ಮೆರಠ(ಉತ್ತರಪ್ರದೇಶ)ನಲ್ಲಿ ಓರ್ವ ಸಾಧುವನ್ನು ಕಲ್ಲಿನಿಂದ ಜಜ್ಜಿ ಹತ್ಯೆ

ಉತ್ತರಪ್ರದೇಶದಲ್ಲಿ ನಿರಂತರವಾಗಿ ಸಾಧು, ಮಹಂತ ಮುಂತಾದವರ ಹತ್ಯೆಯಾಗುತ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ತೆಲಂಗಾಣ ರಾಜ್ಯದಲ್ಲಿ ಪ್ರತಿಯೊಂದು ದಲಿತ ಕುಟುಂಬದ ಓರ್ವ ಸದಸ್ಯನಿಗೆ ಸರಕಾರವು ೧೦ ಲಕ್ಷ ರೂಪಾಯಿ ನೀಡಲಿದೆ !

ಪ್ರಜಾಪ್ರಭುತ್ವದಲ್ಲಿ ಈ ರೀತಿಯ ತೆರಿಗೆದಾರರ ಹಣವನ್ನು ಕೇವಲ ಜಾತಿಯ ಆಧಾರದಲ್ಲಿ ಹಂಚಲು ಸರಕಾರಕ್ಕೆ ಯಾವ ಅಧಿಕಾರ ಇದೆ ? ಒಂದುವೇಳೆ ಈ ಜಾತಿಯಲ್ಲಿ ಯಾರಾದರು ಆರ್ಥಿಕವಾಗಿ ಸಧೃಢವಾಗಿದ್ದರೆ, ಅವರಿಗೂ ಹಣವನ್ನು ನೀಡುವರೇ ?

ಅಲವರ(ರಾಜಸ್ಥಾನ)ದಲ್ಲಿ ಗೋವು ಕಳ್ಳರಿಂದ ಪೊಲೀಸರ ಮೇಲೆ ಗುಂಡುಹಾರಾಟ : ಓರ್ವ ಪೊಲೀಸ್ ಪೇದೆ ಗಾಯ

ಮಾಲಾಖೇಡಾ ಲಕ್ಷ್ಮಣಗಡ್ ವೃತ್ತದಲ್ಲಿ ಪೊಲೀಸರು ಮತ್ತು ಗೋವು ಕಳ್ಳರ ನಡುವೆ ನಡೆದ ಚಕಮಕಿಯಲ್ಲಿ ಓರ್ವ ಪೊಲೀಸರು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೀಜಾನ್, ಇತಾಬ್, ಮಿಸರೊಂ, ಲಿಯಾಕತ ಮತ್ತು ಸದ್ದಾಮ್ ಈ ೫ ಗೋವು ಕಳ್ಳರನ್ನು ಬಂಧಿಸಲಾಗಿದೆ.

ಜಮ್ಮುವಿನಲ್ಲಿ ಮೂರನೇಯ ಬಾರಿ ಕಂಡುಬಂದ ಡ್ರೋನ್ !

ಈ ಹಿಂದೆ ಭಾರತೀಯ ವಾಯುದಳದ ನೆಲೆಯ ಮೇಲೆ ಜಿಹಾದಿ ಭಯೋತ್ಪಾದಕರು ಡ್ರೋನ್ ಮೂಲಕ ಬಾಂಬ್ ಸ್ಪೋಟ ಮಾಡಿದ್ದರು ಮತ್ತು ಮಾರನೇಯ ದಿನ ಅಲ್ಲಿಯ ಸೈನ್ಯ ದಳದ ನೆಲೆಯ ಮೇಲೆ ಕಂಡು ಬಂದಿದ್ದ ಡ್ರೋನ್ ಮೇಲೆ ಸೈನಿಕರು ಗುಂಡು ಹಾರಾಟ ಮಾಡಿ ಓಡಿಸಿದ್ದರು.

ಮುಸಲ್ಮಾನ ಬಹುಸಂಖ್ಯಾತ ಮೇವಾತ್(ಹರಿಯಾಣಾ)ದಲ್ಲಿ ಹಿಂದೂಗಳ ಮತಾಂತರದ ಬಗೆಗಿನ ಅರ್ಜಿಯ ಆಲಿಕೆಯನ್ನು ಮಾಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರಗಳ ಬಗ್ಗೆ ಸರಕಾರವೂ ಏನೂ ಮಾಡುತ್ತಿಲ್ಲ ಮತ್ತು ನ್ಯಾಯಾಲಯವೂ ಈ ಬಗ್ಗೆ ಆಲಿಕೆ ಮಾಡಲು ನಿರಾಕರಿಸಿದರೆ, ಹಿಂದೂಗಳು ಏನು ಮಾಡಬೇಕು ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಒಂದೇ ಉತ್ತರ, ಅದುವೇ ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪಿಸುವುದು !

ಪುಲವಾಮಾ(ಜಮ್ಮು-ಕಾಶ್ಮೀರ)ದಲ್ಲಿ ಭಯೋತ್ಪಾದಕರಿಂದ ಮಾಜಿ ಪೊಲೀಸ್ ಅಧಿಕಾರಿ ಸಹಿತ ಅವರ ಹೆಂಡತಿ ಮತ್ತು ಮಗಳ ಹತ್ಯೆ

ಜಮ್ಮುವಿನಲ್ಲಿ ಭಾರತೀಯ ವಾಯುದಳದ ನೆಲೆಯ ಮೇಲೆ ಡ್ರೋನ್ ಮೂಲಕ ದಾಳಿ ಮಾಡಿದ ೨೪ ಗಂಟೆಗಳಲ್ಲಿ ಜಿಹಾದಿ ಭಯೋತ್ಪಾದಕರು ಇಲ್ಲಿಯ ಅವಂತಿಪೊರಾ ಪ್ರದೇಶದ ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಫಯ್ಯಾಜ ಅಹಮದ ಇವರನ್ನು ಹತ್ಯೆ ಮಾಡಿದ್ದಾರೆ. ಭಯೋತ್ಪಾದಕರು ಅಹಮದರ ಮನೆಗೆ ನುಗ್ಗಿ ಅವರ ಮತ್ತು ಅವರ ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಭಾರತದ ‘ಅಗ್ನಿ ಪ್ರೈಮ್’ ಕ್ಷಿಪಣಿಯ ಯಶಸ್ವೀ ಪರೀಕ್ಷಣೆ

ಭಾರತವು ೨ ಸಾವಿರ ಕಿ.ಮೀ ತನಕ ಹೊಡೆದುರುಳಿಸಬಲ್ಲ ‘ಅಗ್ನಿ ಪ್ರೈಮ್’ ಈ ಕ್ಷಿಪಣಿಯನ್ನು ಜೂನ್ ೨೮ ರಂದು ಇಲ್ಲಿ ಯಶಸ್ವಿಯಾಗಿ ಪರೀಕ್ಷಣೆ ನಡೆಸಿತು. ಇತರ ಕ್ಷಿಪಣಿಗಳಿಗಿಂತ ಈ ಕ್ಷಿಪಣಿಯು ಚಿಕ್ಕದು ಹಾಗೂ ಹಗುರವಾಗಿದೆ.

ಟ್ವಿಟರ್ ಭಾರತದ ನಕಾಶೆಯಿಂದ ಜಮ್ಮು-ಕಾಶ್ಮೀರವನ್ನು ಹಾಗೂ ಲಡಾಖ್ ಅನ್ನು ಬೇರ್ಪಡಿಸಿದೆ !

ಟ್ವಿಟರ್ ನ ‘ಟ್ವೀಟ್ ಲೈಫ್’ ಈ ‘ಕರಿಯರ್’ ಸಂಬಂಧಿಸಿದ ಪ್ರದೇಶದಲ್ಲಿ ತೋರಿಸಲಾದ ಪ್ರದೇಶದ ಜಗತ್ತಿನ ನಕಾಶೆಯಲ್ಲಿರುವ ಭಾರತದ ನಕಾಶೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ ಈ ಪ್ರದೇಶವನ್ನು ತೋರಿಸಲಿಲ್ಲ. ತದನಂತರ ಸಾಮಾಜಿಕ ಮಾಧ್ಯಮದಿಂದ ಇದಕ್ಕೆ ವಿರೋಧ ವ್ಯಕ್ತವಾಗತೊಡಗಿತು. ಟ್ವಿಟರ್ ಈ ಹಿಂದೆಯೂ ಇದೇ ರೀತಿಯ ಕೃತ್ಯವನ್ನು ಮಾಡಿತ್ತು ಮತ್ತು ಅದನ್ನೂ ವಿರೋಧಿಸಲಾಗಿತ್ತು.

ಪಾಕಿಸ್ತಾನಿ ಚಿತ್ರರಂಗದ ನಿರ್ಮಾಪಕರು ಅಶ್ಲೀಲತೆಯನ್ನು ಪ್ರಸಾರ ಮಾಡುವ ಭಾರತೀಯ ಚಿತ್ರರಂಗದ ಅನುಕರಣೆಯನ್ನು ಮಾಡುವುದನ್ನು ನಿಲ್ಲಿಸಬೇಕು ! – ಪಾಕ್ ಪ್ರಧಾನಿ ಇಮ್ರಾನ್ ಖಾನ್

ಅಶ್ಲೀಲತೆಯ ಪ್ರಸಾರವನ್ನು ಮಾಡುವ ಭಾರತೀಯ ಚಿತ್ರರಂಗದ ಅನುಕರಣೆಯನ್ನು ಪಾಕಿಸ್ತಾನಿ ಚಿತ್ರರಂಗವು ನಿಲ್ಲಿಸಬೇಕು, ಎಂದು ಪಾಕ್‍ನ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ. ಅವರು ಇಲ್ಲಿ ‘ಶಾರ್ಟ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮಾತಾಡುತ್ತಿದ್ದರು.

ಹಿಂದೂ ವಿರೋಧಿ ಪ್ರಸಿದ್ಧಿ ಮಾಧ್ಯಮಗಳ ಪಿತೂರಿಯ ವಿರುದ್ಧ ಧರ್ಮಾಭಿಮಾನಿಗಳಿಂದ #Hinduphobic_Media ಟ್ವಿಟರ್ ಟ್ರೆಂಡ್ !

ಪ್ರಸಿದ್ಧಿ ಮಾಧ್ಯಮಗಳು ಮತ್ತು ಫೇಸ್‍ಬುಕ್ ಇವೆರಡೂ ಜಂಟಿಯಾಗಿ ಒಂದು ಪಿತೂರಿಯ ಮೂಲಕ ಹಿಂದೂಗಳನ್ನು ಮಟ್ಟಹಾಕಿ ಅವರ ಧ್ವನಿಯನ್ನು ಅದಮಲು ಪ್ರಯತ್ನಿಸುತ್ತಿವೆ. ಈ ಪಿತೂರಿಯ ವಿರುದ್ಧ ಹಿಂದೂ ಧರ್ಮಾಭಿಮಾನಿಗಳಿಂದ ಜೂನ್ ೨೭ ರಂದು #Hinduphobic_Media ಈ ಹೆಸರಿನ ಹ್ಯಾಷ್‍ಟ್ಯಾಗ್ ಟ್ರೆಂಡ್ ಮಾಡಲಾಗಿತ್ತು. ಅದು ರಾಷ್ಟ್ರೀಯ ಟ್ರೆಂಡ್‍ನಲ್ಲಿ ೫ ನೇ ಸ್ಥಾನದಲ್ಲಿತ್ತು. ಇದರಲ್ಲಿ ೩೬ ಸಾವಿರಕ್ಕಿಂತಲೂ ಹೆಚ್ಚು ಟ್ವೀಟ್ಸ್‍ಗಳನ್ನು ಮಾಡಲಾಯಿತು.