|

ನವದೆಹಲಿ – ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಇವರು ಒಂದು ರಹಸ್ಯ ಬಯಲು ಪಡಿಸಿದ್ದಾರೆ. ಅವರು, ‘೧೯೯೯ ರಲ್ಲಿ ಮೊಹಾಲಿ (ಪಂಜಾಬ) ಅಲ್ಲಿ ಒಂದು ಪಂದ್ಯದಲ್ಲಿ ನಾನು ಭಾರತದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಇವರ ಮೂಳೆಮುರಿಯಲು ಬಯಸಿದ್ದೆ.’ ಎಂದು ಅವರು ಹೇಳಿದರು. ಬರುವ ಆಗಸ್ಟ್ ೨೮ ರಂದು ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಏಷ್ಯಾ ಕಪ್ ಸ್ಪರ್ಧೆಯ ಪಂದ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟ ಆಟಗಾರ ವೀರೇಂದ್ರ ಸೆಹ್ವಾಗ್ ಇವರ ಜೊತೆ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಅಖ್ತರ್ ಇವರು ಮೇಲಿನ ರಹಸ್ಯ ಬಯಲು ಮಾಡಿದ್ದಾರೆ. ಈ ಮೊದಲು ಸಹ ಶೋಯಬ್ ಅಖ್ತರ್ ಇವರು ಸಚಿನ್ ತೆಂಡೂಲ್ಕರ್ ಇವರ ಬಗ್ಗೆ ಇದೇ ರೀತಿಯ ರಹಸ್ಯ ಬಯಲು ಮಾಡಿದ್ದರು.
ಅಖ್ತರ್ ತಮ್ಮ ಮಾತು ಮುಂದುವರೆಸುತ್ತಾ, ಈ ಪಂದ್ಯದ ಮೊದಲು ನಾನು ಭಾರತೀಯ ಆಟಗಾರರನ್ನು ಗಾಯಗೊಳಿಸುವ ಯೋಜನೆ ಮಾಡಿದ್ದೆ. ಅದರ ಪ್ರಕಾರ ನಾನು ಅವರ ತಲೆ ಮತ್ತು ಮೂಳೆಯನ್ನು ಗುರಿಯಾಗಿಸಿ, ಬೌಲಿಂಗ್ ಮಾಡುತ್ತಿದ್ದೆ. ಸೌರವ್ ಗಂಗೂಲಿ ಇವರಿಗಾಗಿಯೇ ಈ ಯೋಜನೆ ಮಾಡಲಾಗಿತ್ತು. ನಮ್ಮ ಸಂಘದ ಸಭೆಯಲ್ಲಿ ಇದರ ಬಗ್ಗೆ ಚರ್ಚೆಯೂ ಆಗಿತ್ತು. ನನಗೆ, ನೀನು ವೇಗವಾಗಿ ಬೌಲಿಂಗ್ ಮಾಡುವಾಗ ಭಾರತೀಯ ಆಟಗಾರರನ್ನು ಗಾಯಗೊಳಿಸು. ಆಟಗಾರರನ್ನು ಔಟ್ ಮಾಡುವ ಕೆಲಸ ಬೇರೆ ಬೌಲರ್‌ಗಳು ಮಾಡುತ್ತಾರೆ ಎಂದು ಹೇಳಿದ್ದರು. ಇದರ ಮಾಹಿತಿ ಪಂದ್ಯ ಮುಗಿದ ನಂತರ ನಾನು ಗಾಂಗೂಲಿಯವರಿಗೆ ನೀಡಿದ್ದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ನೇಪಾಳದ ೧ ರೂಪಾಯಿಯ ಹೊಸ ನಾಣ್ಯದಿಂದ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ತೋರಿಸಲಾಗಿದ್ದ ನಕ್ಷೆಯನ್ನು ತೆಗೆದುಹಾಕಿದೆ
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !