ಮ. ಗಾಂಧಿಯವರ ಪುತ್ತಳಿಯ ವಿಡಂಬನೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ೪ ಕಾರ್ಯಕರ್ತರ ಬಂಧನ !

ರಾಹುಲ ಗಾಂಧಿಯವರ ಕೇರಳಾದ ಕಚೇರಿಯಲ್ಲಿನ ಪ್ರಕರಣ

ಮ. ಗಾಂಧೀಜಿಯವರ ವಿಡಂಬನೆ

ವಾಯನಾಡ (ಕೇರಳ) – ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರು ವಯನಾಡ್ ಮತದಾನ ಕ್ಷೇತ್ರದ ಕಚೇರಿಯಲ್ಲಿ ಎರಡು ತಿಂಗಳ ಹಿಂದೆ ಮ. ಗಾಂಧೀಜಿಯವರ ಪುತ್ತಳಿಯ ವಿಡಂಬನೆ ಮಾಡಿರುವ ಪ್ರಕರಣದಲ್ಲಿ ಕೇರಳದ ಕಾಂಗ್ರೆಸ್ಸಿನ ೪ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಶೇಷ ಎಂದರೆ ಇವರಲ್ಲಿ ರಾಹುಲ್ ಗಾಂಧಿಯವರ ಕಚೇರಿಯ ಇಬ್ಬರು ಸಿಬ್ಬಂದಿಗಳ ಸಮಾವೇಶವಿದೆ. ಪುತ್ತಳಿಯ ವಿಡಂಬನೆ ಆದ ನಂತರ ‘ಈ ಕೃತ್ಯ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಕರ್ತರು ನಡೆಸಿದ್ದಾರೆ’, ಎಂದು ರಾಹುಲ್ ಗಾಂಧಿಯವರ ಕಚೇರಿಯು ಆರೋಪ ಮಾಡಿತ್ತು. (ಇಂತಹ ಸುಳ್ಳು ಮಾತನಾಡುವ ಕಾಂಗ್ರೆಸ್ ದೇಶವನ್ನು ೬೦ ವರ್ಷಕ್ಕಿಂತ ಹೆಚ್ಚಿನ ಸಮಯ ಯಾವ ರೀತಿ ಆಳಿದೆ ಇದು ತಿಳಿಯುತ್ತದೆ ! ಇಂತಹ ಕಾಂಗ್ರೆಸ್ ಇನ್ನು ರಾಜಕೀಯ ದೃಷ್ಟಿಯಿಂದ ಇತಿಹಾಸದ ಪುಟದಲ್ಲಿ ಸೇರ್ಪಡೆಯಾಗುವುದು ಅವಶ್ಯಕವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಡೋಂಗಿ ಅಹಿಂಸವಾದಿ ಕಾಂಗ್ರೆಸ್ಸಿನ ನಿಜವಾದ ಮಾನಸಿಕತೆ ! ತಮ್ಮದೇ ಕಾರ್ಯಕರ್ತರ ಮೇಲೆ ಗಾಂಧಿಯವರ ಅಹಿಂಸವಾದದ ಸಂಸ್ಕಾರ ಮಾಡದೇ ಇರುವ ಕಾಂಗ್ರೆಸ್ ದೇಶಕ್ಕೆ ಮತ್ತು ಜಗತ್ತಿಗೆ ಅಹಿಂಸೆ ಕಲಿಸಲು ಪ್ರಯತ್ನಿಸುತ್ತಿದೇ ಅಂತೆ !