ಕೀಟಗಳ ಕಾಟ ಮತ್ತು ಸ್ವಚ್ಛತೆಯ ಕೊರತೆ
ರಾಜ್ಯಾದ್ಯಂತ 31 ಕಡೆಗಳಲ್ಲಿ ದಾಳಿ

ಮುಂಬಯಿ – ಮಹಾರಾಷ್ಟ್ರದ ಆಹಾರ ಸುರಕ್ಷತಾ ಆಯುಕ್ತ ತುಕಾರಾಂ ಮುಂಢೆ ಅವರು ಮುಂಬಯಿನಲ್ಲಿ ದಿಟ್ಟ ಕ್ರಮ ಕೈಗೊಂಡು, ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ 6 ಹೋಟೆಲ್‌ಗಳು, ಬೇಕರಿ ಮತ್ತು ಕ್ಲಬ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ ಹಾಗೂ ಅವರ ಆಹಾರ ವ್ಯವಹಾರ ಪರವಾನಗಿಗಳನ್ನು ಅಮಾನತುಗೊಳಿಸಿದ್ದಾರೆ. ರಾಜ್ಯಾದ್ಯಂತ ನಡೆಸಲಾದ ವಿಶೇಷ ತಪಾಸಣಾ ಅಭಿಯಾನದಲ್ಲಿ ಅಸ್ವಚ್ಛತೆ, ಅವಧಿ ಮುಗಿದ ಆಹಾರ ಪದಾರ್ಥಗಳ ಮಾರಾಟ, ತಪ್ಪು ಮಾಹಿತಿಯ ಲೇಬಲ್, ಕೀಟಗಳ ಕಾಟ ಮತ್ತು ಅಗತ್ಯ ದಾಖಲೆಗಳ ಕೊರತೆಯಂತಹ ಹಲವು ಗಂಭೀರ ಲೋಪಗಳು ಕಂಡುಬಂದಿವೆ. ಈ ಅಭಿಯಾನದಡಿ ರಾಜ್ಯದ 31 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ತಪಾಸಣೆಯ ವೇಳೆ 34 ಲಕ್ಷದ 87 ಸಾವಿರದ 603 ರೂಪಾಯಿ ಮೌಲ್ಯದ ನಿಷೇಧಿತ ಗುಟ್ಕಾ, ಪಾನ್ ಮಸಾಲಾ ಮತ್ತು ಇತರ ಆಹಾರ ಪದಾರ್ಥಗಳ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ಆಹಾರ ಪದಾರ್ಥಗಳ ಮಾರಾಟ, ಸಾಗಾಟ ಮತ್ತು ವಿತರಣೆ ಮಾಡುತ್ತಿದ್ದ 19 ಜನರನ್ನು ಬಂಧಿಸಲಾಗಿದ್ದು, 3 ವಾಹನಗಳನ್ನು ಜಪ್ತಿ ಮಾಡಲಾಗಿದೆ.
1. ನಾರಿಮನ್ ಪಾಯಿಂಟ್‌ನಲ್ಲಿರುವ ‘ಫ್ಲಿಂಟ್ ಆಂಡ್ ವಾರ್ಸಾ’ ಹೋಟೆಲ್‌ನಲ್ಲಿ ತಪ್ಪು ಮಾಹಿತಿ ಹೊಂದಿದ್ದ ಲೇಬಲ್ ಉಳ್ಳ ಆಹಾರ ಪದಾರ್ಥಗಳು ಕಂಡುಬಂದಿದ್ದು, ಅವಧಿ ಮುಗಿದಿದ್ದ ಆಹಾರ ಪದಾರ್ಥಗಳನ್ನು ತಕ್ಷಣವೇ ನಾಶಪಡಿಸಲಾಯಿತು.
2. ಬೋರಿವಲಿಯ ಬೇಕರಿಯೊಂದರಲ್ಲಿ ಭಾರಿ ಪ್ರಮಾಣದ ಅಸ್ವಚ್ಛತೆ ಕಂಡುಬಂದಿದೆ.
3. ಭಾಂಡುಪ್, ಸಾಂತಾಕ್ರೂಜ್, ಅಂಧೇರಿ ಮತ್ತು ಬಾಂದ್ರಾ ಭಾಗದ ಕೆಲವು ಹೋಟೆಲ್‌ಗಳಲ್ಲೂ ಸ್ವಚ್ಛತೆಯ ಕೊರತೆ ಹಾಗೂ ಜಿರಳೆ ಮತ್ತು ಇಲಿಗಳ ಕಾಟ ಇರುವುದು ಕಂಡುಬಂದಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್