|
ಮುಂಬಯಿ – ನವರಾತ್ರಿ ಎಂದರೆ ಶಕ್ತಿ ಸ್ವರೂಪಿಣಿ ಶ್ರೀ ದುರ್ಗೆಯ ಉತ್ಸವ ಕೆಲವೇ ದಿನಗಳಲ್ಲಿ ಬರುತ್ತದೆ. ಹೇಗೆ ಶ್ರೀ ದುರ್ಗಾದೇವಿ ಶಕ್ತಿಯ ಪ್ರತೀಕವಾಗಿದ್ದೂ ಕೆಟ್ಟ ಪ್ರವೃತ್ತಿಯ ನಾಶ ಮಾಡುತ್ತಾಳೆ, ಅದರಂತೆ ಸಮಾಜದಲ್ಲಿನ ನರಾಧಮರಿಗೆ ಪಾಠ ಕಲಿಸುವ ದುರ್ಗೆ ಪ್ರತಿಯೊಂದು ಮನೆಯಲ್ಲಿ ಇರಬೇಕು, ಈ ಉದ್ದೇಶದಿಂದ ನಾವು ‘ಹರ ಘರ್ ದುರ್ಗಾ’ ಅಭಿಯಾನ ಆರಂಭಿಸುತ್ತಿದ್ದೇವೆ, ಎಂದು ಕೌಶಲ್ಯಾಭಿವೃದ್ಧಿ ಸಚಿವ ಮಂಗಲ ಪ್ರಭಾತ ಲೋಢಾ ಇವರು ಒಂದು ಪತ್ರಕರ್ತರ ಸಭೆಯಲ್ಲಿ ಪ್ರತಿಪಾದಿಸಿದರು. ಸಪ್ಟೆಂಬರ್ ೩೦ ರಿಂದ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಇವರಿಂದ ಈ ಅಭಿಯಾನ ಆರಂಭಿಸಲಾಗುವುದು. ಈ ಕಾರ್ಯಕ್ರಮ ಕುರ್ಲಾದ ಸರಕಾರಿ ವಾಣಿಜ್ಯ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಪಡಣವೀಸ್ ಮತ್ತು ಉಪ ಮುಖ್ಯಮಂತ್ರಿ ಅಜಿತ ಪವಾರ್ ಇವರ ವಿಶೇಷ ಉಪಸ್ಥಿತಿ ಇರುವುದು. ಕೇರಳದಲ್ಲಿನ ಲವ್ ಜಿಹಾದ್ ಆಧಾರಿತ ‘ದ ಕೇರಳ ಸ್ಟೋರಿ’ ಈ ಚಲನಚಿತ್ರದಲ್ಲಿ ಮಿಂಚಿದ ಪ್ರಸಿದ್ಧ ನಟಿ ಅದಾ ಶರ್ಮ ಇವರೂ ಕೂಡ ಈ ಸಮಯದಲ್ಲಿ ಉಪಸ್ಥಿತರಿರುವರು.