ಮೈಸೂರು (ಕರ್ನಾಟಕ) ಇಲ್ಲಿನ ಮಹಾದೇವಿಯ ದೇವಾಲಯವನ್ನು ಕೆಡವಿದ ಬಗ್ಗೆ ವಿಹಂಪ ಹಾಗೂ ಬಜರಂಗದ ದಳದವರಿಂದ ಸರಕಾರದ ವಿರುದ್ಧ ಆಂದೋಲನ!

ವಿರೋಧದ ನಂತರ ರಾಜ್ಯದ ದೇವಾಲಯಗಳ ಮೇಲಿನ ಕಾರ್ಯಾಚರಣೆಗೆ ಮುಖ್ಯಮಂತ್ರಿಗಳಿಂದ ಸ್ಥಗಿತಿಯ ಆದೇಶ !

ಭಾಜಪವು ಅಧಿಕಾರದಲ್ಲಿರುವ ರಾಜ್ಯದಲ್ಲಿ ದೇವಾಲಯಗಳ ಕೆಡಹುವಿಕೆ ಹಾಗೂ ಅದರ ನಿಷೇಧಾರ್ಥ ಹಿಂದುತ್ವನಿಷ್ಠ ಸಂಘಟನೆಗಳಿಗೆ ಆಂದೋಲನೆ ನಡೆಸಬೇಕಾಗುತ್ತಿರುವುದು ಅಪೇಕ್ಷಿತವಲ್ಲ !
ಹಿಂದೂಗಳ ದೇವಾಲಯಗಳನ್ನು ಅಕ್ರಮವೆಂದು ನಿರ್ಧರಿಸಿ ಅವುಗಳ ಧ್ವಂಸದ ಘಟನೆಗಳನ್ನು ಶಾಶ್ವತವಾಗಿ ತಡೆಗಟ್ಟಲು ಹಿಂದೂ ರಾಷ್ಟ್ರವೇ ಬೇಕು ! – ಸಂಪಾದಕರು

ಬೆಂಗಳೂರು – ಆಡಳಿತವು ರಾಜ್ಯದಲ್ಲಿನ ಹಿಂದೂಗಳ ದೇವಾಲಯಗಳನ್ನು ಅನಧಿಕೃತವಾಗಿದೆ ಎಂದು ಹೇಳಿ ಕೆಡಹುತ್ತಿದೆ. ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ಇವು ಅದನ್ನು ವಿರೋಧಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹಳೆಯ ಮಹಾದೇವಿ ದೇವಾಲಯವನ್ನು ಧ್ವಂಸ ಮಾಡಿರುವುದನ್ನು ನಿಷೇಧಿಸಿ ವಿಹಂಪ ಹಾಗೂ ಬಜರಂಗ ದಳದಿಂದ ರಾಜ್ಯದಲ್ಲಿನ ಭಾಜಪ ಸರಕಾರದ ವಿರುದ್ಧ ಆಂದೋಲನ ನಡೆಸಲಾಯಿತು. ಆ ಸಂಘಟನೆಗಳು ದೇವಾಲಯವನ್ನು ಮತ್ತೊಮ್ಮೆ ಕಟ್ಟಲು ಹಾಗೂ ದೇವಾಲಯಗಳ ಧ್ವಂಸಕ್ಕೆ ಜವಾಬ್ದಾರರಾದ ತಹಸೀಲದಾರ ಹಾಗೂ ಪ್ರಭಾರಿ ಜಿಲ್ಲಾಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು, ಎಂಬ ಬೇಡಿಕೆ ನೀಡಿದ್ದಾರೆ. (ಈ ರೀತಿ ಏಕೆ ಬೇಡಿಕೆ ಮಾಡಬೇಕಾಗಿ ಬರುತ್ತದೆ? – ಸಂಪಾದಕರು) ವಿಹಂಪದ ಸ್ಥಳೀಯ ಸಚಿವರಾದ ಎಮ್. ಬಿ. ಪುರಾಣಿಕರವರು ಸರಕಾರವು ತಪ್ಪು ಮಾಡಿರುವುದರಿಂದ ಅದನ್ನು ತಿದ್ದಿಕೊಳ್ಳಬೇಕು. ದೇವಾಲಯಗಳನ್ನು ಧ್ವಂಸ ಮಾಡುವ ಆದೇಶವನ್ನು ರಾಜ್ಯದ ಮುಖ್ಯ ಸಚಿವರು ನೀಡಿದ್ದರು. ಅದರಲ್ಲಿ ಅವರು, ರಾಜ್ಯದಲ್ಲಿನ ಎಲ್ಲಾ ಅಕ್ರಮ ಧಾರ್ಮಿಕ ಸ್ಥಳಗಳನ್ನು ಧ್ವಂಸ ಮಾಡಬೇಕು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಚಿವರು ಆ ಆದೇಶವನ್ನು ನೀಡಿದ್ದರು. ಆದರೆ ಪ್ರತ್ಯಕ್ಷವಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವರ್ಷ ೨೦೦೯ಕ್ಕಿಂತ ಮೊದಲು ಕಟ್ಟಿರುವ ದೇವಾಲಯಗಳನ್ನು ಧ್ವಂಸಗೊಳಿಸಬಾರದು, ಎಂಬ ಉಲ್ಲೇಖವಿದೆ. ಈ ವಿವಾದದಿಂದ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಹಸ್ತಕ್ಷೇಪ ಮಾಡಿ ಮುಂದಿನ ಆದೇಶವಾಗುವವರೆಗೂ ರಾಜ್ಯದಾದ್ಯಂತ ದೇವಾಲಯಗಳ ಕೆಡಹುವಿಕೆಗೆ ಸ್ಥಗಿತದ ಆದೇಶ ನೀಡಿದ್ದಾರೆ. (ಆ ರೀತಿ ಕೇವಲ ಆದೇಶ ನೀಡಿ ಸುಮ್ಮನಾಗದೆ ಅದನ್ನು ಧ್ವಂಸಕ್ಕೆ ಹೊಣೆಯಾಗಿರುವವರ ಮೇಲೆ ಕ್ರಮ ಕೈಗೊಳ್ಳಿರಿ! – ಸಂಪಾದಕರು)

ದೇವಾಲಯಗಳ ಕೆಡಹುವಿಕೆ ಅಯೋಗ್ಯ ! ಮಾಜಿ ಮುಖ್ಯಮಂತ್ರಿ ಯೆಡಿಯೂರಪ್ಪ

ಮೈಸೂರಿನಲ್ಲಿನ ದೇವಾಲಯಗಳ ಕೆಡಹುವಿಕೆಯು ತಪ್ಪಾಗಿತ್ತು. ಯಾವುದೇ ಕಾರಣದಿಂದ ಅವಸರ ಗಡಿಬಿಡಿಯಲ್ಲಿ ದೇವಾಲಯಗಳನ್ನು ಧ್ವಂಸಗೊಳಿಸಬೇಡಿ. ಅದು ಸರಿಯಲ್ಲ. ಮುಖ್ಯಮಂತ್ರಿಗಳು ‘ಅವಸರಪಟ್ಟು ಗಡಿಬಿಡಿಯಲ್ಲಿ ದೇವಾಲಯಗಳನ್ನು ಧ್ವಂಸ ಮಾಡಬೇಡಿ, ಎಂಬ ಸೂಚನೆ ಮೊದಲೇ ನೀಡಿದ್ದಾರೆ. ಯಾವುದೇ ದೇವಾಲಯಗಳನ್ನು ಧ್ವಂಸ ಮಾಡುವ ಮೊದಲು ಜನರ ಅಭಿಪ್ರಾಯ ಪಡೆದುಕೊಳ್ಳಬೇಕು, ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಯೆಡಿಯೂರಪ್ಪಾನವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದಾಗ ಹೇಳುತ್ತಿದ್ದರು.

ಆಡಳಿತವು ಗಡಿಬಿಡಿ ಮಾಡಿ ದೇವಾಲಯಗಳನ್ನು ಕೆಡವಿದೆ ! – ಭಾಜಪದ ಸಾಂಸದ ಪ್ರತಾಪ ಸಿಂಹ

ಭಾಜಪದ ವಿಧಾನಸಭೆ ಸದಸ್ಯರಾದ ಪ್ರತಾಪ ಸಿಂಹ ಇವರು ಕೂಡ ಸರ್ವೋಚ್ಚ ನ್ಯಾಯಾಲಯದ ಆದೇಶಾನುಸಾರ ದೇವಾಲಯಗಳನ್ನು ಧ್ವಂಸ ಮಾಡುವ ತೀರ್ಮಾನ ತೆಗೆದುಕೊಂಡ ಜಿಲ್ಲಾಡಳಿತದ ಮೇಲೆ ದೋಷವನ್ನು ಹೊರಿಸಿದ್ದಾರೆ. ‘ಆಡಳಿತವು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೇವಾಲಯಗಳನ್ನು ಧ್ವಂಸ ಮಾಡಲಿಲ್ಲ. ಅಧಿಕಾರಿಗಳು ದೇವಾಲಯವನ್ನು ಕೆಡಹಲು ನೀಡಿದ ಆದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡರು, ಎಂದು ಸಿಂಹರವರು ಆರೋಪಿಸಿದರು.