ಮೆರಠ(ಉತ್ತರಪ್ರದೇಶ)ನಲ್ಲಿ ಓರ್ವ ಸಾಧುವನ್ನು ಕಲ್ಲಿನಿಂದ ಜಜ್ಜಿ ಹತ್ಯೆ

ಉತ್ತರಪ್ರದೇಶದಲ್ಲಿ ನಿರಂತರವಾಗಿ ಸಾಧು, ಮಹಂತ ಮುಂತಾದವರ ಹತ್ಯೆಯಾಗುತ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

( ಸಾಂಕೇತಿಕ ಚಿತ್ರ )

ಮೇರಠ (ಉತ್ತರಪ್ರದೇಶ) – ಇಲ್ಲಿನ ಬಢಲಾ ಗ್ರಾಮದಲ್ಲಿ ಚಂದ್ರಪಾಲ ಎಂಬ ಸಾಧುವಿನ ಹತ್ಯೆಗೈದ ಘಟನೆ ನಡೆದಿದೆ. ಅವರು ಇಲ್ಲಿಯ ಒಂದು ದೇವಸ್ಥಾನದಲ್ಲಿ ವಾಸಿಸುತ್ತಿದ್ದರು. ಅಲ್ಲೇ ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಅವರು ಕಳೆದ ೧೦-೧೨ ವರ್ಷದಿಂದ ಈ ಗ್ರಾಮದಲ್ಲಿ ವಾಸಿಸುತ್ತಿದ್ದರು.