ಪ್ರಧಾನಿಯವರ ಪ್ರವಾಸದ ಸಂದರ್ಭದಲ್ಲಿ ಪಂಜಾಬನಲ್ಲಿ ಖಲಿಸ್ತಾನೀ ಭಯೋತ್ಪಾದಕರಿಂದ ದಾಳಿಯ ಸಾಧ್ಯತೆ

ಚಂದಿಗಡ – ಪ್ರಧಾನಿ ಮೋದಿ ಅವರು ಆಗಸ್ಟ್ ೨೪ ರಂದು ಪಂಜಾಬದ ಮೊಹಾಲಿ ನಗರದ ಪ್ರವಾಸ ಮಾಡುವವರಿದ್ದಾರೆ. ಅವರು ‘ಟಾಟಾ ಕ್ಯಾನ್ಸರ್ ಹಾಸ್ಪಿಟಲ್’ನ ಉದ್ಘಾಟನೆ ಮಾಡುವವರಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಚಂದಿಗಡ್ ಮತ್ತು ಮೊಹಾಲಿಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ. ಖಲಿಸ್ತಾನೀ ಭಯೋತ್ಪಾದಕರು ಯಾವುದೇ ಬಸ್ ನಿಲ್ದಾಣದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ, ಎಂದು ಕೇಂದ್ರ ಗುಪ್ತಚರ ಇಲಾಖೆ ಪಂಜಾಬ್ ಸರಕಾರಕ್ಕೆ ಮಾಹಿತಿ ನೀಡಿದೆ.

೧. ಕೆಲವು ದಿನಗಳ ಹಿಂದೆ ಪಂಜಾಬ್ ಪೊಲೀಸರು ದೆಹಲಿಯಿಂದ ೪ ಖಲಿಸ್ತಾನೀ ಭಯೋತ್ಪಾದಕರನ್ನು ಬಂಧಿಸಿದ್ದರು. ಅವರು ವಿಚಾರಣೆಯ ಸಮಯದಲ್ಲಿ, ದೆಹಲಿ, ಮೊಗಾ ಮತ್ತು ಮೊಹಾಲಿಯಲ್ಲಿ ಭಯೋತ್ಪಾದಕರು ರಕ್ತಪಾತ ನಡೆಸುವರು ಎಂದು ಹೇಳಿದ್ದರು.

೨. ಪಂಜಾಬನ ಕೆಲವು ನಾಯಕರು ಮತ್ತು ಅಧಿಕಾರಿಗಳೂ ಸಹ ಭಯೋತ್ಪಾದಕರ ಗುರಿ ಇದೆ. ಅದರಲ್ಲಿ ಮಾಜಿ ಉಪಮುಖ್ಯಮಂತ್ರಿ ಸುಖಜಿಂದರ ರಂಧವಾ, ಮಾಜಿ ಸಚಿವ ಗುರುಕಿರತ ಕೋಟಲಿ, ವಿಜಯಂದರ ಸಿಂಗಲಾ ಮತ್ತು ಪರಿಮಿಂದರ ಪಿಂಕಿ ಈ ಮುಖ್ಯ ಹೆಸರುಗಳು ಇವೆ. ಕೇಂದ್ರ ಗುಪ್ತಚರ ಸಂಸ್ಥೆ ಪಂಜಾಬ ಪೋಲಿಸರಿಗೆ ೧೦ ಜನರ ಪಟ್ಟಿ ಕಳುಹಿಸಿದ್ದಾರೆ ಇವರೆಲ್ಲರ ಭದ್ರತೆ ಹೆಚ್ಚಿಸುವಂತೆ ಆದೇಶ ನೀಡಲಾಗಿದೆ.

ಸಂಪಾದಕೀಯ ನಿಲುವು

ಖಲಿಸ್ತಾನೀ ಭಯೋತ್ಪಾದಕರ ಸೊಕ್ಕು ಈ ಮೊದಲೇ ಮುರಿಯಲಾಗಿದೆ. ಈಗ ಇದರಲ್ಲಿ ಮತ್ತೆ ಚಟುವಟಿಕೆ ನಡೆಯುತ್ತಿದೆ. ಈ ಭಯೋತ್ಪಾದಕರು ಮತ್ತೆ ತಲೆ ಎತ್ತುವ ಮೊದಲೇ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ !