೪ ಮಂದಿ ಬಂಧನ!

ಸುಪೌಲ್ (ಬಿಹಾರ) – ಇಲ್ಲಿನ ನೇಪಾಳದ ಮಿಷನರಿಗಳು ಸ್ಥಳೀಯ ಹಿಂದೂ ಗ್ರಾಮಸ್ಥರಿಗೆ ಉತ್ತಮ ಆಹಾರ, ಉಚಿತ ಶಿಕ್ಷಣ ಮತ್ತು ಕಾಯಿಲೆಗಳಿಂದ ಮುಕ್ತಿಯ ಆಮಿಷವೊಡ್ಡಿ ಕ್ರೈಸ್ತ ಪಂಥವನ್ನು ಸ್ವೀಕರಿಸುವಂತೆ ಮಾಡಲು ಪ್ರಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ಜಾಗರೂಕ ಗ್ರಾಮಸ್ಥರು ಮಿಷನರಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.
೧. ಮಿಷನರಿಗಳ ಗುಂಪೊಂದು ನೇಪಾಳದ ಭಂಟಾಬಾರಿಯಿಂದ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭೀಮನಗರಕ್ಕೆ (ಬಿಹಾರ) ತಲುಪಿತು. ಅಲ್ಲಿಂದ ಈ ಗುಂಪು ಬನೈಲಿಪಟ್ಟಿಯ ಹಿಂದೂ ವಸತಿಗೆ ತಲುಪಿತು.
೨. ಇಲ್ಲಿ ಕಿಶುನ್‌ದೇವ್ ರಾಮ್ ಎಂಬ ವ್ಯಕ್ತಿಯ ಮನೆಯಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ ೩೦ ರಿಂದ ೪೦ ಜನರು ಹಾಜರಿದ್ದರು. ಇಲ್ಲಿ ಮಿಷನರಿಗಳು ಗ್ರಾಮಸ್ಥರಿಗೆ ಹಣದ, ಕಾಯಿಲೆ ವಾಸಿ ಮಾಡುವ ಮತ್ತು ಉತ್ತಮ ಆಹಾರದ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡಲು ಅವರ ಬ್ರೈನ್ ವಾಶ್ ಮಾಡಲು ಆರಂಭಿಸಿದರು.
೩. ಈ ವಿಷಯ ತಿಳಿಯುತ್ತಿದ್ದಂತೆ ಇತರ ಗ್ರಾಮಸ್ಥರು ಸ್ಥಳಕ್ಕೆ ತಲುಪಿದರು. ಅವರು ಮಿಷನರಿಗಳ ಮತಾಂತರದ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸಿದರು.
೪. ಈ ವಿಷಯವನ್ನು ಪೊಲೀಸರಿಗೂ ತಿಳಿಸಲಾಯಿತು. ಪೊಲೀಸರು ೪ ಮಿಷನರಿಗಳನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ವೀರಪುರ ಪೊಲೀಸ್ ಠಾಣೆಗೆ ಕರೆದೊಯ್ದರು.
೫. ಗ್ರಾಮಸ್ಥರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್