Somnath Bulldozer Action : ಸೋಮನಾಥ (ಗುಜರಾತ): ಸರಕಾರಿ ಜಮೀನಿನಲ್ಲಿದ್ದ ಮುಸ್ಲಿಮರ 50ಕ್ಕೂ ಹೆಚ್ಚು ಅಕ್ರಮ ಧಾರ್ಮಿಕ ಸ್ಥಳಗಳು ನೆಲಸಮ !

  • ಅನಧಿಕೃತ ನಿರ್ಮಾಣದ ವಿರುದ್ಧ ದೇಶದ ಮಟ್ಟದಲ್ಲಿ ತೆಗೆದುಕೊಂಡ ಅತಿ ದೊಡ್ಡ ಕ್ರಮ !

  • ಕ್ರಮ ಕೈಗೊಳ್ಳುವಾಗ ಹೆಚ್ಚಿನ ಸಂಖ್ಯೆಯ ಮುಸ್ಲಿಮರ ಉಪಸ್ಥಿತಿ

ಸೋಮನಾಥ (ಗುಜರಾತ್) – ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿರುವ ಸರಕಾರಿ ಜಮೀನಿನಲ್ಲಿ ಅಕ್ರಮ ಮಸೀದಿಗಳು ಹಾಗೂ ಇತರೆ ಧಾರ್ಮಿಕ ಸ್ಥಳಗಳು ತಲೆ ಎತ್ತಿದ್ದವು. ಆಡಳಿತ ಅವುಗಳನ್ನು ನೆಲಸಮ ಮಾಡಿದೆ. ಸೆಪ್ಟೆಂಬರ್ 27 ರಂದು 102 ಎಕರೆ ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಅಕ್ರಮ ಧಾರ್ಮಿಕ ಸ್ಥಳಗಳು, ಕಟ್ಟಡಗಳು ಮತ್ತು ಇತರ ನಿರ್ಮಾಣಗಳ ವಿರುದ್ಧ 35 ಕ್ಕೂ ಹೆಚ್ಚು ಬುಲ್ಡೋಜರ್‌ಗಳನ್ನು ಬಳಸಿ, ಕ್ರಮ ಕೈಗೊಳ್ಳಲಾಯಿತು. ಅಕ್ರಮ ಕಟ್ಟಡಗಳ ವಿರುದ್ಧ ಕೈಗೊಂಡಿರುವ ಈ ಕ್ರಮವು ದೇಶದಲ್ಲೇ ಅತಿ ದೊಡ್ಡ ಕ್ರಮವಾಗಿದೆ.

ಉಜ್ಜಯಿನಿಯ ಮಹಾಕಾಲ ಕಾರಿಡಾರ್‌ನಂತೆ ಸೋಮನಾಥದಲ್ಲಿ ಕಾರಿಡಾರ್‌ ಅಭಿವೃದ್ಧಿಯಾಗಲಿದೆ. ಈ ಅಕ್ರಮ ನಿರ್ಮಾಣಗಳಿಗೆ ಆಡಳಿತ ನೋಟಿಸ್ ಜಾರಿ ಮಾಡಿದ್ದರೂ, ಅದನ್ನು ತೆಗೆಯದೆ ಇದ್ದ ಕಾರಣದಿಂದ ಕೊನೆಗೆ ಆಡಳಿತವೇ ಕ್ರಮ ಕೈಗೊಂಡಿದೆ. ಕ್ರಮ ಕೈಕೊಳ್ಳುವ ಸಮಯದಲ್ಲಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದರು. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು 1 ಸಾವಿರ 400 ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಸೋಮನಾಥ ಮಂದಿರದಿಂದ ಸ್ವಲ್ಪ ದೂರದಲ್ಲಿರುವ ಸರಕಾರಿ ಭೂಮಿಯ ಮೇಲೆ ಕಳೆದ ಹಲವು ವರ್ಷಗಳಿಂದ ಅಕ್ರಮ ನಿರ್ಮಾಣಗಳನ್ನು ನಿರ್ಮಿಸಲಾಗಿತ್ತು. (ಸರ್ಕಾರಿ ಭೂಮಿಯ ಮೇಲೆ ಅಕ್ರಮ ನಿರ್ಮಾಣಗಳಾಗುತ್ತಿದ್ದಾಗ ಆಡಳಿತ ಮಲಗಿತ್ತೇ ?- ಸಂಪಾದಕರು) ಕಾರ್ಯಾಚರಣೆಯ ಸಮಯದಲ್ಲಿ ಬುಲ್ಡೋಜರ್‌ಗಳು, ನೂರಾರು ಟ್ರ್ಯಾಕ್ಟರ್‌ಗಳು ಮತ್ತು ಡಂಪರ್‌ಗಳನ್ನು ನಿಯೋಜಿಸಲಾಗಿತ್ತು.

ಸಂಪಾದಕೀಯ ನಿಲುವು

ಇಂತಹ ಕ್ರಮ ಕೈಗೊಂಡ ಭಾಜಪ ಸರಕಾರಕ್ಕೆ ಅಭಿನಂದನೆಗಳು ! ಇನ್ನುಮುಂದೆ ಇಂತಹ ಅಕ್ರಮ ಧಾರ್ಮಿಕ ಸ್ಥಳಗಳು ತಲೆ ಎತ್ತದಂತೆ ಗುಜರಾತ ಸರಕಾರ ಅಂಕುಶವಿಡಬೇಕು ಎನ್ನುವುದು ಧರ್ಮಪ್ರೇಮಿ ಹಿಂದೂಗಳಿಗೆ ಅನಿಸುತ್ತದೆ !

ಕಾಂಗ್ರೆಸ್ ನಿಂದ ಅಕ್ರಮ ಕಟ್ಟಡಗಳ ರಕ್ಷಣೆಗೆ ಪ್ರಯತ್ನ !

ಕಾರ್ಯಾಚರಣೆ ನಡೆಸಲಾಗಿರುವ ಈ ಅಕ್ರಮ ಕಟ್ಟಡಗಳನ್ನು ರಕ್ಷಿಸಲು ಪ್ರಯತ್ನಿಸುವಾಗ ಗುಜರಾತ ಪ್ರದೇಶ ಕಾಂಗ್ರೆಸ ಸಮಿತಿಯ ಉಪಾಧ್ಯಕ್ಷ ನುಸರತ ಪಂಜಾ ಇವರು ಮಾತನಾಡಿ, ಕೆಡವಲಾಗಿರುವ ಕಟ್ಟಡಗಳಿಗೆ 700 ರಿಂದ 800 ವರ್ಷಗಳ ಇತಿಹಾಸವಿದ್ದು ಜುನಾಗಡದ ನವಾಬರ ಆಡಳಿತಾವಧಿಯಲ್ಲಿ ಕಟ್ಟಡಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿತ್ತು. ಅದು ವಕ್ಫ ಬೋರ್ಡನ ಆಸ್ತಿಯಾಗಿತ್ತು. ಜಿಲ್ಲಾಧಿಕಾರಿಗಳು ಮತ್ತು ಸರಕಾರವು ನ್ಯಾಯಾಲಯದ ಕಟ್ಟಡವನ್ನು ಕೆಡವುವ ತೀರ್ಪನ್ನು ತಪ್ಪಾಗಿ ಅರ್ಥೈಸಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಸಲ್ಮಾನರ ಓಲೈಕೆ ಮಾಡುವ ಕಾಂಗ್ರೆಸ್‌ನಿಂದ ಮತ್ತಿನ್ನೇನು ನಿರೀಕ್ಷಿಸಬಹುದು ?

ನೊಟೀಸು ನೀಡಿದರೂ, ಅಕ್ರಮ ಕಟ್ಟಡ ತೆರವು ಮಾಡಲಿಲ್ಲ ! – ಜಿಲ್ಲಾಧಿಕಾರಿ ಡಿ.ಡಿ. ಜಡೇಜಾ

ಜಿಲ್ಲಾಧಿಕಾರಿ ಡಿ.ಡಿ. ಜಡೇಜಾ

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಿ.ಡಿ. ಜಡೇಜಾ ಮಾತನಾಡಿ, ಸೋಮನಾಥದಲ್ಲಿನ ಅಕ್ರಮ ಒತ್ತುವರಿ ತೆರವು ಮಾಡಲು ಆಡಳಿತವು ಬಹಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಅದರ ನಂತರ, ಜಾಗವನ್ನು ಖಾಲಿ ಮಾಡಲು ಸಾಕಷ್ಟು ಕಾಲಾವಧಿ ನೀಡಲಾಗಿತ್ತು; ಆದರೆ ನಂತರವೂ ಜಮೀನು ತೆರವು ಮಾಡಿಲ್ಲ ಎಂದು ಹೇಳಿದರು. ಕ್ರಮವನ್ನು ವಿರೋಧಿಸಿದ 120 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮನಾಥದಲ್ಲಿಯೂ ಕಾರಿಡಾರ್ ಕಾರ್ಯಕ್ಕೆ ವೇಗ ಪಡೆಯುವ ಸಾಧ್ಯತೆ

ಸೋಮನಾಥದಲ್ಲಿಯೂ ಕಾರಿಡಾರ್ ನಿರ್ಮಾಣವಾಗಲಿದೆ. ಇದಕ್ಕಾಗಿ ಕೇಂದ್ರ ಸರಕಾರದಿಂದ ಒಪ್ಪಿಗೆ ಸಿಕ್ಕಿದೆ. ಸೋಮನಾಥ ಮಂದಿರದ ಅಭಿವೃದ್ಧಿಗೆ ಹಲವು ಯೋಜನೆಗಳ ಕಾಮಗಾರಿ ನಡೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಈ ಕಾರ್ಯಾಚರಣೆಯ ನಂತರ, ಕಾರ್ಯಕ್ಕೆ ವೇಗ ಸಿಗುವ ಸಾಧ್ಯತೆಯಿದೆ.