18 ರಿಂದ 20 ಸಾವಿರ ಜನರನ್ನು ಮತಾಂತರಿಸಿರುವ ಮಾಹಿತಿ
|
ಬೆಂಗಳೂರು – ಮತಾಂಧ ಕ್ರೈಸ್ತ ಮಿಷನರಿಗಳು ಕರ್ನಾಟಕದ ಮಾಜಿ ಮಂತ್ರಿ ಹಾಗೂ ಆಡಳಿತಾರೂಢ ಭಾಜಪದ ಶಾಸಕರಾದ ಗೂಳಿಹಟ್ಟಿ ಶೇಖರ ಅವರ ತಾಯಿಯನ್ನೇ ಮತಾಂತರಗೊಳಿಸಿರುವ ಆಘಾತಕಾರಿ ಸಂಗತಿಯು ಬೆಳಕಿಗೆ ಬಂದಿದೆ. ಶೇಖರ ಇವರು ಸ್ವತಃ ವಿಧಾನಸಭೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ, ಹಾಗೆಯೇ ತಮ್ಮ ಹೊಸದುರ್ಗ ವಿಧಾನಸಭಾ ಮತದಾರರ ಸಂಘದಲ್ಲಿ ಕಾರ್ಯನಿರತರಾಗಿರುವ ಕ್ರೈಸ್ತ ಮಿಷನರಿಗಳ ವಿರುದ್ಧ ಕಾರ್ಯಾಚರಣೆ ಮಾಡಬೇಕೆಂದು ರಾಜ್ಯ ಸರಕಾರದ ಬಳಿ ಮನವಿ ಮಾಡಿದ್ದಾರೆ.
ಶೇಖರ ಅವರು ‘ಕ್ರೈಸ್ತ ಮಿಷನರಿಗಳು ಹೊಸದುರ್ಗ ವಿಧಾನಸಭಾ ಮತದಾರರ ಸಂಘದಲ್ಲಿ ದೊಡ್ಡಪ್ರಮಾಣದಲ್ಲಿ ಮತಾಂತರ ಮಾಡುತ್ತಿದ್ದಾರೆ. ಈ ಮಿಷನರಿಗಳು ಸುಮಾರು 18 ರಿಂದ 20 ಸಾವಿರ ಜನರನ್ನು ಮತಾಂತರಿಸಿ ಅವರನ್ನು ಕ್ರೈಸ್ತರನ್ನಾಗಿಸಿದ್ದಾರೆ. ಓರ್ವ ಕ್ರೈಸ್ತ ಮಿಷನರಿಯು ನನ್ನ ತಾಯಿಯನ್ನು ಪ್ರಾರ್ಥನೆಗಾಗಿ ಕರೆದರು. ‘ಪ್ರಾರ್ಥನೆಗೆ ಬಂದ ಮೇಲೆ ನಿಮಗೆ ಒಳ್ಳೆಯದೆನಿಸುವುದು’ ಎಂದು ಅವರು ಆಕೆಗೆ ಹೇಳಿದರು. ನನ್ನ ತಾಯಿಯು ಈ ಮಿಷನರಿಗಳ ಜಾಲದಲ್ಲಿ ಸಿಲುಕಿದರು ಮತ್ತು ಅವರು ನಂತರ ಆಕೆಯನ್ನು ಮತಾಂತರಿಸಿದರು. ಈಗ ಅವರು ಅವರಿಗೆ ಕುಂಕುಮವನ್ನು ಹಚ್ಚಲು ಬಿಡುತ್ತಿಲ್ಲ. ನನ್ನ ತಾಯಿ ನಮ್ಮ ಮನೆಯಲ್ಲಿನ ದೇವತೆಗಳ ಛಾಯಾಚಿತ್ರಗಳನ್ನು, ದೇವರ ಕೋಣೆಯಲ್ಲಿನ ಪೂಜಾ ಸಾಹಿತ್ಯಗಳನ್ನು ನೋಡುವುದೂ ಇಲ್ಲ. ನನ್ನ ತಾಯಿಯ ಮೊಬೈಲಿನ ರಿಂಗ್ ಟೋನ್ (ಯಾರಾದರೂ ಸಂಪರ್ಕ ಮಾಡಿದರೆ ಮೊಬೈಲಿನಲ್ಲಿ ಕೇಳಿಸುವ ಧ್ವನಿ) ಬದಲಾಗಿದ್ದು ಈಗ ಅದು ಕ್ರೈಸ್ತರ ಒಂದು ಪ್ರಾರ್ಥನೆಯಾಗಿದೆ. ನಮ್ಮ ಮನೆಯಲ್ಲಿ ಈಗ ದೈನಂದಿನ ಪೂಜೆ ಮಾಡುವುದೂ ಕಠಿಣವಾಗುತ್ತಿದೆ. ನಾವು ತಾಯಿಗೆ ಏನಾದರೂ ಹೇಳಲು ಹೋದರೆ ಆಕೆಯು ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಈಗ ನಮ್ಮೆದುರು ದೊಡ್ಡ ಸಂಕಟ ಎದುರಾಗಿದೆ. ಕ್ರೈಸ್ತ ಮಿಷನರಿಗಳನ್ನು ತಡೆಯಲು ಪ್ರಯತ್ನಿಸುವವರ ವಿರುದ್ಧ ಅತ್ಯಾಚಾರದ ಸುಳ್ಳು ಆರೋಪಗಳನ್ನು ನೋಂದಾಯಿಸುವ ಯುಕ್ತಿಯನ್ನು ಅವರು ಅವಲಂಬಿಸಿದ್ದಾರೆ. ಸರಕಾರವು ಈ ಬಗ್ಗೆಯೂ ಕಾರ್ಯಾಚರಣೆಯನ್ನು ಮಾಡಬೇಕು’ ಎಂದು ಹೇಳಿದರು.
ಈ ಪ್ರಕರಣದಲ್ಲಿ ಕಾರ್ಯಾಚರಣೆಯನ್ನು ಮಾಡುತ್ತೇವೆ ! – ಗೃಹಮಂತ್ರಿ
ಕ್ರೈಸ್ತ ಮಿಷನರಿಗಳಿಂದಾಗುತ್ತಿರುವ ಮತಾಂತರದ ಪ್ರಕರಣದಲ್ಲಿ ಕಾರ್ಯಾಚರಣೆ ಮಾಡುತ್ತೇವೆ’ ಎಂದು ರಾಜ್ಯದ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರು ಗೂಳಿಹಟ್ಟಿ ಶೇಖರ ಇವರಿಗೆ ಆಶ್ವಾಸನೆ ನೀಡಿದರು. ಯಾರಿಗಾದರೂ ಆಮಿಷವೊಡ್ಡಿ ಅವರನ್ನು ಮತಾಂತರಿಸುವುದು ಅಪರಾಧವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ; ಸದನದಲ್ಲಿ ನೋವು ತೋಡಿಕೊಂಡ ಶಾಸಕ ಗೂಳಿಹಟ್ಟಿ ಶೇಖರ್
#karnatakalegislativeassembly https://t.co/ywEhhuyPWA— vijaykarnataka (@Vijaykarnataka) September 21, 2021
ಒಂದು ಘಟನೆಯನ್ನು ಎಲ್ಲರಿಗೂ ಅನ್ವಯಿಸಬಾರದು ! – ಕಾಂಗ್ರೆಸ್ಸಿನ ಹಿರಿಯ ನೇತಾರ ಕೆ.ಜೆ. ಜಾರ್ಜ್
ಈ ವಿಷಯದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಕಾಂಗ್ರೆಸ್ಸಿನ ಹಿರಿಯ ನೇತಾರ ಕೆ.ಜೆ. ಜಾರ್ಜ್ ಅವರು ಒಂದು ಘಟನೆಯನ್ನು ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ. ಕೆಲವು ಜನರ ತಪ್ಪುಗಳನ್ನು ಎಲ್ಲ ಚರ್ಚುಗಳ ಮೇಲೆ ಹೊರಿಸಬಾರದು ಎಂದು ಹೇಳಿದರು.
ನೀವು ನಿಮ್ಮ ಆರೋಪಗಳಲ್ಲಿ ಎಲ್ಲರನ್ನೂ ಸೇರಿಸಬೇಡಿ ! – ವಿಧಾನಸಭೆಯ ಅಧ್ಯಕ್ಷರಿಂದ ಗೂಳಿಹಟ್ಟಿ ಶೇಖರರಿಗೆ ಕಿವಿ ಮಾತು
ಇದರ ಮೇಲೆ ವಿಧಾನಸಭೆಯ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರು ಜಾರ್ಜರವರ ಹೇಳಿಕೆಯನ್ನು ಸಮರ್ಥಿಸುತ್ತ ಶೇಖರ ಇವರಿಗೆ ನೀವು ನಿಮ್ಮ ಆರೋಪದಲ್ಲಿ ಎಲ್ಲರನ್ನೂ ಸೇರಿಸಬೇಡಿ ಎಂದು ಹೇಳಿದರು. (ರಾಜಕೀಯ ನೇತಾರರ ಇಂತಹ ನಿಧರ್ಮೀತನದಿಂದಲೇ ಇಂದು ಹಿಂದೂಗಳ ದೇಶದಲ್ಲಿಯೇ ಅವರ ಸ್ಥಿತಿ ಹೀನಾಯವಾಗಿದೆ. ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! – ಸಂಪಾದಕರು)