Bangladesh Hindu Political Party : ಬಾಂಗ್ಲಾದೇಶ: ತಮ್ಮ ಸ್ವಾಭಿಮಾನದ ರಕ್ಷಣೆಗಾಗಿ ರಾಜಕೀಯ ಪಕ್ಷದ ಸ್ಥಾಪನೆಯ ಸಿದ್ಧತೆಯಲ್ಲಿ ಹಿಂದೂಗಳು

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ (BHBCOP) ಮತ್ತು ಇತರ ಗುಂಪುಗಳ ಹಿಂದೂ ನಾಯಕರು ದೇಶದಲ್ಲಿ ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಪ್ರಸ್ತಾವನೆಯನ್ನು ಮಂಡಿಸಿದ್ದಾರೆ. ಪಕ್ಷ ಅಥವಾ ಸಂಸತ್ತಿನಲ್ಲಿ ಸ್ಥಾನಕ್ಕಾಗಿ ಬೇಡಿಕೆ ಮಂಡಿಸುವ ಬಗ್ಗೆಯೂ ನಾಯಕರು ಚರ್ಚಿಸುತ್ತಿದ್ದಾರೆ. ಹಿಂದೂ ಮತ್ತು ಇತರೆ ಅಲ್ಪಸಂಖ್ಯಾತರ ಹಕ್ಕಿನ ರಕ್ಷಣೆಗಾಗಿ ಮತ್ತು ಅವರ ಅಡೆತಡೆಯಿಲ್ಲದ ಭದ್ರತೆಯನ್ನು ರಕ್ಷಿಸಿಕೊಳ್ಳಲು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಕರೆ ನೀಡಲಾಗುತ್ತಿದೆ.

ಬಿ.ಎಚ್.ಬಿ.ಸಿ.ಓ.ಪಿ. ಅಧ್ಯಕ್ಷೆ ಕಾಜಲ್ ದೇಬನಾಥ್ ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸುದ್ದಿ ಸಂಸ್ಥೆ ಜೊತೆ ಮಾತನಾಡಿ, ಬಾಂಗ್ಲಾದೇಶದ ಹಿಂದೂ ಸಮುದಾಯವು ಸದ್ಯ ಮೂರು ಅಂಶಗಳನ್ನು ಚರ್ಚಿಸುತ್ತಿದೆ. ಮೊದಲನೆಯದಾಗಿ, 1954ರ ಮಧ್ಯದಲ್ಲಿ ಪರಿಚಯಿಸಲಾದ ಚುನಾವಣಾ ವ್ಯವಸ್ಥೆಯನ್ನು ಮತ್ತೆ ಅಸ್ತಿತ್ವಕ್ಕೆ ತರುವುದು, ಎರಡನೆಯದಾಗಿ ಹಿಂದೂಗಳಿಗಾಗಿ ಸ್ವತಂತ್ರ ರಾಜಕೀಯ ಪಕ್ಷವನ್ನು ಸ್ಥಾಪಿಸುವುದು ಮತ್ತು ಮೂರನೆಯದಾಗಿ ಅಲ್ಪಸಂಖ್ಯಾತರಿಗೆ ಸಂಸತ್ತಿನಲ್ಲಿ ಸ್ಥಾನವನ್ನು ಮೀಸಲಿಡುವುದು ಎಂದು ಹೇಳಿದರು.

ಹಿಂದೂ ಸಮಾಜದ ಮುಖಂಡರಾದ ರಂಜನ ಕರ್ಮಾಕರ ಅವರು ಈ ಬಗ್ಗೆ ಮಾತನಾಡಿ, ರಾಜಕೀಯ ಪಕ್ಷ ಸ್ಥಾಪನೆ ಕುರಿತು ಚರ್ಚೆ ಹಾಗೂ ಮತಗಳ ಕೊಡುಕೊಳ್ಳುವಿಕೆ ನಮ್ಮ ಮುಖ್ಯ ವಿಷಯವಾಗಿದೆ. ಆದರೆ ಇನ್ನು ಏನೂ ಅಂತಿಮವಾಗಿಲ್ಲವಾದರೂ, ಚರ್ಚೆಯಿಂದ ಏನು ನಿರ್ಣಯವಾಗುತ್ತದೆ ಎಂಬುದು ಮುಂದೆ ಬಹಿರಂಗವಾಗಲಿದೆ. ಪ್ರಸ್ತಾಪಿಸಲಾಗಿರುವ ರಾಜಕೀಯ ಪಕ್ಷವು ದೇಶದಲ್ಲಿ ಬದಲಾವಣೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಮತ್ತು ಇಲ್ಲಿನ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದೂ ಅವರು ಹೇಳಿದರು.

ಸಂಪಾದಕೀಯ ನಿಲುವು

ರಾಜಕೀಯ ಪಕ್ಷವನ್ನು ಸ್ಥಾಪಿಸುವುದರೊಂದಿಗೆ ಸ್ವಸಂರಕ್ಷಣೆ ಮಾಡಿಕೊಳ್ಳುವುದು ಮತ್ತು ಒಗ್ಗಟ್ಟಾಗಿರುವುದರ ಬಗ್ಗೆಯೂ ಹಿಂದೂಗಳು ಒತ್ತು ನೀಡುವುದು ಅವಶ್ಯಕವಾಗಿದೆ.