ಭಾರತೀಯ ಚಿತ್ರರಂಗದ ಚಲನಚಿತ್ರದಲ್ಲಿಯ ಅಶ್ಲೀಲತೆಯ ಬಗ್ಗೆ ಎರಡು ಮಾತು ಹೇಳುವ ಧೈರ್ಯವನ್ನು ಭಾರತದ ಆಡಳಿತವರ್ಗದವರು ಎಂದಾದರೂ ತೋರಿಸುವರೇ ?
ಇಸ್ಲಮಾಬಾದ್(ಪಾಕಿಸ್ತಾನ) – ಪಾಕಿಸ್ತಾನ ಚಿತ್ರರಂಗವು ‘ಹಾಲಿವುಡ್’ ಮತ್ತು ಭಾರತೀಯ ಚಿತ್ರರಂಗದಿಂದ ಹೆಚ್ಚು ಪ್ರಭಾವಿತವಾಗಿದೆ. ಅಶ್ಲೀಲತೆಯು ಹಾಲಿವುಡ್‍ನಿಂದ ಆರಂಭವಾಗಿದೆ. ನಂತರ ಅದು ಭಾರತೀಯ ಚಿತ್ರರಂಗಕ್ಕೆ ತಲುಪಿದೆ ಮತ್ತು ಅದು ಅಲ್ಲಿಂದ ಪಾಕ್‍ಗೆ ಬಂದಿದೆ. ಅಶ್ಲೀಲತೆಯ ಪ್ರಸಾರವನ್ನು ಮಾಡುವ ಭಾರತೀಯ ಚಿತ್ರರಂಗದ ಅನುಕರಣೆಯನ್ನು ಪಾಕಿಸ್ತಾನಿ ಚಿತ್ರರಂಗವು ನಿಲ್ಲಿಸಬೇಕು, ಎಂದು ಪಾಕ್‍ನ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ. ಅವರು ಇಲ್ಲಿ ‘ಶಾರ್ಟ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮಾತಾಡುತ್ತಿದ್ದರು.
PM Imran Khan urges Pakistani filmmakers to promote ‘Pakistaniyat’ and not copy Bollywoodhttps://t.co/67WwlavNaI
— OpIndia.com (@OpIndia_com) June 27, 2021
ಇಮ್ರಾನ್ ಖಾನ್ ತಮ್ಮ ಮಾತನ್ನು ಮುಂದುವರೆಸುತ್ತಾ, ಪಾಕಿಸ್ತಾನಿ ಚಿತ್ರರಂಗವು ಆರಂಭದ ಕಾಲದಲ್ಲಿ ಭಾರತೀಯ ಚಿತ್ರರಂಗದಿಂದ ಪ್ರೇರಣೆಯನ್ನು ಪಡೆದುಕೊಂಡಿತು. ಅದು ಪಾಕ್‍ನ ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತಿದೆ. ನಾವು ಬೇರೆ ದೇಶದ ಸಂಸ್ಕೃತಿಯನ್ನು ಸ್ವೀಕರಿಸುತ್ತಿದ್ದೇವೆ. ನಾನು ಹೊಸ ಚಲನಚಿತ್ರ ನಿರ್ಮಾಪಕರಿಗೆ ಹೇಳಲಿಚ್ಛಿಸುವುದೆನೆಂದರೆ, ನಿಮ್ಮ ಮೂಲ ಸಂಸ್ಕೃತಿ ಜನರಿಗೆ ಇಷ್ಟವಾಗಲಿದೆ. ಆದ್ದರಿಂದ ನೀವು ಅದರ ಕಡೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಪಾಕಿಸ್ತಾನ ಚಿತ್ರರಂಗವು ಪ್ರಪಂಚಕ್ಕೆ ಒಂದು ಹೊಸದಾದ ಮತ್ತು ತನ್ನದೇ ಆದ ಪರಿಚಯ ನಿರ್ಮಾಣ ಮಾಡಿಕೊಳ್ಳಬಹುದು ಎಂದು ಹೇಳಿದರು.