ಮುಸಲ್ಮಾನ ಬಹುಸಂಖ್ಯಾತ ಮೇವಾತ್(ಹರಿಯಾಣಾ)ದಲ್ಲಿ ಹಿಂದೂಗಳ ಮತಾಂತರದ ಬಗೆಗಿನ ಅರ್ಜಿಯ ಆಲಿಕೆಯನ್ನು ಮಾಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ದೈನಿಕದಲ್ಲಿ ಮುದ್ರಿಸಿರುವ ಸುದ್ದಿಯನ್ನು ಆಧರಿಸಿ ಸಲ್ಲಿಸಿದ ಅರ್ಜಿಯ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಪ್ರತ್ಯಕ್ಷ ಘಟನಾಸ್ಥಳಕ್ಕೆ ಹೋಗಿ ಮಾಹಿತಿ ಪಡೆಯಲಾಗಿದೆ ಎಂದು ಅರ್ಜಿದಾರರ ಹೇಳಿಕೆ !

ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರಗಳ ಬಗ್ಗೆ ಸರಕಾರವೂ ಏನೂ ಮಾಡುತ್ತಿಲ್ಲ ಮತ್ತು ನ್ಯಾಯಾಲಯವೂ ಈ ಬಗ್ಗೆ ಆಲಿಕೆ ಮಾಡಲು ನಿರಾಕರಿಸಿದರೆ, ಹಿಂದೂಗಳು ಏನು ಮಾಡಬೇಕು ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಒಂದೇ ಉತ್ತರ, ಅದುವೇ ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪಿಸುವುದು !

ನವ ದೆಹಲಿ – ಹರಿಯಾಣದ ಮುಸಲ್ಮಾನ ಬಹುಸಂಖ್ಯಾತ ಮೆವಾತನಲ್ಲಿ ಹಿಂದೂಗಳ ಮತಾಂತರದ ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಾಧೀಶರ ಮಾಧ್ಯಮದಿಂದ ವಿಚಾರಣೆಯನ್ನು ನಡೆಸಬೇಕೆಂದು ಒತ್ತಾಯಿಸಿದ ಅರ್ಜಿಯ ಬಗ್ಗೆ ಆಲಿಕೆಯನ್ನು ನಡೆಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ನ್ಯಾಯಾಲಯವು, ಅರ್ಜಿಯಲ್ಲಿ ಮಂಡಿಸಿದ ಅಂಶವು ಕೇವಲ ದೈನಿಕದಲ್ಲಿ ಮುದ್ರಿಸಿದ ಸುದ್ದಿಗಳ ಮೇಲಾಧಾರಿತವಾಗಿದೆ. ಈ ಬಗ್ಗೆ ನಾವು ಆಲಿಕೆ ಮಾಡುವುದಿಲ್ಲ, ಏಕೆಂದರೆ ನಾವು ಇಂತಹ ವಾರ್ತೆಗಳನ್ನು ಆಧರಿಸಿದ ಅರ್ಜಿಯ ಮೇಲೆ ವಿಶ್ವಾಸ ಇಡುವುದಿಲ್ಲ ಎಂದು ಹೇಳಿದೆ.

. ನ್ಯಾಯಾಲಯವು, ಈ ಅರ್ಜಿಯಲ್ಲಿ ಹಿಂದೂಗಳ ಬಲವಂತವಾಗಿ ಮತಾಂತರ, ಹಿಂದೂಗಳ ಆಸ್ತಿಯನ್ನು ಬಲವಂತವಾಗಿ ಮಾರಾಟ ಮಾಡುವುದು ಹಾಗೂ ಹಿಂದೂ ಯುವತಿಯರ ಮೇಲಾಗುತ್ತಿರುವ ಅತ್ಯಾಚಾರ ಇವುಗಳ ಬಗ್ಗೆ ವಿಚಾರಣೆಗಳನ್ನು ನಡೆಸಲು ವಿಶೇಷ ತನಿಖಾ ದಳವನ್ನು ಸ್ಥಾಪನೆ ಮಾಡುವ ಬೇಡಿಕೆಯ ಹಿಂದೆ ಯಾವುದೇ ಬಲವಾದ ಅಂಶವನ್ನು ಮಂಡಿಸಲಾಗಿಲ್ಲ. ಆದ್ದರಿಂದ ಈ ಬಗ್ಗೆ ಆಲಿಕೆಯನ್ನು ಮಾಡಲು ಸಾಧ್ಯವಿಲ್ಲ.

೨. ಈ ಅರ್ಜಿಯನ್ನು ನ್ಯಾಯವಾದಿ ರಂಜನಾ ಅಗ್ನಿಹೋತ್ರಿ, ಕರುಣೇಶ ಶುಕ್ಲಾ ಮತ್ತು ಇತರ ೩ ಜನರು ಸೇರಿ ಸಲ್ಲಿಸಿದ್ದರು. ಅವರು ಅದನ್ನು ನ್ಯಾಯವಾದಿ ವಿಷ್ಣುಶಂಕರ ಜೈನ್ ಇವರ ಮಾಧ್ಯಮದಿಂದ ನ್ಯಾಯಾಲಯದಲ್ಲಿ ಯುಕ್ತಿವಾದ ಮಾಡುತ್ತಾ, ನಾವು ಕೇವಲ ದೈನಿಕದಲ್ಲಿನ ಸುದ್ದಿಯನ್ನು ಆಧರಿಸಿ ಅರ್ಜಿಯನ್ನು ಸಲ್ಲಿಸಲಿಲ್ಲ, ಬದಲಾಗಿ ಘಟನಾ ಸ್ಥಳಕ್ಕೆ ಹೋಗಿ ಬಂದಿದ್ದೇವೆ. ಅಲ್ಲಿಯ ಜನರೊಂದಿಗೆ ಚರ್ಚಿಸಿದ್ದೇವೆ. ಸಂತ್ರಸ್ಥರ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ನಂತರ ಈ ಅರ್ಜಿಯನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.

೩. ಈ ಅರ್ಜಿಯಲ್ಲಿ, ಮೇವಾತನಲ್ಲಿ ವಾಸಿಸುವ ಹಿಂದೂಗಳ ಸ್ಥಿತಿಯು ಅತ್ಯಂತ ಕಷ್ಟಕರವಾಗಿದ್ದು ಅವರ ಮೂಲಭೂತ ಅಧಿಕಾರಗಳ ರಕ್ಷಣೆ ಮಾಡುವ ಅಗತ್ಯವಿದೆ. ಮೆವಾತನಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದಾರೆ. ಆದ್ದರಿಂದ ಅವರು ಹಿಂದೂಗಳ ಮೇಲೆ ಒತ್ತಡ ಹೇರಿದ್ದಾರೆ. ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ. ಆಡಳಿತ ಮತ್ತು ಪೊಲೀಸ್ ಇದನ್ನು ತಡೆಯಲು ವಿಫಲರಾಗಿದ್ದಾರೆ. ಅಲ್ಲಿಯ ಹಿಂದೂಗಳು ಇನ್ನೂ ಭಯದಿಂದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಮೇವಾತ ಬಗೆಗಿನ ಅರ್ಜಿಯನ್ನು ರದ್ದುಗೊಳಿಸಿದ ಘಟನೆಯು ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿ ನೊಂದಾಯಿಸಲ್ಪಡಲಿದೆ ! – ನ್ಯಾಯವಾದಿ ವಿಷ್ಣು ಶಂಕರ ಜೈನ್

ನ್ಯಾಯವಾದಿ ವಿಷ್ಣು ಶಂಕರ ಜೈನ್

ಮೇವಾತ ಬಗ್ಗೆ ಅರ್ಜಿಯನ್ನು ರದ್ದುಗೊಳಿಸುವುದು, ಈ ಘಟನೆಯು ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲಿ ನೊಂದಾಯಿಸಲ್ಪಡುವುದು. ಇತರ ಅರ್ಜಿಯ ಬಗ್ಗೆ ಏಕೆ ಆಲಿಕೆ ಮಾಡಲಾಗುತ್ತದೆ ? ಈ ಬಗ್ಗೆ ನಾನು ಯಾವಾಗಲೂ ಪ್ರಶ್ನೆಯನ್ನು ಕೇಳುವೆನು. ಇದೊಂದು ವಸ್ತುನಿಷ್ಠ ಪ್ರಕರಣವಾಗಿತ್ತು. ನನ್ನ ಬಂಧು-ಭಗಿನಿಯರ ಬಗ್ಗೆ ನಾನು ಕ್ಷಮೆಯಾಚಿಸುತ್ತೇನೆ. ನಾನು ನನ್ನಿಂದ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಿದೆ, ಎಂದು ಈ ಪ್ರಕರಣದ ಬಗ್ಗೆ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಟ್ವೀಟ್ ಮಾಡಿದ್ದಾರೆ.