಡಿಸಿದೆ.

ಪಾಕಿಸ್ತಾನದಿಂದ ದೆಹಲಿಗೆ ಬಂದಿರುವ ಹಿಂದೂ ನಿರಾಶ್ರಿತರ ಬಗ್ಗೆ ಸರಕಾರ ಮತ್ತು ಆಡಳಿತ ಇವರ ನಿರ್ಲಕ್ಷ ! – ಹಿಂದೂಗಳು ಖೇದ ವ್ಯಕ್ತಪಡಿಸಿದರು

ಭಾರತದಲ್ಲಿನ ಹಿಂದೂಗಳಿಗೆ ಸಹಾಯ ಮಾಡದಿರುವ ಸರಕಾರಿ ವ್ಯವಸ್ಥೆ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳಿಗೆ ಎಂದಾದರು ಸಹಾಯ ಮಾಡುವರೇ ?