ಕರ್ನಾಟಕದಲ್ಲಿ ಶ್ರೀ ಗಣೇಶ ಮಂಟಪದಲ್ಲಿ ಶ್ರೀ ಗಣೇಶ ಮೂರ್ತಿಯ ಪಕ್ಕದಲ್ಲಿ ವೀರ ಸಾವರಕರ ಅವರ ಛಾಯಾಚಿತ್ರ ಹಾಕಲಾಗುವುದು ! – ಹಿಂದೂ ಸಂಘಟನೆಗಳ ನಿರ್ಧಾರ

ಬೆಂಗಳೂರು – ಕರ್ನಾಟಕದ ಹಿಂದೂ ಸಂಘಟನೆಗಳು ಈ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿಯ ಪಕ್ಕದಲ್ಲಿ ವೀರ ಸಾವರಕರರ ಛಾಯಾಚಿತ್ರ ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆಗಸ್ಟ್ ೩೧ ರಿಂದ ಶ್ರೀ ಗಣೇಶೋತ್ಸವ ಆಚರಣೆ ಮಾಡಲಾಗುವುದು ಇದರಲ್ಲಿ ಸಮಾಜದ ಎಲ್ಲಾ ಜನರು ಸಹಭಾಗಿ ಆಗುತ್ತಾರೆ. ಕೊರೊನಾದಿಂದ ಕಳೆದ ಎರಡು ವರ್ಷದಿಂದ ಜನರಿಂದ ಈ ಉತ್ಸವ ಆಚರಿಸಲಾಗಲಿಲ್ಲ. ಇಂದಿನ ವರ್ಷ ಭವ್ಯ ಉತ್ಸವದ ಸಿದ್ಧತೆ ನಡೆಯುತ್ತಿದೆ.

ಶಿವಮೊಗ್ಗ ಮತ್ತು ಇತರ ಸ್ಥಳಗಳಲ್ಲಿ ಆಗಸ್ಟ್ ೧೫ ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ವೀರ ಸಾವರ್ಕರರ ಫಲಕ ಹಾಕಿದ್ದರಿಂದ ವಿವಾದ ನಡೆದಿತ್ತು. ಶ್ರೀ ಗಣೇಶೋತ್ಸವದಲ್ಲಿ ವೀರ ಸಾವರ್ಕರರ ಛಾಯಾಚಿತ್ರ ಗಣೇಶ ಮೂರ್ತಿಯ ಪಕ್ಕದಲ್ಲಿ ಹಾಕುವ ಹಿಂದೂ ಸಂಘಟನೆಯ ನಿರ್ಧಾರದಿಂದ ವಿವಾದ ಆಗುವ ಸಾಧ್ಯತೆ ಇದೆ. ರಾಜ್ಯದ್ಯಂತ ಪ್ರತಿಯೊಂದು ಓಣಿ ಓಣಿಗಳಲ್ಲಿ ಶ್ರೀ ಗಣೇಶ ಮಂಟಪ ತಯಾರಿಸಿ ಶ್ರೀ ಗಣೇಶೋತ್ಸವ ಆಚರಿಸಲಾಗುತ್ತದೆ.

ಗಣೇಶೋತ್ಸವದಲ್ಲಿ ವೀರ ಸಾವರ್ಕರರ ಬಗ್ಗೆ ಜನಜಾಗೃತಿ ಮೂಡಿಸುವುದು ! – ಪ್ರಮೋದ ಮುತಾಲಿಕ

ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಇವರು ಹಿಂದೂ ಕಾರ್ಯಕರ್ತರಿಗೆ ಶ್ರೀ ಗಣೇಶನ ಮೂರ್ತಿಯ ಹತ್ತಿರ ವೀರ ಸಾವರ್ಕರರ ಛಾಯಾಚಿತ್ರ ಹಾಕಲು ಕರೆ ನೀಡಿದ್ದಾರೆ. ಶ್ರೀರಾಮ ಸೇನೆ ಈ ಸಲದ ಗಣೇಶೋತ್ಸವವನ್ನು ವೀರ ಸಾವರ್ಕರರ ಉತ್ಸವ ಎಂದು ಆಚರಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ಗಣೇಶೋತ್ಸವದ ಕಾಲಾವಧಿಯಲ್ಲಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರರ ವಿಷಯವಾಗಿ ಜನಜಾಗೃತಿ ಮಾಡಲಾಗುವುದು.

ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಇವರು ಶಾಲೆಗಳಲ್ಲಿ ಶ್ರೀ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿದ್ದಾರೆ.