ಜೈಲಿನಿಂದ ಬಿಡುಗಡೆಗೊಂಡಿರುವ ಮಾಜಿ ಸಚಿವನಿಗೆ ಪುನಃ ಮಂತ್ರಿ ಹುದ್ದೆ !
ಚೆನ್ನೈ (ತಮಿಳುನಾಡು) – ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ಅವರ ಸಚಿವರಾಗಿದ್ದ ಪುತ್ರ ಉದಯನಿಧಿ ಅವರನ್ನು ರಾಜ್ಯದ ಉಪಮುಖ್ಯಮಂತ್ರಿ ಮಾಡಿದ್ದಾರೆ. ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸೆಪ್ಟೆಂಬರ 29ರಂದು ನಡೆಯಿತು. ಅವರೊಂದಿಗೆ 2 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿರುವ ಸೆಂಥಿಲ ಬಾಲಾಜಿಯವರನ್ನು ಸಚಿವರನ್ನಾಗಿ ಮಾಡಲಾಗಿದೆ. ಡಾ. ಗೋವಿ, ಚೇಝಿಯಾನ, ಥೀರು ಆರ್. ರಾಜೇಂದ್ರನ್ ಮತ್ತು ಥಿರು ಎಸ್.ಎಮ್. ನಾಸರ ಇವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಈ ವರ್ಷ ಫೆಬ್ರವರಿ ಮಧ್ಯದಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕೆಲವು ತಿಂಗಳ ಹಿಂದೆ ಉದಯನಿಧಿ ಸ್ಟಾಲಿನ್ ಅವರು, ‘ಸನಾತನ ಧರ್ಮ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಆದ್ದರಿಂದಲೇ ಇಂತಹ ವಿಷಯಗಳ ವಿರೋಧಿಸುವ ಬದಲು ಅದನ್ನು ಸಂಪೂರ್ಣವಾಗಿ ಬೇರು ಸಹಿತ ಕಿತ್ತೊಗೆಯಬೇಕು. ಡೆಂಗ್ಯೂ, ಮಲೇರಿಯಾ ಮತ್ತು ಕರೋನಾಗಳಂತಹ ರೋಗಗಳನ್ನು ವಿರೋಧಿಸಲು ಸಾಧ್ಯವಾಗುವುದಿಲ್ಲ. ಅದರ ಉಚ್ಛಾಟನೆ ಮಾಡಬೇಕು. ಅದೇ ರೀತಿ ಸನಾತನ ಧರ್ಮವನ್ನೂ ಉಚ್ಚಾಟನೆ ಮಾಡಬೇಕು’ ಎಂದು ಅವರು ಹೇಳಿದ್ದರು.
ಸಂಪಾದಕೀಯ ನಿಲುವುಸನಾತನ ಧರ್ಮದ ಮೇಲೆ ಟೀಕಿಸುವ ದ್ರಮುಕನ ಮನಃಸ್ಥಿತಿ ಎಷ್ಟು ಅಧರ್ಮಿಯಾಗಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ! ಹಿಂದೂದ್ವೇಷ ನರನಾಡಿಗಳಲ್ಲಿ ತುಂಬಿದ ವ್ಯಕ್ತಿ ಒಂದು ರಾಜ್ಯದ ಉಪಮುಖ್ಯಮಂತ್ರಿ ಆಗುವುದು ಆ ರಾಜ್ಯದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! |