Durga Pooja Threat in Bangladesh : ದುರ್ಗಾಪೂಜೆ ಮಾಡದಂತೆ ಹಿಂದೂಗಳಿಗೆ ಬೆದರಿಕೆ !

  • ದುರ್ಗಾ ಪೂಜೆಗಾಗಿ ಹಿಂದುಗಳಿಗೆ ರಜೆ, ಸರಕಾರಿ ಸಹಾಯ ನೀಡುವುದಕ್ಕೂ ಕೂಡ ವಿರೋಧ

  • ಪರಿಸರ ಹಾನಿ ಕಾರಣ ನೀಡಿ ದುರ್ಗಾ ಪೂಜೆಗೆ ಅನುಮತಿ ನಿರಾಕರಿಸಲು ಆಗ್ರಹ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಹಿಂದುಗಳು ದುರ್ಗಾ ಪೂಜೆ ಮಾಡಬಾರದೆಂದು ಜಿಹಾದಿ ಸಂಘಟನೆಗಳಿಂದ ಬೆದರಿಕೆ ನೀಡಲಾಗುತ್ತಿದೆ. ಈ ಹಿಂದೆ ಖುಲನಾ ಜಿಲ್ಲೆಯಲ್ಲಿ ಮೂರುವರೆ ಲಕ್ಷ ರೂಪಾಯಿ ನೀಡಿದರೆ ಮಾತ್ರ ದುರ್ಗಾ ಪೂಜೆಗೆ ಅನುಮತಿ ನೀಡಲಾಗುವುದೆಂದು ಪೂಜಾ ಸಮಿತಿಗಳಿಗೆ ಪತ್ರ ಕಳುಹಿಸಲಾಗಿತ್ತು. ಈಗ ದುರ್ಗಾ ಪೂಜೆಗಾಗಿ ಹಿಂದುಗಳಿಗೆ ರಜೆ ನೀಡಬಾರದು, ಎಂದು ಕೂಡ ಆಗ್ರಹಿಸಲಾಗುತ್ತಿದೆ. ಜಿಹಾದಿ ಸಂಘಟನೆಗಳಿಂದ ಢಾಕಾದಲ್ಲಿ ಪ್ರತಿಭಟನೆ ನಡೆಸಿ ದುರ್ಗಾ ಪೂಜೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಹಿಂದುಗಳು ಅಲ್ಲಿ ಅನೇಕ ವರ್ಷಗಳಿಂದ ದುರ್ಗಾ ಪೂಜೆ ಆಚರಿಸುತ್ತಿದ್ದಾರೆ.

೧. ಇನ್ಸಾಫ್ ಕಿಮಕಾರಿ ಛಾತ್ರ ಜನತಾ ಎಂಬ ಸಂಘಟನೆಯು ಬಂಗಾಳಿ ಭಾಷೆಯ ಫಲಕಗಳನ್ನು ಹಿಡಿದು ನಿಷೇಧ ವ್ಯಕ್ತಪಡಿಸಿದೆ. ಪೂಜೆ ನಡೆಸುವಂತಿಲ್ಲ, ಮೂರ್ತಿ ವಿಸರ್ಜನೆ ಮಾಡಿದರೆ ಜಲ ಮಾಲಿನ್ಯವಾಗುತ್ತದೆ ಎಂದು ಫಲಕ ಹಿಡಿದು ರಸ್ತೆ ತಡೆ ನಡೆಸಿದೆ. ಈ ಸಂಘಟನೆಯು ೧೬ ಕಲಮದ ಆಗ್ರಹದ ಪತ್ರ ಕೂಡ ನೀಡಿದೆ.

೨. ಈ ಹಬ್ಬದಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಧಾರ್ಮಿಕ ಕಾರ್ಯಕ್ರಮಕ್ಕಾಗಿ ರಸ್ತೆ ತಡೆ ಮಾಡುವುದರ ಮೇಲೆ ನಿಷೇಧ ಹೇರುವುದು ಮತ್ತು ಹಬ್ಬ ಉತ್ಸವಗಳಿಗೆ ಸರಕಾರಿ ಧನವನ್ನು ಬಳಸದಿರುವುದು, ಜೊತೆಗೆ ಇತರ ಅನೇಕ ಬೇಡಿಕೆಗಳನ್ನು ಈ ಸಂಘಟನೆಯು ಮಾಡಿದೆ. ಬಾಂಗ್ಲಾದೇಶದಲ್ಲಿ ಇಂತಹ ವಿರೋಧಗಳಾಗುತ್ತಿರುವುದರಿಂದ ಅಲ್ಲಿನ ಹಿಂದುಗಳಲ್ಲಿ ಚಿಂತೆ ಕಾಡುತ್ತಿದೆ.

ದೇವಸ್ಥಾನಗಳಲ್ಲಿ ಭಾರತ ವಿರೋಧಿ ಫಲಕಗಳನ್ನು ಹಾಕುವಂತೆ ಒತ್ತಾಯ !

ಹಿಂದುಗಳು ಬಾಂಗ್ಲಾದೇಶದ ಬಗ್ಗೆ ತಮ್ಮ ನಿಷ್ಠತೆಯನ್ನು ಸಿದ್ಧಗೊಳಿಸುವಂತೆ ಅಲ್ಲಿನ ಜಿಹಾದಿ ಸಂಘಟನೆಗಳು ಒತ್ತಾಯಿಸುತ್ತಿವೆ. ಇದಕ್ಕಾಗಿ ಎಲ್ಲಾ ದೇವಸ್ಥಾನಗಳ ಮೇಲೆ ಭಾರತ ವಿರೋಧಿ ಫಲಕಗಳನ್ನು ಹಾಕಲು ಆಗ್ರಹಿಸಲಾಗುತ್ತಿದೆ. (ಸ್ವಾತಂತ್ರ್ಯವಾದಾಗಿನಿಂದ ಇಲ್ಲಿಯವರೆಗೆ ಭಾರತದಲ್ಲಿನ ಹಿಂದುಗಳು ಎಂದು ಕೂಡ ಮುಸಲ್ಮಾನರ ಮಸೀದಿಯ ಮೇಲೆ ಮತ್ತು ಮದರಸಾಗಳ ಮೇಲೆ ಪಾಕಿಸ್ತಾನಿ ವಿರೋಧಿ ಫಲಕಗಳನ್ನು ಹಾಕುವಂತೆ ಒತ್ತದೆ ಹೇರಿದ್ದರೆ? ಹಿಂದೂ ಸಹಿಷ್ಣುಗಳಾಗಿರುವುದರಿಂದ ಅವರು ಇಂತಹ ಒತ್ತಡವನ್ನು ಎಂದೂ ಹೆರಲಿಲ್ಲ; ಆದರೆ ಇಸ್ಲಾಮಿಕ್ ದೇಶದಲ್ಲಿ ಮಾತ್ರ ಹಿಂದುಗಳಿಗೆ ತಮ್ಮ ನಿಷ್ಠೆ ಸಾಬೀತುಪಡಿಸುವುವಂತೆ ಅನಿವಾರ್ಯಗೊಳಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ ! – ಸಂಪಾದಕರು).

ಸಂಪಾದಕೀಯ ನಿಲುವು

  • ಬಾಂಗ್ಲಾದೇಶ ಈಗ ಇನ್ನೊಂದು ಅಪಘಾನಿಸ್ತಾನ ಮತ್ತು ಪಾಕಿಸ್ತಾನ ಆಗಿದೆ. ಅಲ್ಲಿನ ಹಿಂದುಗಳಿಗೀಗ ಭಾರತಕ್ಕೆ ಬರುವುದು ಬಿಟ್ಟರೆ ಬೇರೆ ಪರ್ಯಾಯ ಉಳಿದಿಲ್ಲ. ಹಾಗಾಗಿ ಕೂಡಲೇ ಭಾರತ ಸರಕಾರವು ಯೋಗ್ಯ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
  • ಇಸ್ಲಾಮಿಕ್ ದೇಶದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾದರೆ ಏನು ಅನುಭವಿಸಬೇಕಾಗುತ್ತದೆ ಎಂಬುದು ಇದನ್ನು ನೋಡಿದರೆ ತಿಳಿಯುತ್ತದೆ. ಜೊತೆಗೆ ಭಾರತದಲ್ಲಿನ ಮತಾಂಧ ಅಲ್ಪಸಂಖ್ಯಾತ ಮುಸಲ್ಮಾನರು ಎಷ್ಟು ಉದ್ಧಟರಾಗಿದ್ದಾರೆ ಎಂಬುದು ತಿಳಿದು ಬರುತ್ತದೆ !