ಪಾಕಿಸ್ತಾನ ನಮಗೆ ಬೆನ್ನಿಗೆ ಚೂರಿ ಹಾಕಿದೆ ! – ನಾಗರೀಕರ ಆರೋಪ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ವಿರೋಧದಲ್ಲಿ ಹಿಂಸಾತ್ಮಕ ಪ್ರತಿಭಟನೆ

ಶ್ರೀನಗರ (ಜಮ್ಮು ಕಾಶ್ಮೀರ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರಕಾರ ಸಂವಿಧಾನದ ೧೫ ನೇ ಸುಧಾರಣೆ ಜಾರಿ ಮಾಡಿದೆ. ಈ ಸುಧಾರಣೆ ಮೂಲಕ ಪಾಕಿಸ್ತಾನವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕಿಂತ ಮುಂಚೆ ‘ಸ್ವತಂತ್ರ್ಯ’ ಎಂಬ ಶಬ್ದ ಜೋಡಿಸಿದೆ. ಈ ಸುಧಾರಣೆಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಆರ್ಥಿಕ ಮತ್ತು ಸರಕಾರಿ ಅಧಿಕಾರ ಈಗ ಪಾಕಿಸ್ತಾನ ಸರಕಾರದ ಕಡೆಗೆ ಹೋಗಿದೆ. ಇದಕ್ಕೆ ಇಲ್ಲಿಯ ನಾಗರೀಕರಿಂದ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಇಲ್ಲಿಯ ಚಾರಹೋಯಿ, ಕೋಟಲಿ, ಬಾಗ, ನಾರ, ಚಾಕ್ಸವಾರಿ, ರಾವಲಕೋಟ, ನೀಲಮ ಘಾಟಿ, ಮುಜಫ್ಫರಬಾದ ಮುಂತಾದ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ನಾಗರೀಕರ ಪ್ರಕಾರ, ಪಾಕಿಸ್ತಾನ ಯಾವಾಗಲೂ ಕಾಶ್ಮೀರದ ವಿಭಜನೆ ನಡೆಸುವ ಸಂಚನ್ನು ನಿರ್ಮಿಸುತ್ತಿದೆ. ಕಾಶ್ಮೀರ ಒಟ್ಟಾಗುವುದು ಎಂದು ನಮಗೆ ಆಶಯವಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾಜಿ ಪ್ರಧಾನಿ ಫಾರೂಕ ಹೈದರ್ ಮತ್ತು ಪಿಟಿಐ ಪಕ್ಷದ ತನವೀರ ಇಲಿಯಾಸ್ ಇವರು ನಮ್ಮ ಬೆನ್ನಿಗೆ ಚೂರಿ ಹಾಕಿದರೆಂದು ಆರೋಪಿಸಿದ್ದಾರೆ.