ಭಗವಾನ ಶ್ರೀಕೃಷ್ಣನ ದೇವಸ್ಥಾನ ಮಥುರಾದಲ್ಲಿ ಕಟ್ಟದೇ ಇನ್ನೇನು ಲಾಹೋರಿನಲ್ಲಿ ಕಟ್ಟುವರೇ ? – ಉತ್ತರಪ್ರದೇಶದ ಹೈನುಗಾರಿಕೆ ಅಭಿವೃದ್ಧಿ ಸಚಿವೆ ಚೌಧರಿ ಲಕ್ಷ್ಮೀನಾರಾಯಣ

ಕೆಲವು ದಿನಗಳ ಹಿಂದೆ ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ಇತರ ಸಚಿವರು ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯ ಮೇಲೆ ಶ್ರೀಕೃಷ್ಣ ಮಂದಿರ ನಿರ್ಮಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಅದಕ್ಕಾಗಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಚೌಧರಿ ಲಕ್ಷ್ಮೀನಾರಾಯಣ್ ಇವರು ಈ ಮೇಲಿನ ಉತ್ತರ ನೀಡಿದರು.

ಕುನ್ನೂರ್ (ತಮಿಳುನಾಡು) ಇಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿ ‘ಸಿ.ಡಿ.ಎಸ್.’ ಜನರಲ್ ಬಿಪಿನ್ ರಾವತ್ ಸೇರಿದಂತೆ ೧೩ ಜನರ ಮೃತ್ಯು

ಭಾರತದ ಮೂರೂ ಸೇನಾ ದಳದ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಇವರನ್ನು ಕರೆದೊಯ್ಯುತ್ತಿದ್ದ ಸೇನೆಯ ‘ಎಂ.ಐ. ೧೭ ವಿ ೫’ ಈ ಅತ್ಯಾಧುನಿಕ ಹೆಲಿಕಾಪ್ಟರ್ ಇಲ್ಲಿಯ ನೀಲಗಿರಿ ಬೆಟ್ಟದಲ್ಲಿ ಪತನಗೊಂಡು ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅದರಲ್ಲಿದ್ದ ರಾವತ್ ಸೇರಿದಂತೆ ೧೩ ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ ರಾವತ್ ಅವರ ಪತ್ನಿಯೂ ಸೇರಿದ್ದಾರೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಜೆ.ಎನ್.ಯು.ನಲ್ಲಿ ಬಾಬ್ರಿಯ ಬೆಂಬಲಕ್ಕಾಗಿ ಕಮ್ಯುನಿಸ್ಟ ವಿಚಾರ ಸರಣಿಯ ವಿದ್ಯಾರ್ಥಿಗಳ ಸಂಘಟನೆಯಿಂದ ಆಂದೋಲನ

ವಿವಾದಿತ ಜವಾಹರಲಾಲ್ ನೆಹರು ವಿದ್ಯಾಪೀಠ ಅಂದರೆ ಜೆ.ಎನ್.ಯು.ನಲ್ಲಿ ಡಿಸೆಂಬರ್ ೬ ರ ರಾತ್ರಿ ಜೆ.ಎನ್.ಯು.ನ ವಿದ್ಯಾರ್ಥಿ ಸಂಘಟನೆ ಬಾಬ್ರಿಯನ್ನು ಬೆಂಬಲಿಸಲು ಆಂದೋಲನ ನಡೆಸಿದರು.

ಸಂವಿಧಾನದ ಪ್ರಸ್ತಾವನೆಯಿಂದ ‘ಜಾತ್ಯಾತೀತ’ ಮತ್ತು ‘ಸಮಾಜವಾದ’ ಶಬ್ದವನ್ನು ತೆಗೆಯಲು ರಾಜ್ಯಸಭೆಯಲ್ಲಿ ಖಾಸಗಿ ವಿಧೇಯಕ ಮಂಡನೆ !

ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿರುವ ‘ಧರ್ಮನಿರಪೇಕ್ಷ’ (ಸೆಕ್ಯುಲರ್) ಮತ್ತು ‘ಸಮಾಜವಾದ’ (ಸೋಶಿಯಲಿಸ್ಟ್) ಶಬ್ದಗಳನ್ನು ತೆಗೆದುಹಾಕುವ ಬಗ್ಗೆ ಖಾಸಗಿ ವಿಧೇಯಕವನ್ನು ಭಾಜಪದ ರಾಜ್ಯಸಭೆಯಲ್ಲಿನ ಸಂಸದರಾದ ಕೆ. ಜೆ. ಅಲ್ಫೊಂಸರವರು ಸಾದರಪಡಿಸಿದ್ದಾರೆ.

ಸಂಭಲ(ಉತ್ತರಪ್ರದೇಶ) ಇಲ್ಲಿಯ ಶ್ರೀ ಚಾಮುಂಡಾದೇವಿ ದೇವಸ್ಥಾನದ ಮೂರ್ತಿಯು ದುಷ್ಕರ್ಮಿಗಳಿಂದ ಧ್ವಂಸ

ಗುನ್ನೌರ ಕ್ಷೇತ್ರದ ಶ್ರೀ ಚಾಮುಂಡಾದೇವಿಯ ದೇವಸ್ಥಾನದಲ್ಲಿನ ಮೂರ್ತಿಯನ್ನು ದುಷ್ಕರ್ಮಿಗಳಿಂದ ಧ್ವಂಸ ಮಾಡಿರುವ ಘಟನೆ ಡಿಸೆಂಬರ್ ೫ ರ ರಾತ್ರಿ ನಡೆದಿದೆ. ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಶಾಲೆಯ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ ಮತಾಂಧ ಶಿಕ್ಷಕನ ಬಂಧನ

ಶಾಲೆಯ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸುವುದರ ಮೂಲಕ ಮಕ್ಕಳ ವಿಡಿಯೋ ಮಾಡಿದ ಪ್ರಕರಣದಲ್ಲಿ ನೌಶಾದ್ ಎಂಬ ಶಿಕ್ಷಕನನ್ನು ಬಂಧಿಸಲಾಗಿದೆ. ಅತನ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

೪ ಮುಸಲ್ಮಾನ ಆರೋಪಿಗಳನ್ನು ಬಂಧಿಸಿ ದೌರ್ಜನ್ಯ ನಡೆಸಿದ್ದರಿಂದ ಅವರಿಗೆ ಪ್ರತಿಯೊಬ್ಬರಿಗೂ ೧ ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡಬೇಕು ! – ತಮಿಳುನಾಡು ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯದಲ್ಲಿ ಹಸುವಿನ ತಲೆ ಎಸೆದಿರುವ ಪ್ರಕರಣದಲ್ಲಿ ಬಂಧಿಸಲಾಗಿರುವ ೪ ಮುಸಲ್ಮಾನ ಯುವಕರಿಗೆ ತಲಾ ೧ ಲಕ್ಷ ನಷ್ಟ ಪರಿಹಾರ ನೀಡಬೇಕೆಂದು, ಎಂದು ತಮಿಳುನಾಡು ರಾಜ್ಯ ಮಾನವ ಹಕ್ಕುಗಳ ಆಯೋಗವು ಆದೇಶ ನೀಡಿದೆ.

ವಸಿಮ್ ರಿಝವಿ ಇವರ ಶಿರಚ್ಛೇದ ಮಾಡುವವರಿಗೆ ೫೦ ಲಕ್ಷ ರೂಪಾಯಿ ನೀಡಲಾಗುವುದು !

ಕಾಂಗ್ರೆಸ್‌ನ ನಾಯಕ ಮಹಮ್ಮದ ಫಿರೋಜ್ ಖಾನ್ ಇವರು ‘ಶಿಯಾ ಸೆಂಟ್ರಲ್ ವಕ್ಫ ಬೋರ್ಡ್’ನ ಮಾಜಿ ಅಧ್ಯಕ್ಷ ಹಾಗೂ ಇತ್ತಿಚೆಗೆ ಹಿಂದೂಧರ್ಮ ಸ್ವೀಕರಿಸಿರುವ ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರ ಶಿರಚ್ಛೇದ ಮಾಡಿ ಆ ತಲೆ ತಂದುಕೊಟ್ಟರೆ ಅವರಿಗೆ ೫೦ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದೆಂದು ಘೋಷಣೆ ಮಾಡಿದರು.

ಸಮಯ ಇರುವಾಗಲೇ ಸ್ವಂತದಲ್ಲಿ ಬದಲಾವಣೆ ತನ್ನಿ ಇಲ್ಲವಾದರೆ ಪರಿವರ್ತನೆಯಾಗಬಹುದು !

ನಾನು ನಿಮಗೆ ಯಾವಾಗಲೂ ಸಂಸತ್ತಿನಲ್ಲಿ ಹಾಜರಾಗಲು ಹೇಳುತ್ತಿರುತ್ತೇನೆ. ಯಾವಾಗ ನೀವು ನಿಮ್ಮ ಮಕ್ಕಳಿಗೆ ಮನೆಯ ಕೆಲವು ಕೆಲಸಗಳನ್ನು ಮಾಡಲು ಹೇಳಿದಾಗ ಅವರು ಮಾಡದಿದ್ದರೆ, ಆಗ ನಿಮಗೆ ಸಿಟ್ಟು ಬರುತ್ತದೆ. ಹಾಗಾದರೆ, ನಾನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅವಸ್ಥೆ ಏನಾಗಬಹುದು. ಎಂದು ಯೋಚನೆ ಮಾಡಿರಿ.

ವಿಶ್ವ ಹಿಂದೂ ಪರಿಷತ್ತು ಡಿಸೆಂಬರ್ ೨೧ ರಿಂದ ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ದೇಶವ್ಯಾಪಿ ‘ಜನಜಾಗರಣ ಆಂದೋಲನವನ್ನು ಮಾಡಲಿದೆ!

ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ತು ೨೧ ಡಿಸೆಂಬರ್‌ನಿಂದ ದೇಶವ್ಯಾಪಿ ‘ಜನಜಾಗರಣ ಆಂದೋಲನ ಪ್ರಾರಂಭಿಸಲಿದೆ. ಇದರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮನೆಮನೆಗೆ ಹೋಗಿ ಹಿಂದೂಗಳನ್ನು ಎಚ್ಚರಿಸಲಿದ್ದಾರೆ.