ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಜಕಾರ್ತಾ (ಇಂಡೋನೇಷ್ಯಾ) ದಲ್ಲಿ ನಡೆದ ಪ್ರವಚನದಲ್ಲಿ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಗಳ ದಾವೆ

ಜಕಾರ್ತಾ (ಇಂಡೋನೇಷ್ಯಾ) – ಶ್ರೀರಾಮ ಮಂದಿರದ ಪ್ರಸ್ತುತ ಪರಿಸ್ಥಿತಿಯನ್ನು ನೋಡುವುದು ಯಾವುದೇ ಸನಾತನಿ ವ್ಯಕ್ತಿಗೆ ಅಸಹನೀಯವಾಗಿದೆ. ಶ್ರೀರಾಮ ಮಂದಿರದಲ್ಲಿ ಇಂತಹ ಪರಿಸ್ಥಿತಿ ನೋಡಿ ಭಕ್ತರ ಮನಸ್ಸಿಗೆ ಎಷ್ಟು ನೋವಾಗುತ್ತಿರಬಹುದು?, ಇದನ್ನು ಪದಗಳಲ್ಲಿ ವಿವರಿಸಲು ಕಷ್ಟ. ಜನರು, ‘ಬಾಬಾ ಏನೂ ಮಾತನಾಡುತ್ತಿಲ್ಲ. ಬಾಬಾ ನಿಮಗೆ ಎಲ್ಲವೂ ತಿಳಿದಿದೆ, ಹಾಗಾಗಿ ಚೀಟಿ ತೆರೆಯಿರಿ ಮತ್ತು ಯಾರ ಹೆಸರು ಇದೆ ಎಂದು ಹೇಳಿ.’, ಎಂದು ಹೇಳುತ್ತಾರೆ. ಒಂದು ವೇಳೆ ನಾವು ಈಗ ಚೀಟಿ ತೆರೆದು ಹೆಸರು ಹೇಳಿದರೆ, ಅವರು (ದೋಷಿಗಳು) ನಮ್ಮನ್ನು ಮುಗಿಸಿಬಿಡುತ್ತಾರೆ. ಇಂದು ಇಲ್ಲದಿದ್ದರೂ ನಾಳೆ ಮುಗಿಸುತ್ತಾರೆ; ಆಗ ನಾವು ಇತರರ ಹೆಸರುಗಳನ್ನು ಹೇಳಲು ಬದುಕಿರುವುದಿಲ್ಲ; ಅದಕ್ಕಾಗಿಯೇ ಕೆಲವು ಕಡೆ ನಮ್ಮ ಮೌನವೇ ಶ್ರೇಯಸ್ಕರವಾಗಿದೆ ಎಂದು ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಗಳು ಇಲ್ಲಿ ನಡೆದ ಪ್ರವಚನವೊಂದರಲ್ಲಿ ಹೇಳಿದರು.

ಪ್ರಸ್ತುತ ಕೇವಲ ಸಣ್ಣ ಮೀನುಗಳು ಸಿಕ್ಕಿಬಿದ್ದಿವೆ!

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಗಳು ಮಾತು ಮುಂದುವರೆಸುತ್ತಾ, ಭಾರತದ ಕಾನೂನು ಬಲೆಯಂತಿದೆ, ಇದರಲ್ಲಿ ಕೇವಲ ಸಣ್ಣ ಮೀನುಗಳು ಸಿಕ್ಕಿಹಾಕಿಕೊಳ್ಳುತ್ತವೆ ಮತ್ತು ದೊಡ್ಡ ಮೊಸಳೆಗಳು ಸುಲಭವಾಗಿ ನುಣುಚಿಕೊಳ್ಳುತ್ತವೆ. ಈ ಸಂಪೂರ್ಣ ಪ್ರಕರಣದ ದೋಷಿಗಳನ್ನು ನಾನು ಚೆನ್ನಾಗಿ ಬಲ್ಲೆ. ನಾನು ಪ್ರಸ್ತುತ ದೊಡ್ಡ ಧರ್ಮಸಂಕಟದಲ್ಲಿದ್ದೇನೆ; ಏಕೆಂದರೆ ಸತ್ಯ ಹೇಳಿದರೆ ಜೀವಕ್ಕೆ ಅಪಾಯವಿದೆ ಮತ್ತು ಸುಮ್ಮನಿದ್ದರೆ ಜನರು ನನ್ನ ಶಕ್ತಿಯ ಮೇಲೆ ಪ್ರಶ್ನೆ ಎತ್ತುತ್ತಾರೆ, ಎಂದು ಹೇಳಿದರು.