ಸಹೋದ್ಯೋಗಿ ಪುರುಷ ಅಧಿಕಾರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿರುವ ಬಗ್ಗೆ ಆಕ್ಷೇಪಿಸಿ ಥಳಿತ
ಹಿಂದೂಗಳನ್ನು ತಾಲಿಬಾಲಿ ಮತ್ತು ಅಸಹಿಷ್ಣು ಎನ್ನುವವರು ಇಂತಹ ಘಟನೆಗಳ ಬಗ್ಗೆ ಏಕೆ ಮೌನವಾಗಿರುತ್ತಾರೆ ? – ಸಂಪಾದಕರು
ಬೆಂಗಳೂರು – ಇಲ್ಲಿ ಬ್ಯಾಂಕ್‍ನ ಓರ್ವ ಮುಸ್ಲಿಂ ಮಹಿಳಾ ಅಧಿಕಾರಿಯನ್ನು ಮತ್ತು ಆಕೆಯ ಸಹೋದ್ಯೋಗಿಯನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಮತಾಂಧರನ್ನು ಬಂಧಿಸಿದ್ದಾರೆ.
(ಸೌಜನ್ಯ: IndianExpressOnline)
35 ವರ್ಷದ ಮಹಿಳಾ ಅಧಿಕಾರಿಯೊಬ್ಬರು ಕೆಲಸದಲ್ಲಿ ತಡವಾದಾಗ ಆಕೆಯ ಸಹೋದ್ಯೋಗಿ ಆಕೆಯನ್ನು ದ್ವಿಚಕ್ರ ವಾಹನದಲ್ಲಿ ಮನೆಗೆ ಬಿಡಲು ಹೋಗಿದ್ದರು. ಈ ಮಹಿಳೆಯು ಬುರ್ಖಾ ಧರಿಸಿದ್ದಳು. ಆ ಸಮಯದಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮತಾಂಧರು ಅಧಿಕಾರಿಗಳನ್ನು ಅಡ್ಡಗಟ್ಟಿದರು ಮತ್ತು ಮಹಿಳಾ ಅಧಿಕಾರಿಯು ಪುರುಷ ಅಧಿಕಾರಿಯೊಂದಿಗೆ ಹೋಗುವುದನ್ನು ಆಕ್ಷೇಪಿಸಿದರು. ಜೊತೆಗೆ ಮಹಿಳೆಯಿಂದ ಆಕೆಯ ಪತಿಯ ಮೊಬೈಲ್ ಸಂಖ್ಯೆಯನ್ನು ಕೂಡ ತೆಗೆದುಕೊಂಡು ಆತನಿಗೆ ಮಾಹಿತಿ ನೀಡಿದ್ದಾರೆ. ಆಗ ಪತಿಯು ಅವರಿಗೆ ತನಗೆ ಈ ಪ್ರಸಂಗದ ಬಗ್ಗೆ ತಿಳಿದಿದೆ ಮತ್ತು ಪುರುಷ ಅಧಿಕಾರಿಯ ಪರಿಚಯವಿದೆ ಎಂದು ತಿಳಿಸಿದರು. ಆದರೂ ಇಬ್ಬರು ಮತಾಂಧರು ಮಹಿಳೆ ಮತ್ತು ಪುರುಷ ಸಹೋದ್ಯೋಗಿಯನ್ನು ಥಳಿಸಿದರು. ಅವರು ಮಹಿಳೆಯನ್ನು ರಿಕ್ಷಾದಲ್ಲಿ ಮನೆಗೆ ಕಳುಹಿಸಿದರು. ಈ ಘಟನೆಯು ಸಿಸಿಟಿವಿಯಲ್ಲಿ ಚಿತ್ರೀಕರಣಗೊಂಡಿದೆ. ಆ ವಿಡಿಯೋ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು.
Karnataka: Cops arrest 2 youths for assaulting Hindu-Muslim duo who travelled together https://t.co/7gGd5YzTmz
— Republic (@republic) September 19, 2021