ಲಖಿಮಪುರ ಖೀರಿ (ಉತ್ತರಪ್ರದೇಶ) – ಲಖಿಮಪೂರ ಖೀರಿ ಜಿಲ್ಲೆಯ ದೌಲತಾಪೂರ ಗ್ರಾಮದಲ್ಲಿ ಕ್ರೈಸ್ತ ಮಶನರಿಗಳಿಂದ ಹಿಂದೂಗಳಿಗೆ ಮತಾಂತರ ಗೊಳಿಸಲು ಆಮಿಷ ತೋರಿಸಲಾಗುತ್ತಿದೆ, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
लखीमपुर खीरी के गाँव में इलाज के बहाने ईसाई धर्मांतरण का लालच, 7 महीने से चल रहा था दुष्प्रचार: यूपी पुलिस ने 2 को दबोचा#LakhimpurKheri #Conversionhttps://t.co/FRp3rxdiPC
— ऑपइंडिया (@OpIndia_in) August 20, 2022
೧. ಹಿಂದೂಗಳನ್ನು ಮತಾಂತರಗೊಳಿಸಲು ಆಗಸ್ಟ್ ೧೯ ರಂದು ಕ್ರೈಸ್ತ ಮಿಶನರಿಯಿಂದ ಗ್ರಾಮದಲ್ಲಿ ದಯಾರಾಮ ಎಂಬ ವ್ಯಕ್ತಿಯ ಮನೆಯಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
೨. ಈ ಕಾರ್ಯಕ್ರಮದಿಂದ ಗ್ರಾಮದ ಪ್ರಮುಖ ದೀಪಕ ಜಾಯಸವಾಲ ಮತ್ತು ಗ್ರಾಮಸ್ಥರು, ಇಲ್ಲಿ ಪಂಜಾಬನಿಂದ ಕ್ರೈಸ್ತ ಮಿಶಿನರಿಗಳಿಗೆ ಸಂಬಂಧಿಸಿದಂತೆ ಜನರು ಬಂದಿದ್ದರು.
೩. ಈ ಕಾರ್ಯಕ್ರಮದಲ್ಲಿ ಮೊದಲು ಕ್ರೈಸ್ತರ ಭಜನೆ ಮತ್ತು ಪ್ರವಚನ ನಡೆಯಿತು. ಅದರ ನಂತರ ಕ್ರೈಸ್ತ ಧರ್ಮವನ್ನು ಶ್ಲಾಘಿಸಲಾಯಿತು. ನಂತರ ಉಪಸ್ಥಿತವಿರುವ ಗ್ರಾಮಸ್ಥರಿಗೆ ಕ್ರೈಸ್ತ ಧರ್ಮ ಸ್ವೀಕರಿಸುವುದರ ಬಗ್ಗೆ ಹೇಳಲಾಯಿತು.
೪. ಗ್ರಾಮಸ್ಥರು, ಈ ಕಾರ್ಯಕ್ರಮದಲ್ಲಿ ಜನರನ್ನು ಕರೆಸಿ ಅವರ ರೋಗಗಳನ್ನು ದೂರಗೊಳಿಸುವುದರ ಜೊತೆಗೆ ಇತರ ಆಮಿಷಗಳು ತೋರಿಸಲಾಯಿತು. ಗ್ರಾಮದಲ್ಲಿ ೭ ತಿಂಗಳಿನಿಂದ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿವೆ. ಆದ್ದರಿಂದ ಗ್ರಾಮದ ೩-೪ ಜನರು ಮತಂತರ ಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
೫. ಗ್ರಾಮಸ್ಥರು ಈ ಕಾರ್ಯಕ್ರಮದ ಮಾಹಿತಿ ಪೊಲೀಸರಿಗೆ ನೀಡಿದ ನಂತರ, ಪೊಲೀಸರು, ತಹಸೀಲದಾರರು, ಮತ್ತು ಕಾರ್ಯಕಾರಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದರು. ಅವರನ್ನು ನೋಡುತ್ತಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಓಡಿ ಹೋದರು. ನಂತರ ಪೊಲೀಸರು ಅನುಮತಿ ಇಲ್ಲದೆ ಕಾರ್ಯಕ್ರಮದ ಆಯೋಜನೆ ಮಾಡಿರುವುದಕ್ಕೆ ಇಬ್ಬರನ್ನು ಬಂಧಿಸಿದರು.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದೆಂದು ಭಾಜಪ ಸರಕಾರ ಹೆಚ್ಚಿನ ಪ್ರಯತ್ನ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! |