ತೆಲಂಗಾಣ ರಾಜ್ಯದಲ್ಲಿ ಪ್ರತಿಯೊಂದು ದಲಿತ ಕುಟುಂಬದ ಓರ್ವ ಸದಸ್ಯನಿಗೆ ಸರಕಾರವು ೧೦ ಲಕ್ಷ ರೂಪಾಯಿ ನೀಡಲಿದೆ !

* ಪ್ರಜಾಪ್ರಭುತ್ವದಲ್ಲಿ ಈ ರೀತಿಯ ತೆರಿಗೆದಾರರ ಹಣವನ್ನು ಕೇವಲ ಜಾತಿಯ ಆಧಾರದಲ್ಲಿ ಹಂಚಲು ಸರಕಾರಕ್ಕೆ ಯಾವ ಅಧಿಕಾರ ಇದೆ ? ಒಂದುವೇಳೆ ಈ ಜಾತಿಯಲ್ಲಿ ಯಾರಾದರು ಆರ್ಥಿಕವಾಗಿ ಸಧೃಢವಾಗಿದ್ದರೆ, ಅವರಿಗೂ ಹಣವನ್ನು ನೀಡುವರೇ ?

* ಸರಕಾರದ ಬಳಿ ಹಣ ಹೆಚ್ಚಿದ್ದರೆ, ಅವರು ನಾಗರಿಕರಿಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ನೀಡಬೇಕು. ದೇಶ ಆರೋಗ್ಯ ವ್ಯವಸ್ಥೆ ಎಷ್ಟು ಕುಸಿದಿದೆ, ಎಂಬುದು ಕೊರೊನಾದ ಸಮಯದಲ್ಲಿ ಜಗತ್ತಿನೆದುರಿಗೆ ಬಂದಿದೆ. ಅದನ್ನು ಸುಧಾರಿಸಲು ಸರಕಾರ ಹಣವನ್ನು ಖರ್ಚು ಮಾಡಬೇಕು !

* ಯಾವುದಾದರೊಂದು ಸಮಾಜಕ್ಕೆ ಆರ್ಥಿಕವಾಗಿ ಒಳ್ಳೆಯ ಸ್ಥಿತಿಯಾಗಲು ಹಣ ನೀಡುವುದಕ್ಕಿಂತ ಅವರಿಗೆ ಉದ್ಯೋಗವನ್ನು ಏಕೆ ನೀಡುವುದಿಲ್ಲ ? ಕಡಿಮೆ ಬಡ್ಡಿಯ ದರದಲ್ಲಿ ಏಕೆ ಸಾಲ ನೀಡುವುದಿಲ್ಲ ?

ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್

ಭಾಗ್ಯನಗರ (ತೆಲಂಗಾಣಾ) – ರಾಜ್ಯ ಸರಕಾರವು ರಾಜ್ಯದ ಪ್ರತಿಯೊಂದು ದಲಿತ ಕುಟುಂಬದ ಓರ್ವ ಸದಸ್ಯರ ಬ್ಯಾಂಕಿನ ಖಾತೆಯಲ್ಲಿ ೧೦ ಲಕ್ಷ ರೂಪಾಯಿ ಜಮೆ ಮಾಡಲಾಗುವುದು, ಎಂದು ತೆಲಂಗಾಣಾದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರು ಘೋಷಣೆ ಮಾಡಿದರು. ಈ ಯೋಜನೆಗಾಗಿ ಸಧ್ಯ ೧ ಸಾವಿರದ ೨೦೦ ಕೋಟಿ ರೂಪಾಯಿಗಳ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಗೆ ‘ಮುಖ್ಯಮಂತ್ರಿ ದಲಿತ ಸಬಲೀಕರಣ ಕಾರ್ಯಕ್ರಮ’ ಎಂದು ಹೆಸರಿಡಲಾಗಿದೆ. ರಾಜ್ಯದ ದಲಿತರ ಆರ್ಥಿಕ ಸ್ಥಿತಿ ಸಧೃಢವಾಗಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಮೊದಲ ಹಂತದಲ್ಲಿ ೧೧ ಸಾವಿರದ ೯೦೦ ಕುಟುಂಬಗಳನ್ನು ಸಮಾವೇಶಗೊಳಿಸಲಾಗಿದೆ. ರಾಜ್ಯದ ಪ್ರತಿಯೊಂದು ಮತದಾನ ಕ್ಷೇತ್ರದಲ್ಲಿಯ ೧೦೦ ಕುಟುಂಬವನ್ನು ಮೊದಲನೇಯ ಹಂತದಲ್ಲಿ ಸೇರಿಸಲಾಗಿದೆ. ತೆಲಂಗಾಣಾದಲ್ಲಿ ವಿಧಾನಸಭೆಯ ೧೧೯ ಮತದಾನ ಕ್ಷೇತ್ರಗಳಿವೆ.