ಭೋಪಾಲ್ (ಮಧ್ಯಪ್ರದೇಶ) – ದತಿಯಾ ಪ್ರದೇಶದ ೬೦ ವರ್ಷದ ಹುಸ್ನಾ ಎಂಬ ಮಹಿಳೆಯು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ೧೯೩೭(ಶರಿಯಾ) ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಕಾನೂನು ಸಂವಿಧಾನ ಬಾಹಿರವೆಂದು ಘೋಷಿಸಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಅಧಿಕಾರ ಸಿಗಬೇಕೆಂದು ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ. ಸಂವಿಧಾನದಲ್ಲಿ ಸಮಾನತೆಯ ಅಧಿಕಾರವಿದ್ದರೂ ಕೂಡ ಶರಿಯಾ ಕಾನೂನಿನಿಂದಾಗಿ ಹೆಣ್ಣುಮಕ್ಕಳ ಜೊತೆ ತಾರತಮ್ಯ ನಡೆಯುತ್ತಿದೆ. ತಂದೆಯ ಆಸ್ತಿಯಲ್ಲಿ ಸಹೋದರ ಸಹೋದರಿಗೆ ಸಮಾನ ಪಾಲು ಸಿಗುವುದು ಆವಶ್ಯಕವಾಗಿದೆ ಎಂದು ಅವರು ಈ ಅರ್ಜಿಯಲ್ಲಿ ಕೋರಿದ್ದಾರೆ. ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಈ ಅರ್ಜಿಯ ಕುರಿತು ಅಕ್ಟೋಬರದ ಮೂರನೇ ವಾರದಲ್ಲಿ ವಿಚಾರಣೆ ನಡೆಸಲಿದೆ.
ಹುಸ್ನಾ ಅವರ ವಕೀಲರಾದ ಪ್ರತಿಪ ವಿಸೋರಿಯಾ ಅವರು ದಾಖಲಿಸಿರುವ ಅರ್ಜಿಯಲ್ಲಿ, ಶರಿಯಾ ಕಾನೂನು ಅರಬ್ ದೇಶಗಳಲ್ಲಿ ರೂಪಿಸಲಾಗಿದೆ. ಭಾರತದಲ್ಲಿ ವಾಸಿಸುವ ಮುಸಲ್ಮಾನರ ಮೇಲೆ ಅದು ಏಕೆ ಜಾರಿಗೊಳಿಸಬೇಕು? ಸ್ವಾತಂತ್ರ್ಯದ ಬಳಿಕ ಸಂವಿಧಾನದ ಪ್ರಕಾರ ಶರಿಯಾದ ಕಾನೂನಿನಲ್ಲಿ ಸುಧಾರಣೆ ಮಾಡಬೇಕಾಗಿತ್ತು, ಆದರೆ ಅದು ಆಗಲಿಲ್ಲ. ಅರ್ಜಿಯಲ್ಲಿ ಪವಿತ್ರ ಧರ್ಮಗ್ರಂಥದ ಆಧಾರದಲ್ಲಿ ಆಸ್ತಿಯ ಹಂಚಿಕೆಯ ಉಲ್ಲೇಖ ಮಾಡಲಾಗಿದೆ. ಸ್ವಾತಂತ್ರ್ಯದ ನಂತರ ಹಿಂದೂಗಳಿಗಾಗಿ ಹಿಂದೂ ಉತ್ತರಾಧಿಕಾರಿ ಅಧಿನಿಯಮ ೧೯೫೬ ರೂಪಿಸಲಾಯಿತು; ಆದರೆ ಮುಸಲ್ಮಾನರಿಗಾಗಿ ಹೊಸ ಕಾನೂನು ರೂಪಿಸಲಾಗಲಿಲ್ಲ ಎಂದು ಹೇಳಿದ್ದಾರೆ (ದೇಶದಲ್ಲಿ ಎಲ್ಲಕ್ಕಿಂತ ಹೆಚ್ಚು ಕಾಲ ಆಡಳಿತ ನಡೆಸುವ ಕಾಂಗ್ರೆಸ್ ಮುಸಲ್ಮಾನ ಮಹಿಳೆಯರ ಕುರಿತಾದ ದ್ವೇಷವು ಇದರಿಂದ ಗಮನಕ್ಕೆ ಬರುವುದಿಲ್ಲವೇ? – ಸಂಪಾದಕರು).
ಸಂಪಾದಕೀಯ ನಿಲುವುಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಭಾರತದಲ್ಲಿ ಕೂಡಲೇ ಸಮಾನ ನಾಗರೀಕ ಕಾನೂನು ಜಾರಿಗೊಳಿಸುವುದು ಆವಶ್ಯಕ ! |