ಸರಕಾರಿ ಆದೇಶವನ್ನು ಧಿಕ್ಕರಿಸಿ ರಾಷ್ಟ್ರಗೀತೆ ಹಾಡದೆ ಇರುವ ಬೆಂಗಳೂರಿನ ೩ ಖಾಸಗಿ ಶಾಲೆಯ ಮೇಲೆ ಕ್ರಮ

ಬಿಷಪ್ ಕಾಟನ್, ಸೇಂಟ್ ಜೋಸೆಫ್ ಮತ್ತು ಬಾಲ್ಡವಿನ್ ಗರ್ಲ್ಸ್ ಈ ಶಾಲೆಗಳ ಸಮಾವೇಶವಿದೆ

ಬೆಂಗಳೂರು – ಕರ್ನಾಟಕ ಸರಕಾರ ರಾಜ್ಯದ ಎಲ್ಲಾ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಿದೆ. ರಾಜ್ಯ ಸರಕಾರದ ಈ ಆದೇಶ ಎಲ್ಲಾ ಸರಕಾರಿ, ಖಾಸಗಿ ಮತ್ತು ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ‘ಯಾವುದಾದರೊಂದು ಶೈಕ್ಷಣಿಕ ಸಂಸ್ಥೆಗೆ ಸಾಮೂಹಿಕ ರಾಷ್ಟ್ರಗೀತೆ ಹಾಡಲು ಸ್ಥಳಾವಕಾಶ ಇರದಿದ್ದರೆ, ಆಗ ವಿದ್ಯಾರ್ಥಿಗಳು ಅವರವರ ತರಗತಿಯಲ್ಲಿ ರಾಷ್ಟ್ರಗೀತೆ ಹಾಡಬಹುದು, ಎಂದು ಸಹ ಸರಕಾರ ಆದೇಶದಲ್ಲಿ ಹೇಳಿದೆ.

೩ ಖಾಸಗಿ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಣ ಸಚಿವರ ಆದೇಶ

ಈ ರೀತಿಯ ಆದೇಶ ಇದ್ದರೂ ರಾಜಧಾನಿ ಬೆಂಗಳೂರಿನ ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಸಾಮೂಹಿಕ ರಾಷ್ಟ್ರಗೀತೆ ಹಾಡದೇ ಇರುವ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ದೊರೆತಿವೆ. ಇದರ ನಂತರ ನಡೆಸಲಾದ ತನಿಖೆಯಲ್ಲಿ ಬೆಂಗಳೂರಿನ ೩ ಖಾಸಗಿ ಶಾಲೆಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ರಾಷ್ಟ್ರಗೀತೆ ಹಾಡದೆ ಇರುವುದು ಕಂಡು ಬಂದಿತ್ತು. ಇದರಲ್ಲಿ ಬಿಷಪ್ ಕಾಟನ್ ಬಾಯ್ಸ್ ಹೈಸ್ಕೂಲ್, ಸೆಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್ ಮತ್ತು ಬಾಲ್ಡಿವಿನ್ ಗರ್ಲ್ಸ್ ಹೈ ಸ್ಕೂಲ್ ಇವುಗಳ ಸಮಾವೇಶ ಇವೆ. ಈ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯದ ಶಿಕ್ಷಣ ಸಚಿವ ಬಿ.ಎಸ್. ನಾಗೇಶ ಅವರು ಆದೇಶ ನೀಡಿದ್ದಾರೆ.

ಸಂಪಾದಕೀಯ ನಿಲುವು

ರಾಷ್ಟ್ರಗೀತೆ ಹಾಡದೆ ಇರುವ ಕ್ರೈಸ್ತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ರಾಷ್ಟ್ರಪ್ರೇಮದ ಸಂಸ್ಕಾರ ಮಾಡುವುದಿಲ್ಲ, ಇದು ಇದರಿಂದ ಸ್ಪಷ್ಟವಾಗುತ್ತದೆ. ಸರಕಾರವು ಇಂತಹ ಸಂಸ್ಥೆಯ ಶಾಲೆಗಳ ಅನುಮತಿ ರದ್ಧ ಪಡೆಸಬೇಕು !