ಬಾದಾಮಿಯಲ್ಲಿ ಪುರಾತನ ದೇವಸ್ಥಾನಗಳನ್ನು ಕೆಡವಿ ವಸತಿನಿಲಯ ನಿರ್ಮಿಸುವ ಆಡಳಿತದ ನಿರ್ಧಾರಕ್ಕೆ ಹಿಂದುತ್ವನಿಷ್ಠರಿಂದ ವಿರೋಧ !

ಬಿಜೆಪಿಯ ರಾಜ್ಯದಲ್ಲಿ ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! – ಸಂಪಾದಕರು

ಬಾದಾಮಿ – ಜಯನಗರದ ನಾಗರಿಕರ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಪುರಸಭೆಯ ಭೂಮಿಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ಸ್ಥಾಪಿಸುವ ಕುಟಿಲತಂತ್ರವನ್ನು ಹೆಣೆಯಲಾಗಿದೆ. ಈ ಸ್ಥಳದಲ್ಲಿ ಪ್ರಾಚೀನ ಶಿವಲಿಂಗ ಮತ್ತು ದೇವಾಲಯಗಳಿವೆ. ಈ ದೇವಾಲಯವನ್ನು ಕೆಡಹುವ ಆಡಳಿತದ ಪ್ರಯತ್ನವನ್ನು ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸಿವೆ. ಈ ಭೂಮಿಯಲ್ಲಿರುವ ದೇವಾಲಯಗಳು ಚಾಲುಕ್ಯರ ಕಾಲದ್ದು ಎಂದು ಹೇಳಲಾಗುತ್ತದೆ.

ದೇವಾಲಯಗಳನ್ನು ಕೆಡವಿ ವಸತಿ ನಿಲಯ ನಿರ್ಮಾಣ ಮಾಡುವ ನಿರ್ಣಯದ ಶ್ರೀರಾಮ ಸೇನೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಬಳ್ಳಾರಿ ವಿಭಾಗದ ಶ್ರೀರಾಮ ಸೇನೆಯ ಮುಖ್ಯಸ್ಥ ಸಂಜೀವ ಮರಡಿ ಇವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಲಾಗಿದೆ. ರಾಜ್ಯದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ವಸತಿ ನಿಲಯ ನಿರ್ಮಾಣಕ್ಕೆ ಬೆಂಬಲ ನೀಡುತ್ತಿದ್ದಾರೆ. (ಕಾಂಗ್ರೆಸಿಗರು ಯಾವಾಗಲೂ ಹಿಂದೂ ವಿರೋಧಿ ಕೃತ್ಯಗಳನ್ನು ಬೆಂಬಲಿಸುತ್ತಾರೆ, ಅದರ ಇನ್ನೊಂದು ಉದಾಹರಣೆ ಇದಾಗಿದೆ ! – ಸಂಪಾದಕರು) ಈ ಹಿನ್ನೆಲೆಯಲ್ಲಿ, ಅವರ ಬೆಂಬಲಿಗರಿಂದ ಮರಡಿಯವರಿಗೆ ಬೆದರಿಕೆ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ‘ಶಾಸಕ ಸಿದ್ದರಾಮಯ್ಯ ಅವರಿಗೆ ಧೈರ್ಯವಿದ್ದರೆ, ಅವರು ದೇವಾಲಯಗಳನ್ನು ತೆಗೆದು ತೋರಿಸಲಿ’, ಎಂದು ಮರಡಿಯವರು ಸವಾಲು ನೀಡಿದ್ದಾರೆ.