ಊರಿಗೆ ಉತ್ತಮ ರಸ್ತೆಗಳು ಆಗುವವರೆಗೂ ಮದುವೆಯಾಗಲಾರೆ ಎಂಬ ಯುವತಿಯ ನಿರ್ಧಾರದ ಬಗ್ಗೆ ಸ್ಪಂದಿಸಿದ ಕರ್ನಾಟಕದ ಮುಖ್ಯಮಂತ್ರಿ !

ಸ್ವಾತಂತ್ರ್ಯದ 74 ವರ್ಷಗಳಲ್ಲಿ ಉತ್ತಮ ರಸ್ತೆಗಳನ್ನು ನೀಡಲಾಗದ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ಇದು ನಾಚಿಕೆಗೇಡಿನ ಸಂಗತಿಯಾಗಿದೆ ! – ಸಂಪಾದಕರು

ಬಿಂದು

ದಾವಣಗೆರೆ – ಇಲ್ಲಿಯ ರಾಮಪುರ ಹಳ್ಳಿಯಲ್ಲಿ ರಸ್ತೆಗಳು ಹಾಳಾಗಿರುವ ಕಾರಣ ಊರಿನಲ್ಲಿ ಅನೇಕ ಸಮಸ್ಯೆಗಳಿದ್ದು ಹಳ್ಳಿಯಲ್ಲಿ ಒಳ್ಳೆಯ ರಸ್ತೆ ಆಗುವತನಕ ನಾನು ವಿವಾಹ ಮಾಡಿಕೊಳ್ಳಲಾಗದು ಎಂದು, ಇಲ್ಲಿಯ ಬಿಂದು ಎಂಬ ಹೆಸರಿನ 26 ವರ್ಷದ ಯುವತಿಯು ರಾಜ್ಯದ ಮುಖ್ಯಮಂತ್ರಿ ಇವರಿಗೆ ನೇರವಾಗಿ ಇಮೇಲ್ ಮಾಡಿ ತಿಳಿಸಿದ್ದಾರೆ. ಬಿಂದು ಹಳ್ಳಿಯಲ್ಲಿ ಒಬ್ಬಳೇ ವಿದ್ಯಾವಂತಳಾಗಿದ್ದಾಳೆ. ಮದುವೆ ಮಾಡಿಕೊಂಡು ಬೇರೆಡೆ ಹೋದರೆ ಊರಿನವರ ಸಮಸ್ಯೆಗಾಗಿ ಹೋರಾಟ ನಡೆಸುವವರು ಯಾರೂ ಇರುವುದಿಲ್ಲ, ಎಂಬ ಭೀತಿಯಿಂದ ಆಕೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಬಿಂದು ಇವಳ ಪತ್ರಕ್ಕೆ ಮುಖ್ಯಮಂತ್ರಿ ಕಾರ್ಯಾಲಯವು ಸ್ಪಂದಿಸಿದೆ ಮತ್ತು ‘ತಕ್ಷಣವೇ ಈ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಆಶ್ವಾಸನೆಯನ್ನು ನೀಡಲಾಗಿದೆ. ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆಗೆ ಈ ಸಂದರ್ಭದಲ್ಲಿ ಆದೇಶ ನೀಡಲಾಗಿದೆ ಎಂಬ ಮಾಹಿತಿ ಆಡಳಿತದಿಂದ ನೀಡಲಾಗಿದೆ.

ಬಿಂದು ಬರೆದಿರುವ ಪತ್ರದಲ್ಲಿ, ನಮ್ಮ ಹಳ್ಳಿಯಲ್ಲಿ ರಸ್ತೆ ಸರಿ ಇಲ್ಲ ಆದ್ದರಿಂದ ಬೇರೆ ಊರನ್ನು ಸಂಪರ್ಕಿಸಲು ಅಥವಾ ಹೋಗಿಬರಲು ಕಷ್ಟವಾಗುತ್ತದೆ. ಆದ್ದರಿಂದ ನಮ್ಮ ಊರು ಇವತ್ತಿಗೂ ಹಿಂದುಳಿದಿದೆ. ಊರಿನಿಂದ ಮಹಾವಿದ್ಯಾಲಯಕ್ಕೆ ಹೋಗಲು ರಸ್ತೆ ಸರಿ ಇಲ್ಲದ ಕಾರಣ ನಾನು ವಸತಿಗೃಹದಲ್ಲಿ ಉಳಿಯಬೇಕಾಯಿತು. ನಮ್ಮೂರಿನಲ್ಲಿ ಮಕ್ಕಳಿಗಾಗಿ 5 ನೇ ತರಗತಿವರೆಗೂ ಶಾಲೆ ಇದೆ; ಆದರೆ ಯಾರಿಗಾದರೂ ಮುಂದೆ ಓದಲಿಕ್ಕಿದ್ದರೆ, ಪ್ರತಿದಿನ 14 ಕಿಲೋಮೀಟರ ದೂರ ಪ್ರಯಾಣ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.