ಮೃತ ರೋಗಿಯ ಕೊರೋನಾ ಪರೀಕ್ಷಣೆಯ ವರದಿಯನ್ನು ಮೂರು ಬಾರಿ ಬದಲಾಯಿದ್ದರಿಂದ ಕಂಗೆಟ್ಟ ಕುಟುಂಬದವರು !

ಕೊರೋನಾ ಪರೀಕ್ಷಣೆಯ ವರದಿಯು ನಕಾರಾತ್ಮಕವಾಗಿದ್ದು ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ಸಮಯದಲ್ಲಿ ವ್ಯಕ್ತಿಯ ವರದಿಯಲ್ಲಿ ಸಕಾರಾತ್ಮಕ ಇದೆ ಎಂದು ತಿಳಿದನಂತರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಯಗೊಂಡರು.

ಆಂಬ್ಯುಲನ್ಸ್ ಮತ್ತು ಅಂತ್ಯಕ್ರಿಯೆಯ ಖರ್ಚಿಗಾಗಿ ಬೆಂಗಳೂರಿನಲ್ಲಿ ಮೂರುವರೆ ಸಾವಿರ ರೂಪಾಯಿಯ ಬದಲಿಗೆ ೬೦ ಸಾವಿರ ರೂಪಾಯಿಯ ಬೆಡಿಕೆ !

ಕೊರೋನಾ ಮಹಾಮಾರಿಯಿಂದಾಗಿ ದೇಶದಲ್ಲಿಯ ಜನರ ಸ್ಥಿತಿಯು ಚಿಂತಾಜನಕವಾಗಿರುವಾಗ ಜನರಿಗೆ ತಮ್ಮ ಕುಟುಂಬದವರನ್ನು ಬದುಕಿಸಲು ಪರಾಕಾಷ್ಠೆಯ ಪ್ರಯತ್ನ ಮಾಡಬೇಕಾಗುತ್ತಿದೆ. ಮಹಾಮಾರಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ

ಕಲಬುರ್ಗಿಯಲ್ಲಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಸ್ಪತ್ರೆಗೆ ದಾಖಲಾಗಲು ಆಟೊದಲ್ಲಿ ಅಲೆದ ಮಹಿಳೆ!

ಜಿಲ್ಲೆಯಲ್ಲಿ ಹಾಸಿಗೆ ಸಿಗದ ಕಾರಣ ರೋಗಿಗಳು ವಿವಿಧ ಆಸ್ಪತ್ರೆಗಳಿಗೆ ಅಲೆಯಬೇಕಾಗುತ್ತಿದೆ. ಇಲ್ಲಿನ ಬಸವ ನಗರದ 55 ವರ್ಷದ ಮಹಿಳೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡ ಕಾರಣ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದರು.

ಬೆಂಗಳೂರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ: ಮೂವರು ಮತಾಂಧರ ಬಂಧನ

ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪಶ್ಚಿಮ ಬಂಗಾಳ ಮೂಲದ ಮೂವರು ಮತಾಂಧರನ್ನು ಬಂಧಿಸಿದ್ದಾರೆ. ಬಂಧಿತರನ್ನು ನೌಶದ್ ಅಲಿ, ರಿಯಾಜುಲ್ ಶೇಕ್, ಸಮೀರ್ ಇವರು ಎಂದು ಗುರುತಿಸಲಾಗಿದೆ.

ರೆಮ್ಡೆಸಿವಿರ್ ಚುಚ್ಚುಮದ್ದಿನ ಹೆಸರಿನಲ್ಲಿ ಲವಣಯುಕ್ತ ನೀರು ಹಾಗೂ ಅಂಟಿಬಯೋಟಿಕ್ಸ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ನರ್ಸ್ ನ ಬಂಧನ

ರೆಮ್ಡೆಸಿವಿರ್ ಚುಚ್ಚು ಮದ್ದಿನ ಹೆಸರಿನಲ್ಲಿ ಅದರ ಬಾಟಲಿಯಿಂದ ಲವಣಯುಕ್ತ ನೀರು ಮತ್ತು ಅಂಟಿಬಯೋಟಿಕ್ಸ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ಗಿರೀಶ ಎಂಬ ನರ್ಸ್ ಅನ್ನು ಬಂಧಿಸಲಾಗಿದೆ.

ಹಾಸನದಲ್ಲಿ ರೇವ್ ಪಾರ್ಟಿ ಮೇಲೆ ನಡೆಸಿದ ದಾಳಿಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಬಂಧನ !

ಹಾಸನ ಜಿಲ್ಲೆಯ ರೇವ್ ಪಾರ್ಟಿ ಮೇಲೆ ನಡೆಸಿದ ದಾಳಿಯಲ್ಲಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ನಾರ್ಕೋಟಿಕ್ಸ್ ಮತ್ತು ಇಕಾನಮಿಕ್ ಕ್ರೈಮ್ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೆಬಲ್ ಶ್ರೀಲತಾ ಅವರನ್ನು ಬಂಧಿಸಲಾಗಿದ್ದು, ಅವರ ಪುತ್ರನು ಪರಾರಿಯಾಗಿದ್ದಾನೆ. ಶ್ರೀಲತಾ ಮೂಲತಃ ಕೇರಳದವರಾಗಿದ್ದು ಅವರು ಕಳೆದ ೪ ವರ್ಷಗಳಿಂದ ನಾರ್ಕೊಟೆಕ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ಪೀಡಿತ ಮೃತದೇಹಗಳ ಅಂತ್ಯಕ್ರಿಯೆಗೆ ೩೫ ಸಾವಿರದಿಂದ ೪೦ ಸಾವಿರ ಹಣವನ್ನು ಅಕ್ರಮವಾಗಿ ತೆಗೆದುಕೊಳ್ಳಲಾಗುತ್ತಿದೆ !

ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕೊರೋನಾ ಪೀಡಿತ ರೋಗಿಗಳ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿಲ್ಲ, ಬದಲಾಗಿ ಆಂಬ್ಯುಲೆನ್ಸ್‌ನಿಂದ ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಪಿಸಿದ ವಿದ್ಯುತ್ ಶವಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಕೊರೋನಾವನ್ನು ತಡೆಯಲು ಮಠಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗ್ನಿಹೋತ್ರವನ್ನು ಮಾಡಲು ಆದೇಶ ನೀಡುವೆವು! – ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಘೋಷಣೆ

ಅನೇಕ ಮಠಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗ್ನಿಹೋತ್ರವನ್ನು ನಡೆಸಲಾಗುತ್ತಿದೆ. ಸರಕಾರವು ಸರಕಾರಿ ಮಟ್ಟದಲ್ಲಿ ನಾಗರಿಕರಿಗೆ ಹಾಗೂ ಎಲ್ಲಿ ಸಾಧ್ಯವೋ ಅಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿಹೋತ್ರ ಮಾಡುವಂತೆ ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಮೈಸೂರಿನಲ್ಲಿ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದುದರಿಂದ ಗೀತೆಯ ೩ ಸಾವಿರ ಪ್ರತಿಗಳು ಸುಟ್ಟುಕರಕಲು

ದುಷ್ಕರ್ಮಿಗಳು ಗ್ರಂಥಾಲಯಕ್ಕೆ ಹಚ್ಚಿದ್ದ ಬೆಂಕಿಯಲ್ಲಿ ಭಗವದ್ಗೀತೆಯ ೩ ಸಾವಿರ ಪ್ರತಿಗಳು ಮತ್ತು ಕುರಾನ್ ಮತ್ತು ಬೈಬಲ್‍ನ ೧ ಸಾವಿರ ಪ್ರತಿಗಳು ನಾಶವಾದವು. ಈ ಗ್ರಂಥಾಲಯವು ಸೈಯದ್ ಇಸಾಕ್ ಎಂಬ ವ್ಯಕ್ತಿಗೆ ಸೇರಿದೆ. ಇಲ್ಲಿ ಒಟ್ಟು ೧೧ ಸಾವಿರ ಪುಸ್ತಕಗಳು ಇದ್ದವು.

ಕದ್ದಿದ್ದ ದೇಗುಲದ ಘಂಟೆ ವಾಪಸ್ ಇಟ್ಟ ಕಳ್ಳರು

ಆನಂದಪುರ ಹೊಸಗುಂದದ ಶ್ರೀ ಕಂಚಿಕಾಳಮ್ಮ ದೇವಾಲಯದಲ್ಲಿ ಕಳವು ಮಾಡಿದ್ದ ಎರಡು ಘಂಟೆಗಳನ್ನು ಕಳ್ಳರು ೫೦೦ ರೂ. ತಪ್ಪೊಪ್ಪಿಗೆ ಕಾಣಿಕೆ ಸಹಿತ ಮಂಗಳವಾರ ವಾಪಸ್ ಇಟ್ಟು ಹೋಗಿದ್ದಾರೆ. ಮಾರ್ಚ್ ೨೪ ರಂದು ಸಂಜೆ ಅರ್ಚಕರು ದೇವಾಲಯದ ಪೂಜಿ ಮುಗಿಸಿ ಬೀಗ ಹಾಕಿ ಹೊರಡುವ ಸಮಯದಲ್ಲಿ ಪ್ರವೇಶದ್ವಾರದ ಬಳಿ ಇರುವ ದೊಡ್ಡ ೨ ಘಂಟೆಗಳನ್ನು ಬೈಕ್‌ನಲ್ಲಿ ಬಂದಿದ್ದ ಮೂವರು ಕದ್ದು ಪರಾರಿಯಾಗಿದ್ದರು.