ಕಳೆದ ೩ ದಿನಗಳಿಂದ ಡ್ರೋನ್ ಮೂಲಕ ಜಿಹಾದಿ ಭಯೋತ್ಪಾದಕರು ದಾಳಿ ಮಾಡಲು ಪ್ರಯತ್ನ ಮಾಡುತ್ತಿರುವಾಗ ರಕ್ಷಣಾ ಪಡೆಯು ಏನು ಮಾಡುತ್ತಿದೆ ?
ಜಮ್ಮು – ಕಳೆದ ೪೮ ಗಂಟೆಗಳಲ್ಲಿ ಜಮ್ಮುವಿನಲ್ಲಿ ಮೂರನೇಯ ಬಾರಿ ಡ್ರೋನ್ ಕಂಡಿರುವ ಘಟನೆ ನಡೆದಿದೆ. ಜಮ್ಮುವಿನ ಕುಂಜವಾನಿ-ರತ್ನುಚಕ ಪ್ರದೇಶದಲ್ಲಿ ಈ ಡ್ರೋನ್ ಕಂಡುಬಂದಿತ್ತು. ಈ ಹಿಂದೆ ಭಾರತೀಯ ವಾಯುದಳದ ನೆಲೆಯ ಮೇಲೆ ಜಿಹಾದಿ ಭಯೋತ್ಪಾದಕರು ಡ್ರೋನ್ ಮೂಲಕ ಬಾಂಬ್ ಸ್ಪೋಟ ಮಾಡಿದ್ದರು ಮತ್ತು ಮಾರನೇಯ ದಿನ ಅಲ್ಲಿಯ ಸೈನ್ಯ ದಳದ ನೆಲೆಯ ಮೇಲೆ ಕಂಡು ಬಂದಿದ್ದ ಡ್ರೋನ್ ಮೇಲೆ ಸೈನಿಕರು ಗುಂಡು ಹಾರಾಟ ಮಾಡಿ ಓಡಿಸಿದ್ದರು. ಈ ಡ್ರೋನ್ ದಾಳಿಯ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ(‘ಎನ್.ಐ.ಎ.’ ಬಳಿ) ವಹಿಸಲಾಗಿದೆ.
This comes a day after an attempt to target military installation in #Jammu the aerial object was thwarted by soldiershttps://t.co/NbK7bViM7t @manishindiatv
— India TV (@indiatvnews) June 29, 2021
ಕಾಲೂಚಕನಲ್ಲಿ ಡ್ರೋನ್ ಪತ್ತೆಯಾದನಂತರ ಕುಂಜವಾನಿ, ಪರಮಂಡಳ ಮೋಡ, ಬಾಡಿ ಬ್ರಾಹ್ಮಣಾ, ರತ್ನುಚಕ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸ್ಥಳಿಯ ಪೊಲೀಸರು ಮತ್ತು ಭಾರತೀಯ ಸೈನ್ಯವು ಜಂಟಿಯಾಗಿ ಅಲ್ಲಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.