ವಿಶ್ವ ಹಿಂದೂ ಪರಿಷತ್ತು ಡಿಸೆಂಬರ್ ೨೧ ರಿಂದ ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ದೇಶವ್ಯಾಪಿ ‘ಜನಜಾಗರಣ ಆಂದೋಲನವನ್ನು ಮಾಡಲಿದೆ!

ಕೇಂದ್ರದಲ್ಲಿ ಮತ್ತು ದೇಶದ ಅನೇಕ ರಾಜ್ಯಗಳಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳು ಈ ರೀತಿಯ ಆಂದೋಲನಗಳನ್ನು ಕೈಗೊಳ್ಳಬಾರದು ಎಂದಾಗಿದ್ದರೆ, ಸರಕಾರವು ಇವುಗಳ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ನವ ದೆಹಲಿ – ಮತಾಂತರ, ಲವ್ ಜಿಹಾದ್, ಭೂಮಿ ಜಿಹಾದ್ ಇತ್ಯಾದಿಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ತು ೨೧ ಡಿಸೆಂಬರ್‌ನಿಂದ ದೇಶವ್ಯಾಪಿ ‘ಜನಜಾಗರಣ ಆಂದೋಲನ ಪ್ರಾರಂಭಿಸಲಿದೆ. ಇದರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮನೆಮನೆಗೆ ಹೋಗಿ ಹಿಂದೂಗಳನ್ನು ಎಚ್ಚರಿಸಲಿದ್ದಾರೆ.

ಈ ವಿಷಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ವಕ್ತಾರರಾದ ವಿನೋದ ಕುಮಾರ ಬನ್ಸಲ್ ಇವರು ಮುಂದಿನಂತೆ ಹೇಳಿದ್ದಾರೆ,

೧. ಭಾರತವನ್ನು ಜನಸಂಖ್ಯೆಯ ಆಧಾರದಲ್ಲಿ ಅದರ ನಕಾಶೆಯನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿದೆ. ದೇಶದಲ್ಲಿ ‘ಚಿಕ್ಕ ಪಾಕಿಸ್ತಾನ ಮತ್ತು ‘ಚಿಕ್ಕ ವ್ಯಾಟಿಕನ್ ರಚಿಸಲಾಗುತ್ತಿದೆ. ಇದರ ಮಾಹಿತಿ ಆಡಳಿತಕ್ಕೆ ಇಲ್ಲದಿರುವುದು ಚಿಂತೆಯ ವಿಷಯವಾಗಿದೆ.

೨. ನಾವೂ ಕೂಡ ಹಿಂದೂಗಳ ಮತಾಂತರದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಮಧ್ಯಪ್ರದೇಶದ ಝಾಬುಆ ಜಿಲ್ಲೆಯಲ್ಲಿ ಕಳೆದ ೩ ದಶಕಗಳಲ್ಲಿ ೫೩ ಚರ್ಚಗಳನ್ನು ನಿರ್ಮಿಸಲಾಗಿದೆ ಮತ್ತು ಆಶ್ಚರ್ಯವೆಂದರೆ ಈ ವಿಷಯದಲ್ಲಿ ಆಡಳಿತಕ್ಕೆ ಯಾವುದೇ ಮಾಹಿತಿಯಿಲ್ಲ. ವಿಶೇಷವೆಂದರೆ ಈ ಎಲ್ಲ ಚರ್ಚಗಳು ಸರಕಾರದ ಭೂಮಿಯಲ್ಲಿ ನಿರ್ಮಿಸಲಾಗಿದೆ. (ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಲ್ಲಿಯವರೆಗೆ ಈ ಕುರಿತು ಕ್ರಮ ಜರುಗಿಸದೇ ಇರುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ!- ಸಂಪಾದಕರು) ಇಲ್ಲಿಯವರೆಗೆ ಎಷ್ಟು ಹಿಂದೂಗಳ ಮತಾಂತರವಾಗಿದೆಯೆನ್ನುವುದೂ ತಿಳಿದಿಲ್ಲ.

೩. ಮಿಶನರಿಗಳೊಂದಿಗೆ ಮತಾಂಧರ ವಿರುದ್ಧವೂ ಜನಜಾಗೃತಿ ಮಾಡಲಿದ್ದೇವೆ. ಉತ್ತರಪ್ರದೇಶದಲ್ಲಿ ‘ಲವ್ ಜಿಹಾದ್ನ ದೊಡ್ಡ ಪ್ರಕರಣಗಳು ಬಹಿರಂಗಗೊಂಡಿದೆ. ಇಸ್ಲಾಮಿ ಸಂಸ್ಥೆಗಳು ಯಾವ ರೀತಿ ಕಾರ್ಯ ಮಾಡುತ್ತಿವೆಯೆನ್ನುವುದು ಗಮನಕ್ಕೆ ಬಂದಿದೆ.

೪. ೨೧ ಡಿಸೆಂಬರ್‌ನಿಂದ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮನೆಮನೆಗೆ ಹೋಗಿ ಹಿಂದೂಗಳಿಗೆ ಇವೆಲ್ಲ ಸಂಕಟಗಳ ಮಾಹಿತಿಯನ್ನು ನೀಡಲಿದ್ದಾರೆ. ಈ ಅಭಿಯಾನ ೧ ತಿಂಗಳ ವರೆಗೆ ಜರುಗಲಿದೆ.

೫.ಮತಾಂತರದಿಂದ ಕೇವಲ ಹಿಂದೂಗಳಷ್ಟೇ ಅಲ್ಲ, ಸಿಖ್ಖರು, ಬೌದ್ಧರು ಮತ್ತು ಜೈನರು ಕೂಡ ಪೀಡಿತರಾಗಿದ್ದಾರೆ. ಕಾಂಗ್ರೆಸ್ ಸರಕಾರವಿರುವ ಪಂಜಾಬ ಮುಖ್ಯಮಂತ್ರಿ ಚರಣಜೀತ ಚನ್ನಿಯವರು ಕ್ರಿಶ್ಚಿಯನ್ ಮಿಶನರಿಗಳ ಸಭೆಗೆ ಹೋಗುವವರಿದ್ದರು. ಆ ಸಭೆಯಲ್ಲಿ ಜನರನ್ನು ಮತಾಂತರಗೊಳಿಸುವವರಿದ್ದರು. ಇದನ್ನು ವಿರೋಧಿಸಿದ ಬಳಿಕ ಮುಖ್ಯಮಂತ್ರಿ ಚನ್ನಿಯವರು ಹೋಗುವುದನ್ನು ರದ್ದುಗೊಳಿಸಿದರು. ಪಂಜಾಬಿನಲ್ಲಿ ಕೆಲವು ಜಿಲ್ಲೆಗಳು ಮತಾಂತರದ ಅಡ್ಡೆಗಳಾಗಿವೆ.