ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ
ಶ್ರೀನಗರ್ (ಜಮ್ಮು-ಕಾಶ್ಮೀರ) – ಲೆಬೆನಾನಿನ್ ಪ್ರತ್ಯೇಕತಾವಾದಿ ಭಯೋತ್ಪಾದಕ ಸಂಘಟನೆ ಹಿಜಬುಲ್ಲಾ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಸಪ್ಟೆಂಬರ್ ೨೮ ರಂದು ಲೆಬೆನಾನಿನ್ ರಾಜಧಾನಿ ಬೇರುತ್ ಮೇಲೆ ಇಸ್ರೇಲ್ ನಿಂದ ನಡೆದ ವಾಯು ದಾಳಿಯಲ್ಲಿ ಹಿಜಬುಲ್ಲಾ ಪ್ರಮುಖನಾದ ಹಸನ್ ನಸರುಲ್ಲಾ ಹತನಾಗಿದ್ದಾನೆ. ಇದನ್ನು ನಿಷೇಧಿಸಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ತಮ್ಮ ಒಂದು ದಿನದ ಚುನಾವಣಾ ಪ್ರಚಾರ ಸಭೆಯನ್ನು ರದ್ದು ಪಡಿಸುವ ಘೋಷಣೆ ಮಾಡಿದರು. ಮಫ್ತಿ, ಹಾಗೂ ನ್ಯಾಷನಲ್ ಕಾನ್ಫರೆನ್ಸಿನ ಆಗಾ ಸಯ್ಯದ ಮೆಹದಿ ಅವರು ಹಸನ್ ನಸ್ರುಲ್ಲಾ ಮೃತ್ಯುವಿನ ಕುರಿತು ಶೋಕ ಕೂಡ ವ್ಯಕ್ತಪಡಿಸಿದ್ದಾರೆ. ಮುಫ್ತಿ ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ನಾನು ನನ್ನ ಪ್ರಚಾರ ಅಭಿಯಾನವನ್ನು ಒಂದು ದಿನಕ್ಕಾಗಿ ರದ್ದುಪಡಿಸುತ್ತೇನೆ. ಲೆಬನಾನ್ ಮತ್ತು ಗಾಝಾದಲ್ಲಿ ಹುತಾತ್ಮರಾಗಿರುವವರ ಜೊತೆ ವಿಶೇಷವಾಗಿ ನಸರುಲ್ಲಾ ಅವರ ಜೊತೆ ನಾವು ದೃಢವಾಗಿ ಬೆಂಬಲಕ್ಕೆ ನಿಂತಿದ್ದೇವೆ. ಪ್ಯಾಲೆಸ್ತೀನ್ ಮತ್ತು ಲೆಬೆನಾನ್ ಜನರಿಗೆ ಇದು ಬಹಳ ದುಃಖದ ಸಮಯ ಹಾಗೂ ಅವರು ನಡೆಸುತ್ತಿರುವ ಆದರ್ಶಪ್ರಾಯ ಪ್ರತಿಭಟನೆಯ ಸಮಯದಲ್ಲಿ ನಾವು ಅವರ ಜೊತೆಗೆ ಇದ್ದೇವೆ ಎಂದು ಬರೆದಿದ್ದಾರೆ.
ಹಸನ್ ನಸರುಲ್ಲಾ ಮೂರು ದಶಕಗಳಿಗಿಂತಲೂ ಹೆಚ್ಚಿನ ಕಾಲ ಹಿಜಬುಲ್ಲಾ ನೇತೃತ್ವ ವಹಿಸಿದ್ದರು. ಹಿಜಬುಲ್ಲಾ ಕೂಡ ನಸರುಲ್ಲಾ ಹತರಾಗಿರುವುದನ್ನು ದೃಢಪಡಿಸಿದೆ .
ಶ್ರೀನಗರ ಮತ್ತು ಬಡಗಾಮ ಇಲ್ಲಿ ಕೂಡ ಪ್ರತಿಭಟನೆ !
ನಸರುಲ್ಲಾ ಹತ್ಯೆಯನ್ನು ಖಂಡಿಸಿ ರಾಜಧಾನಿ ಶ್ರೀನಗರ ಮತ್ತು ಬಡಗಾಮನ ವಿವಿಧ ಪ್ರದೇಶಗಳಲ್ಲಿ ನೂರಾರು ಜನರು ರಸ್ತೆಗಿಳಿದು ಪ್ರತಿಭಟಿಸಿದರು. ಪ್ರತಿಭಟನಾಕಾರರು ನಸರುಲ್ಲಾನ ಛಾಯಾ ಚಿತ್ರಗಳನ್ನು ಹಿಡಿದು ಇಸ್ರೈಲ್ ವಿರೋಧಿ ಘೋಷಣೆಗಳನ್ನು ಕೂಗಿದರು. (ಯಥಾ ರಾಜಾ ತಥಾ ಪ್ರಜಾ! ಆದ್ದರಿಂದಲೇ ರಾಜನಾಗಲು ಇಚ್ಚಿಸುತ್ತಿರುವ ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳನ್ನು ಶಾಶ್ವತವಾಗಿ ನಿಷೇಧಿಸಬೇಕು ! – ಸಂಪಾದಕರು).
ಸಂಪಾದಕೀಯ ನಿಲುವು
|