‘ಸನಾತನ ಧರ್ಮದ ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ಕ್ಕೆ ಸಂತರಿಂದ ಆಶೀರ್ವಾದ

ಹಿಂದೂಗಳಿಗೆ ಧರ್ಮಜ್ಞಾನ ನೀಡುವ ಸನಾತನ ಸಂಸ್ಥೆಯ ಕಾರ್ಯ ಶ್ಲಾಘನೀಯ ! – ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ, ಉತ್ತರಾಧಿಕಾರಿ, ಶೃಂಗೇರಿ ಶ್ರೀ ಶಾರದಾ ಪೀಠದ

ಭಕ್ತರಿಗೆ ಸನಾತನದ ಗ್ರಂಥವನ್ನು ತೋರಿಸುತ್ತಿರುವ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ

ಮಂಗಳೂರು – ‘ಹಿಂದೂಗಳಿಗೆ ಧರ್ಮಜ್ಞಾನ ವನ್ನು ನೀಡುವ ಸನಾತನ ಸಂಸ್ಥೆಯ ಕಾರ್ಯವು ಶ್ಲಾಘನೀಯವಾಗಿದೆ ಮತ್ತು ‘ಸನಾತನ ಧರ್ಮದ ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದಲ್ಲಿ (ಸನಾತನದ ಗ್ರಂಥಗಳನ್ನು ಮನೆಮನೆಗಳಿಗೆ ತಲುಪಿಸುವ ಅಭಿಯಾನ’ದಲ್ಲಿ) ನಿಮಗೆ ಯಶಸ್ಸು ಸಿಗಲಿ’ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಉತ್ತರಾಧಿಕಾರಿ ಶ್ರೀ ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿಯವರು ಅಭಿಯಾನದ ನಿಮಿತ್ತ ಅವರನ್ನು ಭೇಟಿಯಾದಾಗ ಸಾಧಕರಿಗೆ ಆಶೀರ್ವಾದ ನೀಡಿದರು. ಸ್ವಾಮೀಜಿ ಯವರಿಗೆ ಸನಾತನ ನಿರ್ಮಿತ ಗ್ರಂಥಗಳನ್ನು ತೋರಿಸಿದಾಗ ಅವರು ಪ್ರತಿಯೊಂದು ಗ್ರಂಥ ಹಾಗೂ ಸನಾತನ ಪಂಚಾಂಗದ ಎಲ್ಲ ಪುಟಗಳನ್ನು ಆಸಕ್ತಿಯಿಂದ ನೋಡಿದರು. ಅಲ್ಲದೇ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಕಾರ್ಯದ ಕುರಿತು ಸಹ ತಿಳಿದುಕೊಂಡರು.

ಸನಾತನ ಸಂಸ್ಥೆಯ ಕಾರ್ಯವು ತುಂಬ ಉತ್ತಮವಾಗಿದೆ ! – ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂ; ಕನ್ಯಾಡಿ, ದಕ್ಷಿಣಕನ್ನಡ

‘ಸನಾತನ ಸಂಸ್ಥೆಯು ಜನರಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ಕುರಿತು ಜಾಗೃತಿ ಮಾಡುವ ಧರ್ಮಕಾರ್ಯವನ್ನು ಮಾಡುತ್ತಿದೆ. ಹಿಂದೂಗಳಿಗೆ ಧರ್ಮಜ್ಞಾನ ಸಿಗಬೇಕೆಂದು ಸನಾತನವು ಅನೇಕ ಧಾರ್ಮಿಕ ವಿಚಾರಗಳ ಗ್ರಂಥಗಳನ್ನು ಪ್ರಕಾಶನಗೊಳಿಸಿದೆ. ಸನಾತನದ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ. ನಾವು ಅನೇಕ ವರ್ಷಗಳಿಂದ ಸನಾತನ ಸಂಸ್ಥೆಯ ಸಂಪರ್ಕದಲ್ಲಿ ದ್ದೇವೆ. ಸನಾತನದ ಕಾರ್ಯವು ತುಂಬಾ ಉತ್ತಮವಾಗಿ ನಡೆಯುತ್ತಿದೆ, ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕನ್ಯಾಡಿಯ ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು ಸನಾತನ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸನಾತನದ ಸಾಧಕರು ಇತ್ತೀಚೆಗೆ ಅವರನ್ನು ಭೇಟಿಯಾದಾಗ ಮೇಲಿನಂತೆ ಉದ್ಗರಿಸಿದ್ದರು. ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರು ಮುಂದೆ ಮಾತನಾಡುತ್ತಾ, ‘ಈಗಿನ ಮೆಕಾಲೆ ಶಿಕ್ಷಣ ಪದ್ದತಿಯಿಂದ ಇಂದಿನ ಪೀಳಿಗೆ ಹಿಂದೂ ಧರ್ಮದ ಆಚಾರ-ವಿಚಾರಗಳಿಂದ ದೂರ ಹೋಗಿದೆ ಮತ್ತು ಧರ್ಮಜ್ಞಾನ ದಿಂದ ವಂಚಿತವಾಗಿದೆ. ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಗುರುಕುಲ ಶಿಕ್ಷಣ ವ್ಯವಸ್ಥೆ ಇತ್ತು. ಅದರಿಂದ ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಶಿಕ್ಷಣ ದೊರಕುತ್ತಿತ್ತು. ಮೆಕಾಲೆ ಶಿಕ್ಷಣ ಪದ್ದತಿಯಿಂದ ಧರ್ಮಜ್ಞಾನ ಸಿಗದಿರುವುದು ಖೇದಕರವಾಗಿದೆ. ಆದರೆ ಹಿಂದೂಗಳಿಗೆ ಧರ್ಮಜ್ಞಾನ ಸಿಗಲು, ಸನಾತನವು ಧಾರ್ಮಿಕ ಗ್ರಂಥಗಳನ್ನು ಪ್ರಕಾಶನ ಗೊಳಿಸಿರುವುದು ಶ್ಲಾಘನೀಯ’ ಎಂದರು.