ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ದಾಂಡಿ ಗ್ರಾಮದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗಿರುವುದನ್ನು ವಿರೋಧಿಸಿ ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂದೂಗಳು ಈ ಮಸೀದಿಯ ಒಂದು ಗೋಡೆಯನ್ನು ಕೆಡವಿದ್ದರಿಂದ ಭಾರೀ ಉದ್ವಿಗ್ನತೆ ಉಂಟಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ವಿಶೇಷವೆಂದರೆ ಪೊಲೀಸರು ಕೆಡವಲಾಗಿದ್ದ ಗೋಡೆಯನ್ನು ಪುನಃ ನಿರ್ಮಿಸಿ ಕೊಟ್ಟಿದ್ದಾರೆ.
1. ಈ ಅಕ್ರಮ ನಿರ್ಮಾಣದ ಬಗ್ಗೆ ಹಿಂದೂಗಳು 3 ತಿಂಗಳ ಹಿಂದೆಯೇ ಆಡಳಿತಕ್ಕೆ ದೂರು ನೀಡಿದ್ದರು. ಆ ಸಮಯದಲ್ಲಿ ಆಡಳಿತವು ಪೊಲೀಸರ ಸಮ್ಮುಖದಲ್ಲಿ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದರು; ಆದರೆ ತದನಂತರವೂ ಅಕ್ರಮ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಕೆಡವದ ಕಾರಣ ಹಿಂದೂಗಳಲ್ಲಿ ಆಕ್ರೋಶ ಹೆಚ್ಚಾಗತೊಡಗಿತು
2. ಸೆಪ್ಟೆಂಬರ್ 27 ರಂದು ಹಿಂದೂಗಳು ಅಕ್ರಮ ಮಸೀದಿ ಗೋಡೆಯ ಒಂದು ಭಾಗವನ್ನು ಕೆಡವಿದರು. ಈ ಘಟನೆಯ ನಂತರ, ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಅವರ ಮೇಲ್ವಿಚಾರಣೆಯಲ್ಲಿ ಮತ್ತೆ ಗೋಡೆಯನ್ನು ನಿರ್ಮಿಸಿದರು. ಆ ಸಮಯದಲ್ಲಿ ಹಿಂಸಾಚಾರವೂ ನಡೆಯಿತು. ಈ ಪ್ರಕರಣದಲ್ಲಿ ಪೊಲೀಸರು ಕೆಲವು ಹಿಂದೂಗಳನ್ನೂ ಬಂಧಿಸಿದರು.
3. ಈ ಬಂಧನದಿಂದಾಗಿ ಹಿಂದೂಗಳು ಆಕ್ರೋಶಗೊಂಡರು ಮತ್ತು ಅವರು ಭಾಜಪ ಶಾಸಕ ಡಾ. ಆರ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದರು. ಈ ಸಂದರ್ಭದಲ್ಲಿ, ಬಂಧಿಸಲಾಗಿರುವ ಯುವಕರನ್ನು ಯಾವುದೇ ಷರತ್ತುಗಳಿಲ್ಲದೇ ಬಿಡುಗಡೆ ಮಾಡಬೇಕು, ಅಕ್ರಮ ಕಟ್ಟಡ ಕಾಮಗಾರಿಯನ್ನು ಸಂಪೂರ್ಣ ನಿಲ್ಲಿಸುವಂತೆ ಒತ್ತಾಯಿಸಲಾಯಿತು.
4. ಪೊಲೀಸರು ಗೋಡೆಯನ್ನು ಪುನಃ ನಿರ್ಮಿಸಿಕೊಟ್ಟಿದ್ದರಿಂದ ಪೊಲೀಸರ ಪಾತ್ರದ ಬಗ್ಗೆ ಪ್ರಶ್ನೆಗಳು ನಿರ್ಮಾಣವಾಗಿದೆ; ಪೊಲೀಸರು ಮುಸ್ಲಿಮರ ಪರವಾಗಿ ಕೆಲಸ ಮಾಡುತ್ತಾರೆ ಮತ್ತು ಅಕ್ರಮ ಕಟ್ಟಡಗಳನ್ನು ಪ್ರೋತ್ಸಾಹಿಸುತ್ತಾರೆ ಎಂದು ಹಿಂದೂಗಳು ಆರೋಪಿಸಿದ್ದಾರೆ.
5. ಪೊಲೀಸ್ ವರಿಷ್ಠಾಧಿಕಾರಿ ಮುಖೇಶ ಚಂದ್ರ ಮಿಶ್ರಾ ಮಾತನಾಡಿ, ಆಡಳಿತವು ಈ ಹಿಂದೆಯೂ ಮಸೀದಿಯ ಅಕ್ರಮ ನಿರ್ಮಾಣವನ್ನು ತಡೆಯಲು ಕ್ರಮಕೈಗೊಂಡಿತ್ತು. ಜಿಲ್ಲಾ ದಂಡಾಧಿಕಾರಿಗಳ ಆದೇಶದಂತೆ ಕಾಮಗಾರಿಯನ್ನು ಮೊದಲೇ ನಿಲ್ಲಿಸಲಾಗಿತ್ತು’. ಆದರೆ ಹಿಂದೂಗಳು, ಅಲ್ಲಿ ನಾಮಜ ಮಾಡಲಾಗುತ್ತಿತ್ತು ಮತ್ತು ನಿರ್ಮಾಣ ಕಾರ್ಯವು ರಹಸ್ಯವಾಗಿ ಪುನಃ ಪ್ರಾರಂಭಿಸಲಾಗಿದೆ.
ಸಂಪಾದಕೀಯ ನಿಲುವು
|