‘ಅವರು (ಹಿಂದುತ್ವನಿಷ್ಠರು) ಗಾಂಧೀಜಿ ಅವರ ಕೊಲೆ ಮಾಡಿದರು, ನನ್ನನ್ನು ಬಿಡುವರೇ ?’ (ಅಂತೆ)

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇವರಿಗೆ ಕೊಲೆ ಬೆದರಿಕೆ ಇರುವ ದಾವೆ

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

ಬೆಂಗಳೂರು – ಕರ್ನಾಟಕದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ತಮಗೆ ಕೊಲೆ ಬೆದರಿಕೆ ನೀಡಲಾಗಿದೆ ಎಂದು ದಾವೆ ಮಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಈ ಜನರು (ಹಿಂದುತ್ವನಿಷ್ಠರು) ಮ. ಗಾಂಧೀಜಿಯವರ ಕೊಲೆ ಮಾಡಿದವರು ನನ್ನನ್ನು ಬಿಡುವರೆ ? ಗಾಂಧಿಯನ್ನು ಗೋಡಸೆಯವರು ಗುಂಡು ಹಾರಿಸಿದ್ದರು. ಆದರೂ ಸಹ ಇವರು (ಹಿಂದುತ್ವನಿಷ್ಠರು) ಗೋಡೆಸೆಯವರ ಪೂಜೆ ಮಾಡುತ್ತಾರೆ. ಎಂದು ಹೇಳಿದರು.

ಸಿದ್ದರಾಮಯ್ಯ ಅವರು ತಮ್ಮ ಮಾತು ಮುಂದುವರಿಸಿ, ನಾಣು ಸಾವರ್ಕರ್ ಇವರ ಫಲಕಗಳಿಗೆ ವಿರೋಧಿಸುತ್ತಿದ್ದೆ. ಸಾವರ್ಕರ ಇವರು ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದರು. (ಕಾಂಗ್ರೆಸ್ಸಿನ ಗೋಬೆಲ್ಸ ನೀತಿ ! – ಸಂಪಾದಕರು) ಅವರಿಗೆ ಅವರು (ಹಿಂದುತ್ವನಿಷ್ಠರು) ‘ವೀರ ಸಾವರಕರ’ ಎಂದು ಸಂಭೋಧಿಸುತ್ತಾರೆ. ಸಾವರ್ಕರ ಬಗ್ಗೆ ನನ್ನ ವೈಯಕ್ತಿಕ ಶತ್ರುತ್ವವಿಲ್ಲ; ಆದರೆ ಅವರ ನಡುವಳಿಕೆ ಸರಿ ಇರಲಿಲ್ಲ. ಶಿವಮೊಗ್ಗದ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಭಾಜಪ ಸಾವರ್ಕರರ ಛಾಯಾಚಿತ್ರ ಹಾಕಲು ಪ್ರಯತ್ನಿಸಿದರು. ಮುಸಲ್ಮಾನರು ಸಹ ಅವರಿಗೆ ಫ್ಲೆಕ್ಸ್ ಹಾಕಲು ಬಿಟ್ಟರು. ಆದರೆ ಅವರು (ಭಾಜಪದವರು) ಮುಸಲ್ಮಾನ ಪ್ರದೇಶಕ್ಕೆ ಹೋಗಿ ಹೀಗೇಕೆ ಮಾಡುತ್ತಾರೆ ? ಟಿಪ್ಪು ಸುಲ್ತಾನ ಇವರ ಚಿತ್ರಕ್ಕೆ ಏಕೆ ವಿರೋಧಿಸುತ್ತಾರೆ ?(ಟಿಪ್ಪು ಸುಲ್ತಾನ್ ಲಕ್ಷಾಂತರ ಹಿಂದುಗಳನ್ನು ಮತಾಂತರಿಸಿದ್ದನು, ಅವರ ಕೊಲೆ ಮಾಡಿದ್ದನು ಹಾಗೂ ಅಸಂಖ್ಯಾತ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದನು. ಅದರಿಂದ ಅವನಿಗೆ ವಿರೋಧಿಸಲಾಗುತ್ತದೆ ! ಟಿಪ್ಪು ಕಾಂಗ್ರೆಸ್ಸಿನ ವಂಶಜ ಇರುವ ಹಾಗೆ ಕಾಂಗ್ರೆಸ್ಸಿಗೆ ಅವನ ಮೇಲೆ ಕನಿಕರ ಬರುತ್ತದೆ, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು)

ಹಿಂದುತ್ವನಿಷ್ಠರು ಮತ್ತು ಭಾಜಪದಿಂದ ವಿರೋಧ

ಸಿದ್ದರಾಮಯ್ಯ ಅವರ ಮೇಲಿನ ಹೇಳಿಕೆಯ ನಂತರ ಹಿಂದುತ್ವನಿಷ್ಠ ಸಂಘಟನೆ ಮತ್ತು ಭಾಜಪದ ಕಾರ್ಯಕರ್ತರಿಂದ ಅವರ ವಿರೋಧದಲ್ಲಿ ಆಂದೋಲನ ಮಾಡಿದರು. ಕೊಡಗಿನಲ್ಲಿ ಅವರ ವಾಹನದ ಮೇಲೆ ಮೊಟ್ಟೆಗಳನ್ನು ಎಸೆಯಲಾಯಿತು, ಕಪ್ಪು ಬಾವುಟ ಹಿಡಿದು ವಿರೋಧಿಸಲಾಯಿತು.

ಸಂಪಾದಕೀಯ ನಿಲುವು

  • ಗಾಂಧೀಜಿಯವರ ಹತ್ಯೆಯ ನಂತರ ಸಂಪೂರ್ಣ ದೇಶದಲ್ಲಿ ಕಾಂಗ್ರೆಸ್ಸಿಗರು ಸಾವಿರಾರು ಬ್ರಾಹ್ಮಣರ ಕೊಲೆ ಮಾಡಿರುವ ಆರೋಪವಿದೆ.
  • ೧೯೮೪ ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ದೆಹಲಿಯಲ್ಲಿ ಕಾಂಗ್ರೆಸ್ಸಿಗರಿಂದ ಮೂರುವರೆ ಸಾವಿರ ಸಿಖರ ಹತ್ಯೆ ಮಾಡಿರುವ ಆರೋಪವಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಇಬ್ಬರು ನಾಯಕರಿಗೆ ಶಿಕ್ಷೆ ಕೂಡ ಆಗಿದೆ, ಈ ವಿಷಯವಾಗಿ ಸಿದ್ದರಾಮಯ್ಯ ಏಕೆ ಮಾತನಾಡುವುದಿಲ್ಲ ?