‘ಗೌರಿ ಲಂಕೇಶ ಹತ್ಯೆ ಪ್ರಕರಣ : ವಾಸ್ತವ ಮತ್ತು ವಿಪರ್ಯಾಸ ವಿಷಯದಲ್ಲಿ ಆನ್‌ಲೈನ್ ವಿಚಾರಸಂಕೀರಣ
ಹಿಂದೂಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ
ಬೆಂಗಳೂರು – ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿಸಲಾದ ಸಂಶಯಾಸ್ಪದ ಆರೋಪಿಗಳು ಅಮಾಯಕರು ಮತ್ತು ಅವರ ಹಿಂದೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ. ಇಂತಹ ಅಮಾಯಕರ ಮೇಲೆ ಭಯೋತ್ಪಾದನಾ ಚಟುವಟಿಕೆಗಳಿಗೆ ಹಾಕುವ ಕೋಕಾ ಕಾಯದೆಗಳನ್ನು ಹಾಕಲಾಗಿದೆ. ಆದರೆ ನಿಜವಾಗಿ ಭಯೋತ್ಪಾದನೆ ಕೃತ್ಯ ಮಾಡುವ, ದಂಗೆ ಮಾಡುವ, ಹಿಂದುತ್ವನಿಷ್ಠರನ್ನು ಹತ್ಯೆ ಮಾಡಿದ ಮತಾಂಧ ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್.ಐ.)ದ ಕಾರ್ಯಕರ್ತರ ಮೇಲೆ ಈ ಕಾಯದೆಗಳ ಕಲಮ್‌ಗಳನ್ನು ಅನ್ವಯ ಮಾಡದ ಕಾರಣ ಅವರು ನಿರ್ಭಯರಾಗಿ ಇಲ್ಲದೇ ತಿರುಗುತ್ತಿದ್ದಾರೆ.
ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿ ವಿಶೇಷ ತನಿಖಾ ದಳವನ್ನು ರಚಿಸಲಾಗಿತ್ತು. ಆದರೆ ೨೫ ಹಿಂದುತ್ವನಿಷ್ಠರ ಹತ್ಯೆಯ ಪ್ರಕರಣದಲ್ಲಿ ಯಾವುದೇ ವಿಶೇಷ ತನಿಖಾ ದಳದ ಸ್ಥಾಪನೆಯನ್ನು ಮಾಡಲಾಗಿಲ್ಲ. ಡಿ.ಜೆ. ಹಳ್ಳಿಯ ದಂಗೆ, ದಲಿತ ಜನಪ್ರತಿನಿಧಿಗಳ ಮನೆಯ ಮೇಲೆ ಮತಾಂಧರು ಮಾಡಿದ ದಾಳಿ ಮತ್ತು ಪೋಲಿಸ್ ಠಾಣೆಯನ್ನು ಸುಟ್ಟ ಪ್ರಕರಣ ಈ ಎಲ್ಲ ಕೃತ್ಯಗಳ ಹಿಂದೆ ಭಯೋತ್ಪಾದನೆಯ ಷಡ್ಯಂತ್ರವಿದ್ದರೂ ೧೧೫ ಮತಾಂಧರಿಗೆ ಜಾಮೀನು ನೀಡಲಾಗಿದೆ. ಆದರೆ ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿನ ಸಂಶಯಾಸ್ಪದರಿಗೆ ಮಾತ್ರ ಜಾಮೀನು ಇಲ್ಲ. ಇಷ್ಟೇ ಅಲ್ಲದೇ, ಗೌರಿ ಲಂಕೇಶ ಹತ್ಯೆಯ ಪ್ರಕರಣದ ಆಲಿಕೆಯೂ ವ್ಯವಸ್ಥಿತವಾಗಿ ನಡೆಯುವುದಿಲ್ಲ. ಈ ಪ್ರಕರಣದಲ್ಲಿ ಪಕ್ಷಪಾತವನ್ನು ಮಾಡಲಾಗುತ್ತಿದೆ, ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಅವರು ಆರೋಪಿಸಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೩೧ ಅಗಸ್ಟ್ ೨೦೨೧ ರಂದು ಆಯೋಜಿಸಲಾದ ‘ಗೌರಿ ಲಂಕೇಶ ಹತ್ಯಾ ಪ್ರಕರಣ – ವಾಸ್ತವ ಮತ್ತು ವಿಪರ್ಯಾಸ’ ಈ ಬಗ್ಗೆ ‘ಆನ್ ಲೈನ್’ ವಿಚಾರಸಂಕಿರಣದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಮಯದಲ್ಲಿ ನ್ಯಾಯವಾದಿ ಶ್ರೀ. ಕೃಷ್ಣಮೂರ್ತಿ ಪಿ., ಹಿಂದುತ್ವನಿಷ್ಠರಾದ ಶ್ರೀ ಎಸ್. ಭಾಸ್ಕರನ್ ಮತ್ತು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಇವರು ಸಹ ಈ ಪ್ರಕರಣದಲ್ಲಿ ತಮ್ಮ ನಿಲುವನ್ನು ಮಂಡಿಸಿದರು. ಈ ಕಾರ್ಯಕ್ರಮದ ನಿವೇದನೆಯನ್ನು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲೆಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಮಾಡಿದರು. ಈ ಆನ್‌ಲೈನ್ ಕಾರ್ಯಕ್ರಮವನ್ನು ೧ ಸಾವಿರದ ೪೦೦ ಜನರು ವೀಕ್ಷಿಸಿದರು.
ಭಗವಂತನ ಕೃಪೆಯಿಂದ ಸನಾತನ ಸಂಸ್ಥೆಯ ಕಾರ್ಯವು ತೀವ್ರ ವೇಗದಿಂದ ಹೆಚ್ಚಾಗುತ್ತಿದೆ ! – ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ
ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಇವರು ಮಾತನಾಡುತ್ತಾ, ‘ಗೌರಿ ಹತ್ಯೆಯ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಮೇಲೆ ಆರೋಪವನ್ನು ಮಾಡಿ, ಅದರ ಮೇಲೆ ನಿಷೇಧ ತರಲು ಪ್ರಯತ್ನಿಸಲಾಯಿತು. ಆದರೆ ಭಗವಂತನ ಕೃಪೆಯಿಂದ ಸನಾತನದ ಕಾರ್ಯದ ಮೇಲೆ ಯಾವುದೇ ಪರಿಣಾಮವಾಗಲಿಲ್ಲ. ತದ್ವಿರುದ್ಧ ಲಕ್ಷಗಟ್ಟಲೇ ಜನರು ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ಈಗಲೂ ಸನಾತನ ಸಂಸ್ಥೆಯ ಕಾರ್ಯವು ತೀವ್ರ ವೇಗದಿಂದ ಹೆಚ್ಚಾಗುತ್ತಿದೆ’ ಎಂದರು.
ಗೌರೀ ಲಂಕೇಶ ಹತ್ಯೆಯ ಪ್ರಕರಣದಲ್ಲಿ ಆಗಿನ ಕಾಂಗ್ರೆಸ್ ಸರಕಾರವು ಮಾಡಿದ ಕಾರ್ಯಾಚರಣೆ ಪೂರ್ವಗ್ರಹದೂಷಿತದ್ದು ! – ಭಾಸ್ಕರನ್, ಹಿಂದೂತ್ವನಿಷ್ಠರು, ಬೆಂಗಳೂರು
ಈ ಸಮಯದಲ್ಲಿ ಹಿಂದುತ್ವ ನಿಷ್ಠ ಶ್ರೀ. ಭಾಸ್ಕರನ್ ಇವರು ಮಾತನಾಡುತ್ತಾ, ‘ಗೌರಿ ಲಂಕೇಶರವರು ನಕ್ಸಲ್ ಸಮರ್ಥಕರಾಗಿದ್ದರು ಮತ್ತು ಅವರು ನಿರಂತರ ಹಿಂದೂ ಧರ್ಮ, ಪರಂಪರೆ ಮತ್ತು ಹಿಂದುತ್ವನಿಷ್ಠರನ್ನು ಅವಮಾನಿಸುತ್ತಿದ್ದರು. ದೇಶವಿರೋಧಿ ಹೇಳಿಕೆ ನೀಡುವ ಕನ್ಹಯ್ಯ ಕುಮಾರ ಮತ್ತು ಉಮರ್ ಖಾಲಿದ್‌ರನ್ನು ಸ್ವಂತ ಮಕ್ಕಳೆಂದು ತಿಳಿದಿದ್ದರು. ಅಂದಿನ ಕಾಂಗ್ರೆಸ್ ಸರಕಾರವು ಹತ್ಯೆಯ ತನಿಖೆಯನ್ನು ಆರಂಭಿಸುವ ಮೊದಲೇ ಪೂರ್ವಗ್ರಹದಿಂದ ಹಿಂದೂ ಸಂಘಟನೆಗಳ ಮೇಲೆ ಆರೋಪ ಮಾಡಿ ಮತ್ತು ಅದರಂತೆ ವಿಚಾರಣೆಯ ನಾಟಕವಾಡಿ, ಹಿಂದುತ್ವನಿಷ್ಠರನ್ನು ಸಂಶಯಿತರೆಂದು ಬಂಧಿಸಿದರು’ ಎಂದು ಹೇಳಿದರು.